RCB ತಂಡಕ್ಕೆ ಸ್ಫೋಟಕ ಆರಂಭಿಕ ಆಗಮನ
ಫಾಫ್ ಡುಪ್ಲಸಿಸ್ ನಾಯಕತ್ವದಲ್ಲಿ 15 ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ.
ಆರ್ ಸಿಬಿ ತಂಡ ಈ ಆವೃತ್ತಿಯಲ್ಲಿ ಸೋಲು ಗೆಲುವುಗಳ ಸಮ್ಮಿಲನದೊಂದಿಗೆ ಸಾಗುತ್ತಿದೆ. ಮೊದಲ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸೋತ ರಾಯಲ್ ಚಾಲೆಂಜರ್ಸ್ ಬಳಿಕ ಸತತ ಮೂರು ಗೆಲುವುಗಳೊಂದಿಗೆ ಮುನ್ನುಗ್ಗಿದ್ರು.
ಆದ್ರೆ ಈ ಗೆಲುವಿನ ಓಟಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬ್ರೇಕ್ ಹಾಕಿತು. ಆದ್ರೆ ಆಘಾತದಿಂದ ಬೇಗ ಚೇತರಿಸಿಕೊಂಡ ಆರ್ ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸ್ಟ್ರಾಂಗ್ ಕಮ್ ಬ್ಯಾಕ್ ಮಾಡಿದೆ. ಹೀಗಾಗಿ ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದು ಎಂಟು ಅಂಕಗಳನ್ನು ಪಡೆದುಕೊಂಡಿದೆ.
ಒಟ್ಟಾರೆ ತಂಡದ ವಿಚಾರವಾಗಿ ಮಾತನಾಡೋದಾದ್ರೆ ಇದು ಅದ್ಭುತ ಪ್ರದರ್ಶನ ಹೌದು.. ಆದ್ರೆ ಆರ್ ಸಿಬಿಗೆ ಮೊದಲ ಪಂದ್ಯದಿಂದಲೂ ಟಾಪ್ ಆರ್ಡರ್ ಸಮಸ್ಯೆ ಕಾಡುತ್ತಿದೆ.
ಆರಂಭಿಕರಾಗಿ ಮೈದಾನಕ್ಕೆ ಬರುತ್ತಿರುವ ಫಾಫ್ ಡುಪ್ಲಸಿಸ್ ಮತ್ತು ಯುವ ಬ್ಯಾಟರ್ ಅನೂಜ್ ರಾವತ್ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡುತ್ತಿಲ್ಲ. ಕೆಲವು ಪಂದ್ಯಗಳಲ್ಲಿ ಅರ್ಧಶತಕದ ಜೊತೆಯಾಟ ನೀಡಿದ್ರೂ ಬೇಗ ಕ್ರೀಸ್ ನಿಂದ ಪೆವಿಲಿಯನ್ ನತ್ತ ಹೆಜ್ಜೆ ಹಾಕುತ್ತಿದ್ದಾರೆ.
ಮುಖ್ಯವಾಗಿ ಚೇಸಿಂಗ್ ಅಥವಾ ಟಾರ್ಗೆಟ್ ಸೆಟ್ಟಿಂಗ್ ನಲ್ಲಿ ಪವರ್ ಪ್ಲೇ ನಲ್ಲಿ ರನ್ ಗಳೇ ಬರುತ್ತಿಲ್ಲ. ಪವರ್ ಪ್ಲೇನಲ್ಲಿ ರನ್ ಗಳಿಕೆಗಿಂತ ವಿಕೆಟ್ ಉಳಿಸಿಕೊಳ್ಳಲು ಪರದಾಡುತ್ತಿದ್ದಂತೆ ಕಾಣಿಸುತ್ತಿದೆ. ಇದು ತಂಡದ ಮೇಲೆ ಹಾಗೇ ಮಿಡಲ್ ಆರ್ಡರ್ ಆಟಗಾರರ ಮೇಲೆ ಅನಾವಶ್ಯಕ ಒತ್ತಡ ಏರಿದಂತೆ ಆಗುತ್ತಿದೆ.
ಇದು ಒಂದು ಕಡೆಯಾದ್ರೆ ಆರ್ ಸಿಬಿಯ ಕೀ ಪ್ಲೇಯರ್ ವಿರಾಟ್ ಕೊಹ್ಲಿ ವೈಫಲ್ಯ ತಂಡಕ್ಕೆ ತಲೆನೋವಾಗಿದೆ. ವಿರಾಟ್ ಕೊಹ್ಲಿ ಮೊದಲಿನ ಟಚ್ ನಲ್ಲಿ ಕಾಣಿಸಿಕೊಳ್ಳದೇ ಇರೋದು ತಂಡದ ಮೇಲೆ ಪರಿಣಾಮ ಬೀರುತ್ತಿದೆ. ಮುಖ್ಯವಾಗಿ ವಿರಾಟ್ ಕ್ರೀಸ್ ಕಚ್ಚಿ ಬ್ಯಾಟ್ ಬೀಸದೇ ಇರೋದು ತಂಡಕ್ಕೆ ದೊಡ್ಡ ಕೊರತೆಯಾಗಿದೆ. ಆರ್ ಸಿಬಿ ಈ ಬಾರಿ ಕಪ್ ಗೆಲ್ಲಬೇಕಾದ್ರೆ ಈ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಸಿಗಬೇಕಾಗಿದೆ.
ಈ ನಡುವೆ ಲಕ್ನೋ ವಿರುದ್ದದ ಪಂದ್ಯಕ್ಕೆ ಆರ್ ಸಿಬಿ ಪ್ಲೇಯಿಂಗ್ ಇಲೆವೆನ್ ನಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅನೂಜ್ ರಾವತ್ ಬದಲಿಗೆ ರಜತ್ ಪಟೀದಾರ್ ಅಥವಾ ಮಹಿಪಾಲ್ ಲೋಮ್ರೋರ್ ಅವರಿಗೆ ಅವಕಾಶ ನೀಡಬಹುದು ಎಂದು ಅಂದಾಜಿಸಲಾಗುತ್ತಿದೆ.
ರಜತ್ ಪಟೀದಾರ್ ಈಗಾಗಲೇ ಆರ್ ಸಿಬಿ ಪರ ಆಡಿದ್ದಾರೆ. ಇತ್ತ ಮಹಿಪಾಲ್ ಎಡಗೈ ಬ್ಯಾಟರ್ ಆಗಿದ್ದಾರೆ. ಇಬ್ಬರೂ ಟಾಪ್ ಅಥವಾ ಮಿಡಲ್ ನಲ್ಲಿ ಬ್ಯಾಟ್ ಬೀಸುತ್ತಾರೆ. ಹೀಗಾಗಿ ವಿರಾಟ್ ಫಾಫ್ ಜೊತೆ ಇನ್ನಿಂಗ್ಸ್ ಓಪನ್ ಮಾಡುವ ಸಾಧ್ಯತೆಗಳಿವೆ.
ಆದ್ರೆ ಆರ್ ಸಿಬಿ ಮ್ಯಾನೆಜ್ ಮೆಂಟ್ ಯಾವ ರೀತಿ ನಿರ್ದಾರ ತೆಗೆದುಕೊಳ್ಳುತ್ತೋ ಕಾದು ನೋಡಬೇಕು… ipl 2022 who are the openers of rcb









