IPL 2022 | ರಾಯಲ್ಸ್ ಬೇಟೆಗೆ RCB ಯ ಪ್ಲೇಯಿಂಗ್ 11
ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಅಹ್ಮದಾಬಾದ್ ನ ಮೊಟೇರಾ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ವಾಲಿಫೇಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಲು ಸಜ್ಜಾಗುತ್ತಿದೆ.
ಕಳೆದ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಬೆಂಗಳೂರು ತಂಡ ಸಂಘಟಿತ ಪ್ರದರ್ಶನ ನೀಡಿದೆ. ಲಕ್ನೋ ವಿರುದ್ಧ 14 ರನ್ ಗಳಿಂದ ಆರ್ ಸಿಬಿ ಜಯ ಸಾಧಿಸಿ ಇದೀಗ ಕ್ವಾಲಿಫೇಯರ್ ಪ್ರವೇಶಿಸಿದೆ.
ಅಂದಹಾಗೆ ಆರ್ ಸಿಬಿ ತಂಡ ಲೀಗ್ ಹಂತದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಎರಡು ಬಾರಿ ಸೆಣಸಿತ್ತು. ಮೊದಲ ಬಾರಿಯ ಗುದ್ದಾಟದಲ್ಲಿ ಬೆಂಗಳೂರು ತಂಡ, ರಾಜಸ್ಥಾನ್ ವಿರುದ್ಧ ಗೆಲುವು ಸಾಧಿಸಿತ್ತು. ಎರಡನೇ ಪಂದ್ಯದಲ್ಲಿ ರಾಜಸ್ಥಾನ್ ಬೆಂಗಳೂರು ವಿರುದ್ಧ ಸೇಡು ತೀರಿಸಿಕೊಂಡಿತ್ತು. ಲೀಗ್ ಹಂತದಲ್ಲಿ ಸಮಬಲದ ಹೋರಾಟ ನಡೆಸಿರುವ ಈ ಉಭಯ ತಂಡಗಳ ಹೋರಾಟ ಇಂದು ಮತ್ತಷ್ಟು ರೋಚಕವಾಗಿರಲಿದೆ.
ಆದ್ರೆ ಲಖನೌ ಸೂಪರ್ ಜಯಂಟ್ಸ್ ವಿರುದ್ದ ಆರ್‌ಸಿಬಿ ಗೆಲುವು ಪಡೆಯಬೇಕೆಂದರೆ, ಆರಂಭಿಕರಾದ ವಿರಾಟ್ ಕೊಹ್ಲಿ ಅಥವಾ ಫಾಫ್ ಡು ಪ್ಲೆಸಿಸ್ ಅವರಲ್ಲಿ ಒಬ್ಬರು ದೀರ್ಘಾವಧಿ ಬ್ಯಾಟ್ ಮಾಡಲೇಬೇಕು. ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಬಾಕಿ ಇರುವ ಬಿಗ್ ಇನ್ನಿಂಗ್ಸ್ ಇಂದು ಹೊರಬರಬೇಕು. ಕಳೆದ ಪಂದ್ಯದ ಹೀರೋ ರಜತ್ ಪಾಟಿದರ್ ಅದೇ ಪ್ರದರ್ಶನವನ್ನು ಮುಂದುವರೆಸಬೇಕು. ಒಂದು ವೇಳೆ ಟಾಪ್ ಆರ್ಡರ್ ಬ್ಯಾಟರ್ ಗಳು ವೈಫಲ್ಯ ಅನುಭವಿಸಿದ್ರೆ, ಕೆಳ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್, ಮಹಿಪಾಲ್ ಲೋಮ್ರೋರ್ ತಂಡಕ್ಕೆ ನೆರವಾಗಲು ಸಿದ್ಧರಾಗಿರಬೇಕು. ಮುಖ್ಯವಾಗಿ ಆರಂಭದ ಪಂದ್ಯಗಳಲ್ಲಿ ಮಿಂಚಿದ್ದ ಶಹಬ್ಬಾಸ್ ಅಹ್ಮದ್ ಇಂದಿನ ಪಂದ್ಯದಲ್ಲಿ ಅವಕಾಶ ಸಿಕ್ಕರೇ ತಮ್ಮ ತಾಕತ್ತು ತೋರಿಸಲು ಸಜ್ಜಾಗಿರಬೇಕು.

ಇನ್ನು ಬೌಲಿಂಗ್ ವಿಭಾಗದ ಬಗ್ಗೆ ಹೇಳೋದಾದ್ರೆ, ಜೋಶ್ ಹೇಝಲ್ ವುಡ್, ವನಿಂದು ಹಸರಂಗ ಎಂದಿನಂತೆ ಇಂದು ಮತ್ತಷ್ಟು ಪರಿಣಾಮಕಾರಿಯಾಗಿ ವಿಕೆಟ್ ಬೇಟೆಯಾಡಬೇಕು. ಹರ್ಷಲ್ ಪಟೇಲ್ ತಮ್ಮ ಬಿಗಿ ಬೌಲಿಂಗ್ ದಾಳಿ ಮುಂದುವರಿಸಬೇಕು. ಇನ್ನು ಬಿಗ್ ಮ್ಯಾಚ್ ಪ್ಲೇಯರ್ ಮೊಹ್ಮದ್ ಸಿರಾಜ್ ಪವರ್ ಪ್ಲೇ ನಲ್ಲಿ ತಂಡಕ್ಕೆ ಬ್ರೇಕ್ ಥ್ರ್ಯೂ ಕೊಡಬೇಕು ಹಾಗೇ ರನ್ ಗಳಿಗೆ ಕಡಿವಾಣ ಹಾಕುವತ್ತ ಗಮನ ಹರಿಸಬೇಕು.
ಇಂದಿನ ಪಂದ್ಯ ಅಹ್ಮದಾಬಾದ್ ನಲ್ಲಿ ನಡೆಯುತ್ತಿರುವುದರಿಂದ ಸ್ಪಿನ್ನರ್ ಗಳಿಗೆ ಹೆಚ್ಚು ಅನುಕೂಲವಾಗಿರುತ್ತದೆ. ಜೊತೆಗೆ ರಾಜಸ್ಥಾನ್ ತಂಡದಲ್ಲಿ ಮೂವರು ಎಡ ಗೈ ಬೌಲರ್ ಗಳಿದ್ದು, ಮ್ಯಾಕ್ಸ್ ವೆಲ್ ಬೌಲಿಂಗ್ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಮುಖ್ಯವಾಗಿ ರಾಜಸ್ಥಾನ್ ತಂಡದ ಇನ್ ಫಾರ್ಮ್ ಬ್ಯಾಟರ್ ಗಳಾದ ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ ಅವರನ್ನ ಬೇಗ ಪೆವಿಲಿಯನ್ ಸೇರಿಸಬೇಕು.
ಆರ್ ಸಿಬಿ ತಂಡದ ಪ್ಲೇಯಿಂಗ್ ಇಲೆವೆಲ್ ಈಗ ಸೆಟ್ ಆಗಿರುವುದರಿಂದ ತಂಡದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ತಂಡವೇ ಇಂದು ಮೈದಾನಕ್ಕೆ ಇಳಿಯಲಿದೆ.
ಆರ್ ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್
ವಿರಾಟ್ ಕೊಹ್ಲಿ
ಫಾಫ್ ಡುಪ್ಲಸಿಸ್
ಗ್ಲೆನ್ ಮ್ಯಾಕ್ಸ್ ವೆಲ್
ರಜತ್ ಪಟಿದಾರ್
ಮಹಿಪಾಲ್ ಲೋಮ್ರೊರ್
ದಿನೇಶ್ ಕಾರ್ತಿಕ್
ಶಹಬ್ಬಾಸ್ ಅಹ್ಮದ್
ವನಿಂದು ಹಸರಂಗ
ಹರ್ಷಲ್ ಪಟೇಲ್
ಜೋಶ್ ಹೆಜಲ್ ವುಡ್
ಮೊಹ್ಮದ್ ಸಿರಾಜ್








