Kova Banana Halwa : ಕೋವಾ ಬಾಳೆಹಣ್ಣಿನ ಹಲ್ವಾ ಮಾಡುವ ವಿಧಾನ ಇಲ್ಲಿದೆ!
ನೀವು ಸಿಹಿತಿಂಡಿಗಳನ್ನು ಇಷ್ಟಪಡುತ್ತೀರಾ? ನೀವು ಅಲ್ವಾ ಅನ್ನು ತುಂಬಾ ಇಷ್ಟಪಡುತ್ತೀರಾ? ನಿಮಗೆ ಒಂದೇ ರೀತಿಯ ಹಲ್ವಾ ತಿಂದು ಬೇಜಾರಾಗಿದ್ಯಾ..? ಹಾಗಾದ್ರೆ ಈ ಕೋವಾ ಬಾಳೆಹಣ್ಣಿನ ಹಲ್ವಾ ಟ್ರೈ ಮಾಡಿ.
ಕೋವಾ ಬನಾನಾ ಹಲ್ವಾ ತಯಾರಿಸಲು ಬೇಕಿರುವ ಪದಾರ್ಥಗಳು
ಕೊವಾ – ಅರ್ಧ ಕಪ್
ಬಾಳೆಹಣ್ಣು – 3 (ಸಿಪ್ಪೆ ಸುಲಿದು ಹಿಸುಕಿ)
ಬಾದಾಮಿ ತಿರುಳು – 3 ಟೀಸ್ಪೂನ್
ದಾಲ್ಚಿನ್ನಿ ಪುಡಿ – ಅರ್ಧ ಟೀಚಮಚ
ಸಕ್ಕರೆ – ಅರ್ಧ ಕಪ್
ತುಪ್ಪ – ಅರ್ಧ ಟೀ ಸ್ಪೂನ್
ಡ್ರೈಫ್ರೂಟ್ಸ್ – ಕೆಲವು
ತಯಾರಿಸೋದು
ಮೊದಲು ಸ್ಟವ್ ಆನ್ ಮಾಡಿ.. 3 ಚಮಚ ತುಪ್ಪ ಹಾಕಿ ಬಿಸಿಯಾಗಲು ಬಿಡಿ.
ಬಾಳೆಹಣ್ಣಿನ ಗೊಜ್ಜು ಮತ್ತು ಬಾದಾಮಿ ಗೊಜ್ಜನ್ನು ಹಾಕಿ ಮಿಕ್ಸ್ ಮಾಡುತ್ತಾ ಬೇಯಿಸಬೇಕು
ನಂತರ ಸಕ್ಕರೆ ಸುರಿದು, ಕರಗುವ ತನಕ ಬೆರೆಸಿ.
ಅದಕ್ಕೆ ಕೋವಾ ಮತ್ತು ದಾಲ್ಚಿನ್ನಿ ಪುಡಿ ಹಾಕಿ ಚೆನ್ನಾಗಿ ಕಲಸಿ ಉಳಿದ ತುಪ್ಪ ಹಾಕಿ ಸ್ಟವ್ ಆಫ್ ಮಾಡಿ.
ಮಿಶ್ರಣವನ್ನು ತುಪ್ಪ ಸವರಿದ ಪಾತ್ರೆಯಲ್ಲಿ ಹಾಕಿಕೊಂಡು, ತಣ್ಣಗಾದ ನಂತರ ಬಡಿಸಿ.
‘ಡ್ರೈಫ್ರೂಟ್ಸ್’ ಚೂರುಗಳನ್ನು ಬಡಿಸುವ ವೇಳೆ ಹಲ್ವಾ ಮೇಲಿಡಿ..
tasty-kova-banana-halwa-recipe kannada









