ಹುಬ್ಬಳ್ಳಿ ಗಲಭೆ ಪ್ರಕರಣ – ಮತ್ತಿಬ್ಬರು AIMIM ನಾಯಕರ ಬಂಧನ…
ಹುಬ್ಬಳ್ಳಿ ಗಲಭೆ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಎಐಎಂಐಎಂ ನಾಯಕರನ್ನ ಬಂಧಿಸಲಾಗಿದೆ. ಪ್ರಕರಣ ದ ಮಾಸ್ಟರ್ ಮೈಂಡ್ ವಸೀಂ ಪಠಾಣ್ ಬಂಧನವಾಗುತ್ತಿದ್ದಂತೆ ಹುಬ್ಬಳಿಯ ಗಲಭೆಯ ಮೇಲೆ ಎಐಎಂಐಎಂ ಪಕ್ಷದ ಕರಿನೆರಳು ಬಿದ್ದಂತೆ ಕಾಣುತ್ತಿದೆ.
ವಸೀಂ ಪಠಾಣ್ ನೀಡಿದ ಮಾಹಿತಿ ಮೇರೆಗೆ ಎಐಎಂಐಎಂ ಜಿಲ್ಲಾಧ್ಯಕ್ಷ ಮತ್ತು ಹುಬ್ಬಳ್ಳಿ ಘಟಕದ ಜಿಲ್ಲಾಧ್ಯಕ್ಷ ಬಂಧನಕ್ಕೊಳಗಾಗಿದ್ದಾರೆ. ಆರೋಪಿಗಳಿಗಾಗಿ ಪೊಲೀಸರ ತಲಾಶ್ ಮುಂದುವರೆದಿದ್ದು, ಕೆಲ ಸಂಘಟನೆಗಳ ಕೈವಾಡದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗಲಭೆಯ ಮಾಸ್ಟರ್ ಮೈಂಡ್ ಎಂದು ಶಂಕಿಸಲಾಗಿರುವ ಮೌಲ್ವಿ ವಸೀಂ ಪಠಾಂ ನನ್ನ ನ್ಯಾಯಾಲಯ ಐದು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಲಾಗಿದೆ. ಪ್ರಕರಣದಲ್ಲಿ ಒಟ್ಟು ನಾಲ್ವರು ಎಐಎಂಐಎಂ ನಾಯಕರನ್ನು ಬಂಧಿಸಲಾಗಿದೆ. ಒಟ್ಟು ಬಂಧಿತರ ಸಂಖ್ಯೆಯನ್ನು 146 ಕ್ಕೆ ಏರಿಕೆಯಾಗಿದೆ. ಹಿಂಸಾಚಾರದಲ್ಲಿ ಎಐಎಂಐಎಂ ನಾಯಕರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿ ಹಿಂಸಾಚಾರವು ದೊಡ್ಡ ಪಿತೂರಿಯ ಒಂದು ಭಾಗವಾಗಿದೆ ಇಡೀ ವಿಷಯದ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ಭರವಸೆ ನೀಡಿದರು.








