Eshwarappa | ಕಾಂಗ್ರೆಸ್ ಹೋರಾಟಕ್ಕೆ ನಾನು ಜಗ್ಗಲ್ಲ, ಬಗ್ಗಲ್ಲ eshwarappa-react-the-congress-protest shivamogga Saaksha Tv
ಶಿವಮೊಗ್ಗ : ಸಚಿವ ಕೆ.ಎಸ್.ಈಶ್ವರಪ್ಪ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಈಶ್ವರಪ್ಪ, ಕಾಂಗ್ರೆಸ್ ನಾಯಕರ ಹೋರಾಟಕ್ಕೆಲ್ಲಾ ನಾನು ಜಗ್ಗಲ್ಲ, ಬಗ್ಗಲ್ಲ, ಹಿಗ್ಗಲ್ಲ ಎಂದು ತಿರುಗೇಟು ನೀಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ನಾನು ದೇಶದ ಹಿತದೃಷ್ಠಿಯಿಂದ ಹೇಳಿಕೆ ನೀಡಿದ್ದೆ.
ರಾಷ್ಟ್ರ ಧ್ವಜ ತಾಯಿ ಸಮಾನ. ಇದಕ್ಕೆ ಯಾರದರೂ ಅವಮಾನ ಮಾಡಿದರೇ ಅವರು ರಾಷ್ಟ್ರದ್ರೋಹಿ ಎನಿಸಿಕೊಳ್ಳುತ್ತಾನೆ.
ಇದನ್ನು ಈ ಮೊದಲೆ ಸ್ಪಷ್ಟಪಡಿಸಿದ್ದೇನೆ. ಭಗವಾಧ್ವಜದ ವಿವಾದವನ್ನು ಇಲ್ಲಿಗೆ ಬಿಡಿ ಎಂದು ನಾನು ಹೇಳಲ್ಲ.
ಎರಡು ಪಕ್ಷದವರು ಜನರ ಮಧ್ಯೆ ಹೋಗೋಣ ಬನ್ನಿ. ರಾಷ್ಟ್ರಧ್ವಜದ ಬಗ್ಗೆ ಜನರೇ ತೀರ್ಮಾನ ಮಾಡಲಿ ಎಂದು ಹೇಳಿದರು.
ಕೆ.ಎಸ್.ಈಶ್ವರಪ್ಪ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ನಾಯಕರು ಅಧಿವೇಶದಲ್ಲಿ ಧರಣಿ ನಡೆಸುತ್ತಿದ್ದಾರೆ.
ಈಶ್ವರಪ್ಪ ಅವರನ್ನ ವಜಾಗೊಳಿಸಬೇಕು ಎಂದು ಕಾಂಗ್ರೆಸ್ ನಾಯಕರು ಪ್ರತಿಭಟಿಸುತ್ತಿದ್ದಾರೆ.









