Dinesh karthik | ರೋಹಿತ್ ಗೆ ಈಗ 34 ವರ್ಷ.. ಇನ್ನೇಷ್ಟು ದಿನ ಕ್ರಿಕೆಟ್ ಆಡಬಲ್ಲ
ರೋಹಿತ್ ಶರ್ಮಾ ಪ್ರಸ್ತುತ ಮೂರು ಮಾದರಿ ಕ್ರಿಕೆಟ್ ನ ನಾಯಕರಾಗಿದ್ದಾರೆ. ಇದರಿಂದಾಗಿ ಅವರು ವರ್ಷ ಪೂರ್ತಿ ಕ್ರಿಕೆಟ್ ಆಡಬೇಕು. ಇದು ರೋಹಿತ್ ಶರ್ಮಾ ಗೆ ಅತಿ ದೊಡ್ಡ ಸವಾಲ್ ಆಗಿರಲಿದೆ ಎಂದು ಟೀಂ ಇಂಡಿಯಾದ ಹಿರಿಯ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಸ್ವದೇಶದಲ್ಲಾಡಿದ ಎಲ್ಲ ಪಂದ್ಯಗಳಲ್ಲೂ ಗೆಲುವು ಸಾಧಿಸುತ್ತಿದೆ. ಸತತ ಸರಣಿಗಳನ್ನು ಗೆದ್ದು ಮುನ್ನುಗ್ಗುತ್ತಿದೆ. ಈ ಹಿನ್ನಲೆಯಲ್ಲಿ ಟೀಂ ಇಂಡಿಯಾದ ಅನುಭವಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ರೋಹಿತ್ ನಾಯಕತ್ವದ ಬಗ್ಗೆ ಕುತೂಹಲಕಾರಿ ಮಾತುಗಳನ್ನಾಡಿದ್ದಾರೆ. ರೋಹಿತ್ ತಮ್ಮ ಅತ್ಯುತ್ತಮ ತಂತ್ರಗಾರಿಕೆಯಿಂದ ತಂಡವನ್ನು ಮುನ್ನಡೆಸಿದ್ದಾರೆ. ಆದರೆ, ಮುಂದಿನ ದಿನಗಳಲ್ಲಿ ನಾಯಕನಾಗಿ ಕಠಿಣ ಸವಾಲುಗಳನ್ನು ಎದುರಿಸಲು ರೋಹಿತ್ ಸಿದ್ಧವಾಗಬೇಕು. “ನನ್ನ ಪ್ರಕಾರ ರೋಹಿತ್ ತುಂಬಾ ಬುದ್ಧಿವಂತ, ಅವರು ಎಲ್ಲಾ ಮೂರು ಸ್ವರೂಪಗಳಲ್ಲಿ ಮಿಂಚಬಲ್ಲರು ಎಂದಿದ್ದಾರೆ.
ಪ್ರಸ್ತುತ ಅವರು ಎಲ್ಲಾ ಮೂರು ಮಾದರಿಗಳಲ್ಲಿ ನಾಯಕರಾಗಿ ಆಯ್ಕೆಯಾಗಿದ್ದಾರೆ. ಹಾಗಾಗಿ ವರ್ಷವಿಡೀ ಕ್ರಿಕೆಟ್ ಆಡಲೇಬೇಕು. ರೋಹಿತ್ನಂತಹವರಿಗೆ ಇದೊಂದು ದೊಡ್ಡ ಸವಾಲಾಗಿದೆ. ರೋಹಿತ್ ಸರ್ವೋಚ್ಚ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಮೈದಾನದಲ್ಲಿ ತಮ್ಮ ತಂತ್ರಗಾರಿಕೆಯಿಂದ ಪಂದ್ಯದ ರೂಪವನ್ನೇ ಬದಲಿಸಬಲ್ಲರು. ವಿಂಡೀಸ್ ವಿರುದ್ಧದ ಮೂರನೇ ಟಿ20ಯಲ್ಲಿ ರೋಹಿತ್ ಮಾಡಿದ್ದನ್ನು ನಾವು ನೋಡಿದ್ದೇವೆ. ಅವರು ಬೌಲರ್ಗಳನ್ನು ಬದಲಿಸುತ್ತಾ ಬ್ಯಾಟ್ಸ್ಮನ್ಗಳನ್ನ ಕಾಡಿದರು. ಆದರೆ, ರೋಹಿತ್ಗೆ ಈಗಾಗಲೇ 34 ವರ್ಷ. ರೋಹಿತ್ ಎಷ್ಟು ದಿನ ಕ್ರಿಕೆಟ್ನಲ್ಲಿ ಮುಂದುವರಿಯುತ್ತಾರೆ ಎಂಬುದು ಪ್ರಶ್ನೆಯಾಗಿದೆ ಎಂದು ಕಾರ್ತಿಕ್ ಹೇಳಿದ್ದಾರೆ.
dinesh-karthik-on rohit-sharma captaincy









