ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನ ಗರ್ಭೀಣಿಯಾಗಿಸಿದ 66 ವರ್ಷದ ವೃದ್ಧನಿಗೆ ಸುಮಾರು 81 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದಂತಹ ಘಟನೆ ಕೇರಳದಲ್ಲಿ ನಡೆದಿದೆ..
ಈತ ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿ, ಆಕೆಯನ್ನು ಗರ್ಭಿಣಿಯನ್ನಾಗಿಸಿದ್ದಾನೆ.. ಕೇರಳದ ತ್ವರಿತಗತಿ ನ್ಯಾಯಾಲಯವು ಆತನಿಗೆ 81 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.. ಅಪರಾಧಿಗೆ 2.2 ಲಕ್ಷ ದಂಡವನ್ನ ವಿಧಿಸಿದೆ..
2020ರ ಅಕ್ಟೋಬರ್ ನಲ್ಲಿ ಬಾಲಕಿ ಆಸ್ಪತ್ರೆಗೆ ದಾಖಲಾದಾಗ, ಆಕೆ ಗರ್ಭಿಣಿಯಾಗಿರುವ ವಿಷಯ ಗೊತ್ತಾಗಿದೆ. ಆಗ ಬಾಲಕಿಗೆ 15 ವರ್ಷ ವಾಗಿತ್ತು. ಸಂತ್ರಸ್ತೆಯ ಹೇಳಿಕೆ ಮತ್ತು ಗರ್ಭಪಾತದ ಬಳಿಕ ಭ್ರೂಣದಿಂದ ಸಂಗ್ರಹಿಸಿದ ಡಿಎನ್ಎ ಪುರಾವೆಗಳ ಆಧಾರದ ಮೇಲೆ ವ್ಯಕ್ತಿಯನ್ನು ಅಪರಾಧಿ ಎಂದು ಘೋಷಿಸಲಾಗಿದೆ.