IPL ಶಿಖರ್ ಅಲ್ಲ ಪಂಜಾಬ್ ಗೆ ಮಯಾಂಕ್ ಕಿಂಗ್..
ಶಿಖರ್ ಅಲ್ಲ ಪಂಜಾಬ್ ಗೆ ಮಯಾಂಕ್ ಕಿಂಗ್.. ಹೌದು.. ಕನ್ನಡಿಗ ಮಯಾಂಕ್ ಅಗರ್ ವಾಲ್ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಮುಂದಿನ ವಾರ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಗಳಿವೆ.
ಮೆಗಾ ಹರಾಜಿನಲ್ಲಿ ಪಂಜಾಬ್ ಪ್ರಾಂಚೈಸಿ ಶಿಖರ್ ಧವನ್ ಅವರನ್ನು ಖರೀಸಿದೆ. ಈ ಹಿನ್ನೆಲೆಯಲ್ಲಿ ಅವರೇ ತಂಡದ ನಾಯಕರಾಗುತ್ತಾರೆ ಎಂದು ಹೇಳಲಾಗುತ್ತಿತ್ತು. ಆದ್ರೆ ಇದೀಗ ಪಂಜಾಬ್ ಮ್ಯಾನೆಜ್ ಮೆಂಟ್ ಮಯಾಂಕ್ ಗೆ ನಾಯಕನ ಪಟ್ಟ ನೀಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಪಂಜಾಬ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್ ನಲ್ಲಿ ಬಲಿಷ್ಠ ತಂಡವನ್ನೇ ಕಟ್ಟಿದೆ. ಗರಿಷ್ಠ ಮೊತ್ತಕ್ಕೆ ಆಟಗಾರರನ್ನು ಕೂಡ ಖರೀದಿ ಮಾಡಿದೆ.
ಲಿಯಾಮ್ ಲಿವಿಂಗ್ ಸ್ಟೋನ್ ಅವರನ್ನು 11.50 ಕೋಟಿ ರೂ. ಜೋನಿ ಬೇರ್ ಸ್ಟೋವ್ ಅವರನ್ನು 6.75 ಕೋಟಿ ರೂ. ಕಾಗಿಸೊ ರಬಾಡ 9.25 ಕೋಟಿ ರೂ. ಹಾಗೂ ಹೊಡಿಬಡಿ ಆಟಗಾರ ಶಾರೂಕ್ ಖಾನ್ ಅವರನ್ನು 9 ಕೋಟಿ ರೂಗೆ ಖರೀದಿ ಮಾಡಿದೆ. ಹಾಗೇ ಶಿಖರ್ ಧವನ್ ಅವರನ್ನು 8.25 ಕೋಟಿ ರೂಪಾಯಿಗೆ ಖರೀದಿ ಮಾಡಿದೆ.
ಇನ್ನೊಂದೆಡೆ ಮಾಯಂಕ್ ಅಗರ್ ವಾಲ್ ಅವರನ್ನು 14 ಕೋಟಿ ಮತ್ತು ಆಶ್ ದೀಪ್ ಅವರನ್ನು 4 ಕೋಟಿ ರೂಪಾಯಿಗೆ ರಿಟೇನ್ ಮಾಡಿಕೊಂಡಿತ್ತು.
ipl-mayank-agarwal- punjab-kings-captian saaksha tv









