TikTok Comeback – 2 ವರ್ಷಗಳ ನಂತರ ಪುನರಾಗಮನಕ್ಕೆ ಸಿದ್ದವಾದ ಟಿಕ್ ಟಾಕ್ …
2020 ರಲ್ಲಿ ಟಿಕ್‌ಟಾಕ್ ಸೇರಿದಂತೆ ಅನೇಕ ಚೀನೀ ಅಪ್ಲಿಕೇಶನ್‌ಗಳನ್ನ ಭಾರತ ಸರ್ಕಾರವು ನಿಷೇಧಿಸಿತು. ಅವುಗಳಲ್ಲಿ ಜನಪ್ರಿಯ ಮೊಬೈಲ್ ಗೇಮ್ PUBG ಕೂಡ ಸೇರಿಕೊಂಡಿತ್ತು, PUBG ಹಿಂತಿರುಗಿದೆ. ಆದರೆ ಇನ್ನೂ ಅನೇಕ ಅಪ್ಲಿಕೇಶನ್‌ಗಳು ಹಿಂತಿರುಗುವ ಮಾರ್ಗವನ್ನು ಹುಡುಕುತ್ತಿವೆ. ಟಿಕ್‌ಟಾಕ್ ಈಗ ಎರಡು ವರ್ಷಗಳ ನಂತರ ಭಾರತಕ್ಕೆ ಮರಳಲು ಸಿದ್ಧವಾಗಿದೆ ಎಂದು ಸುದ್ದಿಯೊಂದು ವರದಿಯಾಗಿದೆ.
TikTok ನ ಮೂಲ ಕಂಪನಿ ByteDance ಭಾರತದಲ್ಲಿ ಪಾಲುದಾರರನ್ನ ಹುಡುಕುತ್ತಿದೆ. ಈ ಪಾರ್ಟನರ್ ಮೂಲಕ TikTok ಪುನರಾಗಮನಕ್ಕೆ ತಯಾರಿ ನಡೆಸುತ್ತಿದೆ. ಎಂಬ ಮಾಹಿತಿ ಕೇಳಿಬರುತ್ತಿದೆ. ಈ ಪಾಲುದಾರ ಮೂಲಕ ಹೊಸ ಉದ್ಯೋಗಿಗಳನ್ನ ನೇಮಿಸಿಕೊಳ್ಳಲಾಗುತ್ತದೆ.
ಎಕನಾಮಿಕ್ಸ್ ಟೈಮ್ಸ್‌ನ ವರದಿಯ ಪ್ರಕಾರ, ಬೈಟ್‌ಡ್ಯಾನ್ಸ್ ಭಾರತಕ್ಕೆ ಮರಳಲು ಹಿರಾನಂದನಿ ಗ್ರೂಪ್‌ನೊಂದಿಗೆ ಮಾತುಕತೆ ನಡೆಸುತ್ತಿದೆ. ಹಿರಾನಂದನಿ ಗ್ರೂಪ್ ಯೊಟ್ಟಾ ಇನ್‌ಫ್ರಾಸ್ಟ್ರಕ್ಚರ್ ಸೊಲ್ಯೂಷನ್ಸ್ ಹೆಸರಿನಲ್ಲಿ ನಡೆಯುವ ಡೇಟಾ ಸೆಂಟರ್ ವ್ಯವಹಾರವನ್ನು ಹೊಂದಿದೆ. ಟಿಕ್ ಟಾಕ್ ರಿಟರ್ನ್‌ಗೆ ಸಂಬಂಧಿಸಿದಂತೆ ಬೈಟ್‌ಡ್ಯಾನ್ಸ್ ಇನ್ನೂ ಸರ್ಕಾರವನ್ನ ಸಂಪರ್ಕಿಸಿಲ್ಲ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರನ್ನು ವರದಿ ಉಲ್ಲೇಖಿಸಿದೆ.
ಟಿಕ್‌ಟಾಕ್‌ಗೆ ನಿಜವಾಗಿಯೂ ಹಿಂತಿರುಬೇಕಾದರೆ… ಅದು ಭಾರತ ಸರ್ಕಾರದ ನಿಯಮಗಳ ಪ್ರಕಾರ ಕಾರ್ಯನಿರ್ವಹಿಸಬೇಕಾಗುತ್ತದೆ ಮತ್ತು ಭಾರತದಲ್ಲಿ ಡೇಟಾ ಕೇಂದ್ರವನ್ನು ಇರಿಸಬೇಕಾಗುತ್ತದೆ.
TikTok ಭಾರತೀಯ ಮಾರುಕಟ್ಟೆಗೆ ಪುನರಾಗಮನ ಮಾಡಿದ್ರೆ, ಹೊಸ ಅಪ್ಲಿಕೇಷನ್ ಗಳಾದ ಚಿಂಗಾರಿ, MX Taka Tak ಮತ್ತು Instagram ರೀಲ್‌ಗಳೊಂದಿಗೆ ಸ್ಪರ್ಧಿಸಲಿದೆ. ಭಾರತದಲ್ಲಿ Instagram ರೀಲ್‌ಗಳು ಬಹಳ ಜನಪ್ರಿಯವಾಗಿವೆ.








