IPL 2022 | ಗ್ರೇಟ್ ಕ್ರಿಕೆಟರ್… ಗ್ರೇಟ್ ಲೀಡರ್ ಆಗಲ್ಲ…
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ಬದಲಾವಣೆ ಕುರಿತು ದೆಹಲಿ ರಣಜಿ ತಂಡದ ಮಾಜಿ ಆಟಗಾರ ರಾಜ್‌ಕುಮಾರ್ ಶರ್ಮಾ ಅವರು ಪ್ರತಿಕ್ರಿಯೆ ನೀಡಿದ್ದು, ಗ್ರೇಟ್ ಕ್ರಿಕೆಟರ್… ಗ್ರೇಟ್ ಲೀಡರ್ ಆಗಲ್ಲ ಎಂದಿದ್ದಾರೆ.
ರವೀಂದ್ರ ಜಡೇಜಾ ಅವರು ಅತ್ಯುತ್ತಮ ಆಲ್ ರೌಂಡರ್ ಎಂಬುದರಲ್ಲಿ ಎರಡು ಮಾತಿಲ್ಲ, ಆದರೆ ಶ್ರೇಷ್ಠ ಆಟಗಾರ ಶ್ರೇಷ್ಠ ನಾಯಕನಾಗಬೇಕೆಂಬ ನಿಯಮವಿಲ್ಲ ಎಂದಿದ್ದಾರೆ.
ಇಂಡಿಯನ್ ಪ್ರಿಮಿಯರ್ ಲೀಗ್ ಆರಂಭಕ್ಕೆ ಇನ್ನೊಂದು ದಿನ ಬಾಕಿ ಇರುವಾಗ ಧೋನಿ ಚೆನ್ನೈ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ.
ಇದು ಎಲ್ಲರಿಗೂ ಅಚ್ಚರಿಯನ್ನ ನೀಡಿದೆ. ಜೊತೆಗೆ ಸ್ವತಃ ಧೋನಿ ಅವರೇ ಜಡೇಜಾಗೆ ನಾಯಕತ್ವದ ಪಟ್ಟ ನೀಡಿದ್ದಾರೆ ಅನ್ನೋದು ಚೆನ್ನೈ ಫ್ರಾಂಚೈಸಿಯಿಂದ ಮಾತು.
ಈ ಕುರಿತು ಪ್ರತಿಕ್ರಿಯಿಸಿರುವ ವಿರಾಟ್ ಕೊಹ್ಲಿ ಬಾಲ್ಯದ ಕೋಚ್ ರಾಜ್ ಕುಮಾರ್ ಶರ್ಮಾ, ರವೀಂದ್ರ ಜಡೇಜಾ ವಿಶ್ವದ ಅತ್ಯುತ್ತಮ ಆಲ್ ರೌಂಡರ್. ಅದರಲ್ಲಿ ಯಾವುದೇ ಸಂಶಯವಿಲ್ಲ.
ಆದರೆ, ಅವರಿಗೆ ನಾಯಕನಾಗಿ ಹೆಚ್ಚಿನ ಅನುಭವವಿಲ್ಲ. ನಿಜ ಹೇಳಬೇಕೆಂದರೆ .. ಒಬ್ಬ ಉತ್ತಮ ಆಟಗಾರ .. ಉತ್ತಮ ನಾಯಕನಾಗುತ್ತಾನೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಅಷ್ಟೇ ಅಲ್ಲ, ಒಬ್ಬ ಶ್ರೇಷ್ಠ ನಾಯಕ ಉತ್ತಮ ಆಟಗಾರನೂ ಆಗದಿರಬಹುದು ಎಂದಿದ್ದಾರೆ.
ಜಡೇಜಾ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಹಾಗಾಗಿ ತಂಡವನ್ನು ಹೇಗೆ ನಿರ್ವಹಿಸಬೇಕು ಎಂಬ ಕನಿಷ್ಠ ತಿಳುವಳಿಕೆ ಇರುವುದು ಸಹಜ.
ಅಲ್ಲದೆ, ಎಂಎಸ್ ಧೋನಿ ತಂಡದಲ್ಲಿದ್ದು, ಜಡೇಜಾಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದಿದ್ದಾರೆ.
ಇನ್ನು ಮಾರ್ಚ್ 26 ರಂದು ಹಾಲಿ ಚಾಂಪಿಯನ್ ಸಿಎಸ್‌ಕೆ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದೊಂದಿಗೆ ಕ್ಯಾಶ್ ರಿಚ್ ಲೀಗ್ ಆರಂಭವಾಗುತ್ತದೆ. ನಾಯಕರಾಗಿ ಜಡೇಜಾ ಮತ್ತು ಶ್ರೇಯಸ್ ಅಯ್ಯರ್ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ.
IPL 2022 rajkumar-sharma-jadeja captaincy









