R Ashok | ಆರ್ ಎಸ್ ಎಸ್ ತಂಟೆಗೆ ಬಂದರೇ ಸುಟ್ಟು ಹೋಗುತ್ತೀರಿ
ಬೆಂಗಳೂರು : ಹನುಮಂತನ ಬಾಲಕ್ಕೆ ಬೆಂಕಿ ಬಿದ್ದು ಲಂಕೆಯೇ ಸುಟ್ಟೋಯ್ತು. ಆರ್ ಎಸ್ ಎಸ್ ಶಕ್ತಿ ಏನು ಅಂತಾ ಇಡೀ ಪ್ರಪಂಚಕ್ಕೆ ಗೊತ್ತು.
ಪ್ಯಾಂಟು, ಚಡ್ಡಿ ಸುಡುವುದೆನ್ನೆಲ್ಲಾ ಬಿಟ್ಟು ಬಿಡಿ, ಆರ್ ಎಸ್ ಎಸ್ ತಂಟೆಗೆ ಬಂದರೇ ನೀವು ಸುಟ್ಟು ಹೋಗುತ್ತೀರಿ, ಆರ್ ಎಸ್ ಎಸ್ ತಂಟೆಗೆ ಬಂದರೆ ಹುಷಾರ್ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಆರ್ ಎಸ್ ಎಸ್ ಚಡ್ಡಿ ಸುಡುವ ಅಭಿಯಾನದ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಬೆಂಗಳೂರಿನಲ್ಲಿ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.

ಆರ್ ಎಸ್ ಎಸ್ ತಂಟೆಗೆ ಬಂದರೆ ಹುಷಾರ್..! ಈ ರೀತಿ ಸುಡೋರೆಲ್ಲ ಮನೆ ಸುಟ್ಟಿಕೊಂಡಿದ್ದಾರೆ. ಹನುಮಂತನ ಬಾಲಕ್ಕೆ ಬೆಂಕಿ ಬಿದ್ದು ಲಂಕೆಯೇ ಸುಟ್ಟೋಯ್ತು.
ಆರ್ ಎಸ್ ಎಸ್ ಶಕ್ತಿ ಏನು ಅಂತಾ ಇಡೀ ಪ್ರಪಂಚಕ್ಕೆ ಗೊತ್ತು. ಪ್ಯಾಂಟು, ಚಡ್ಡಿ ಸುಡುವುದೆನ್ನೆಲ್ಲಾ ಬಿಟ್ಟು ಬಿಡಿ, ಆರ್ ಎಸ್ ಎಸ್ ತಂಟೆಗೆ ಬಂದರೇ ನೀವು ಸುಟ್ಟು ಹೋಗುತ್ತೀರಿ ಎಂದು ಅಶೋಕ್ ವಾರ್ನಿಂಗ್ ನೀಡಿದರು.
ಬಾದಾಮಿ ಕ್ಷೇತ್ರದಲ್ಲಿ ಸ್ವಲ್ಪ ಅಂತರದಿಂದ ಗೆದ್ದಿದ್ದೀರಿ. ಈಗೇನಾದ್ರೂ ಆರ್ ಎಸ್ ಎಸ್ ಬಗ್ಗೆ ಟೀಕಿಸಿದ್ರೆ ಚುನಾವಣೆಯಲ್ಲಿ ಸೋಲುತ್ತೀರಿ ಎಂದು ಸಿದ್ದರಾಮಯ್ಯ ವಿರುದ್ಧ ಆರ್ ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.








