Stock Market – ಹೋಳಿ ಹಬ್ಬಕ್ಕೂ ಮುನ್ನ ಷೇರುಪೇಟೆಯಲ್ಲಿ ಗೂಳಿ ಓಟ
ವಾರದ ಮೂರನೇ ವಹಿವಾಟಿನ ದಿನವಾದ ಬುಧವಾರ, ಷೇರು ಮಾರುಕಟ್ಟೆಯು ಗ್ರೀನ್ ಮಾರ್ಕ್ನಲ್ಲಿ ಓಪನ್ ಆಗಿ ದಿನವಿಡೀ ಲಾಭದಲ್ಲಿ ವಹಿವಾಟು ನಡೆಸಿದೆ. ಮುಂಬೈ ಷೇರುಪೇಟೆಯ 30 ಷೇರುಗಳ ಸೂಚ್ಯಂಕ ಸೆನ್ಸೆಕ್ಸ್ 1039 ಪಾಯಿಂಟ್ ಏರಿಕೆಯೊಂದಿಗೆ 56,817 ಕ್ಕೆ ಕೊನೆಗೊಂಡರೆ, ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ನಿಫ್ಟಿ ಸೂಚ್ಯಂಕ 312 ಪಾಯಿಂಟ್ ಏರಿಕೆಯೊಂದಿಗೆ 16,975 ಕ್ಕೆ ಕೊನೆಗೊಂಡಿತು.
ಇದಕ್ಕೂ ಮುನ್ನ ಬಿಎಸ್ಇ ಸೆನ್ಸೆಕ್ಸ್ 685 ಪಾಯಿಂಟ್ಗಳ ಏರಿಕೆ ಕಂಡು 56,462ಕ್ಕೆ ತಲುಪಿದ್ದರೆ, ಎನ್ಎಸ್ಇ ನಿಫ್ಟಿ ಸೂಚ್ಯಂಕ 196 ಅಂಕ ಜಿಗಿದು 16,859ರಲ್ಲಿ ವಹಿವಾಟು ಆರಂಭಿಸಿದೆ. ವಹಿವಾಟಿನ ವೇಳೆ ಸೆನ್ಸೆಕ್ಸ್ 1047 ಅಂಕಗಳ ಏರಿಕೆ ಕಂಡು 56,824ಕ್ಕೆ ತಲುಪಿದೆ. ಎನ್ಎಸ್ಇ ನಿಫ್ಟಿ ಕೂಡ 315 ಪಾಯಿಂಟ್ಗಳ ಬಲವಾದ ಏರಿಕೆಯೊಂದಿಗೆ 16,978 ಅನ್ನು ತಲುಪಿದೆ.
ಮಂಗಳವಾರದಂದು, ಷೇರು ಮಾರುಕಟ್ಟೆಯ ಎರಡೂ ಸೂಚ್ಯಂಕಗಳು ಕಳೆದ ದಿನ ಆರಂಭಿಕ ಲಾಭವನ್ನು ಕಳೆದುಕೊಂಡು ಕುಸಿತದಲ್ಲಿ ಕ0ನೆಗೊಂಡಿದ್ದವು. ಬಿಎಸ್ಇ ಸೆನ್ಸೆಕ್ಸ್ 709 ಅಂಕ ಕಳೆದುಕೊಂಡು 55,777ಕ್ಕೆ ತಲುಪಿದರೆ, ಎನ್ಎಸ್ಇ ನಿಫ್ಟಿ 225 ಅಂಕ ಕುಸಿದು 16,646ಕ್ಕೆ ತಲುಪಿದೆ.
ಮಂಗಳವಾರ ಮಾರುಕಟ್ಟೆಯ ಪ್ರಬಲ ಕುಸಿತದಿಂದಾಗಿ ಹೂಡಿಕೆದಾರರು ಭಾರೀ ನಷ್ಟವನ್ನು ಅನುಭವಿಸಿದರು. ಷೇರುಪೇಟೆಯ ಕುಸಿತದಿಂದಾಗಿ ಹೂಡಿಕೆದಾರರ ಬಂಡವಾಳ 2.61 ಲಕ್ಷ ಕೋಟಿ ರೂ.ಗೆ ಕುಸಿದಿತ್ತು…
Stock Market Closed: Before Holi, the stock market was buzzing, Sensex rose by 1039 points, Nifty also jumped








