ದಾಖಲೆ ಸನಿಹದಲ್ಲಿ ರೋಹಿತ್… ಭೀಮ್ಲಾ ನಾಯ್ಕ್ ಪವರ್ ಸ್ಟ್ರೋಮ್
01. ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ವಿಶ್ವ ದಾಖಲೆ ಬರೆಯುವ ಸನಿಹದಲ್ಲಿದ್ದಾರೆ. ಗುರುವಾರ ನಡೆಯಲಿರುವ ಮೊದಲ ಟಿ20 ಪಂದ್ಯದಲ್ಲಿ 36 ರನ್ ಗಳಿಸಿದರೆ ರೋಹಿತ್ ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ದಾಖಲೆ ಬರೆಯಲಿದ್ದಾರೆ.
Rohit sharma | ವಿಶ್ವ ದಾಖಲೆ ನಿರ್ಮಿಸಲು ರೋಹಿತ್ ಗೆ ಬೇಕು 36 ರನ್..
02. ಕನ್ನಡಿಗ ಮಯಾಂಕ್ ಅಗರ್ ವಾಲ್ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಮುಂದಿನ ವಾರ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಗಳಿವೆ.
IPL ಶಿಖರ್ ಅಲ್ಲ ಪಂಜಾಬ್ ಗೆ ಮಯಾಂಕ್ ಕಿಂಗ್..
03. ‘ಸಂಜು ಸ್ಯಾಮ್ಸನ್ ಅಪ್ರತಿಮ ಪ್ರತಿಭೆ ಹೊಂದಿದ್ದಾರೆ. ಅವರ ಬ್ಯಾಟಿಂಗ್ ನೋಡಿದಾಗಲೆಲ್ಲ ಸಂತಸವಾಗುತ್ತದೆ ಎಂದು ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಶ್ರೀಲಂಕಾ ವಿರುದ್ಧದ ಟಿ 20 ಸರಣಿಗೆ ಟೀಂ ಇಂಡಿಯಾ ಪ್ರಕಟವಾಗಿದ್ದು, ಸಂಜು ಸ್ಯಾಮ್ಸನ್ ಸ್ಥಾನ ಪಡೆದಿದ್ದಾರೆ.
Rohit sharma | ಸಂಜು ಸ್ಯಾಮ್ಸನ್ ಅಪ್ರತಿಮ ಪ್ರತಿಭಾವಂತ ಆಟಗಾರ
04. ಪವನ್ ಕಲ್ಯಾಣ್ ಮತ್ತು ರಾಣಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಭೀಮ್ಲಾ ನಾಯಕ್‘ ಮಲ್ಟಿಸ್ಟಾರರ್ ಸಿನಿಮಾದ ಮತ್ತೊಂದು ಟ್ರೈಲರ್ ರಿಲೀಸ್ ಆಗಿದೆ. ಪ್ರೀ ರಿಲೀಸ್ ಫಂಕ್ಷನ್ ಹಿನ್ನೆಲೆಯಲ್ಲಿ ಅಭಿಮಾನಿಗಳ ಒತ್ತಾಯದ ಮೇರೆಗೆ ಮತ್ತೊಂದು ಟ್ರೇಲರ್ ಬಿಡುಗಡೆಯಾಗಿದೆ. ಸದ್ಯ ರಿಲೀಸ್ ಆಗಿರುವ ಟ್ರೇಲರ್‌ನಲ್ಲಿ ಭೀಮ್ಲಾ ನಾಯಕ್ ಮತ್ತು ಡೇನಿಯಲ್ ಶೇಖರ್ ಪಾತ್ರದಲ್ಲಿ ಪವನ್ ಕಲ್ಯಾಣ್ ಮತ್ತು ರಾಣಾ ಇಬ್ಬರೂ ಮದಗಜಗಳಂತೆ ಗುದ್ದಾಡುತ್ತಿದ್ದಾರೆ.
Pawan Kalyan | ಪವರ್ ಜಾತ್ರೆಗೆ ಮತ್ತಷ್ಟು ಜೋಷ್..
05. ತಮಿಳಿನ ಸ್ಟಾರ್ ಹೀರೋ ಅಜಿತ್ ಕುಮಾರ್ ಅಭಿನಯದ ಎಚ್.ವಿನೋದ್ ನಿರ್ದೇಶನದ ವಲಿಮೈ ಸಿನಿಮಾ ಥಿಯೇಟರ್ ಅಂಗಳಕ್ಕೆ ಬಂದಿದೆ. ಟೀಸರ್, ಟ್ರೈಲರ್ ಮೂಲಕ ಸಿನಿ ಪ್ರಿಯರ ಹೃದಯ ಗೆದ್ದಿದ ಸಿನಿಮಾ ನೋಡಿದ ನೆಟ್ಟಿಗರು ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
Rohit in the record … Bhimla Naik Powerstrom








