BJP ಸೇರ್ಪಡೆ ವಿಚಾರ : ಇದು ಮೂರ್ಖತನದ ಮಾತು ಎಂದ ಸಂಸದೆ
ಮಂಡ್ಯ : ಬೆಂಗಳೂರು ಉತ್ತರದಿಂದ ಟಿಕೆಟ್ ಕೇಳಿರುವುದು ಸುಳ್ಳು. ಇದು ಸುಳ್ಳು ಸುದ್ದಿ, ಇದು ಮೂರ್ಖತನದ ಮಾತು ಎಂದು ಬಿಜೆಪಿ ಸೇರ್ಪಡೆ ಬಗ್ಗೆ ಸಂಸದೆ ಸುಮಲತಾ ಅಂಬರೀಷ್ ಸ್ಪಷ್ಟನೆ ನೀಡಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ, ಬೆಂಗಳೂರು ಉತ್ತರದಿಂದ ಟಿಕೆಟ್ ಕೇಳಿರುವುದು ಸುಳ್ಳು. ಇದು ಸುಳ್ಳು ಸುದ್ದಿ, ಇದು ಮೂರ್ಖತನದ ಮಾತು. ಯಾವ ಪಕ್ಷದ ಮುಂದೆಯೂ ನಾನು ನನ್ನ ಮಗನಿಗೆ ಟಿಕೆಟ್ ಬೇಡಿಕೆ ಇಟ್ಟಿಲ್ಲ ಎಂದು ಹೇಳಿದರು.
ಇದೇ ವೇಳೆ ಅಭಿಷೇಕ್ ರಾಜಕೀಯಕ್ಕೆ ಬರುವ ವಿಚಾರವಾಗಿ ಮಾತನಾಡಿ, ಅಭಿಷೇಕ್‌ಗೆ ರಾಜಕೀಯ ಆಸಕ್ತಿ ಇರಬೇಕು. ಈಗ ಸಿನಿಮಾ ಕ್ಷೇತ್ರದಲ್ಲಿ ಅಭಿಷೇಕ್ ಬೆಳೆಯುತ್ತಿದ್ದಾನೆ. ನಾನು ರಾಜಕೀಯದ ಸ್ಟೂಲ್ ಹಾಕೋದಿಲ್ಲ. ಅವನಿಗೆ ಆಫರ್ ಇರೋದು ನಿಜ. ಅದು ಅಭಿಷೇಕ್‌ಗೆ ಬಿಟ್ಟ ವಿಚಾರ ಎಂದು ಹೇಳಿದರು.

ಇನ್ನು ನಾನು ರಾಜಕೀಯಕ್ಕೆ ಬಂದಿರೋದೆ ಮಂಡ್ಯಗಾಗಿ. ರಾಜಕೀಯ ನನಗೆ ಅನಿವಾರ್ಯ ಅಲ್ಲ. ಮಂಡ್ಯ ಜನರ ಋಣ ತೀರಿಸಲು ನಾನು ಮಂಡ್ಯಗೆ ಬಂದಿದ್ದೇನೆ. ನನಗೆ ಮಂಡ್ಯ ಬೇಕು ಎಂದೇ ಮಂಡ್ಯಗೆ ಬಂದಿದ್ದೇನೆ. ಮಂಡ್ಯನಾ ನಾನು ಬಿಡಲ್ಲ, ಮಂಡ್ಯನೂ ನನ್ನ ಬಿಡಲ್ಲ. ನಾನು ಮಂಡ್ಯ ಬಿಡುವ ಹಗಲುಗನಸು ತುಂಬಾ ಜನಕ್ಕೆ ಇದೆ. ಅದಕ್ಕೆ ಹೀಗೆ ಸುಳ್ಳು ಸುದ್ದಿ ಹರಡಿಸುತ್ತುದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ ಹೀಗೆಲ್ಲಾ ಮಾಡುತ್ತಾ ಇದ್ದಾರೆ. ನಂಗೆ ಅಧಿಕಾರದ ಆಸೆ ಇಲ್ಲ, ಹೀಗಾಗಿ ಯಾವುದೇ ಭಯ ನಂಗೆ ಇಲ್ಲ. ಜನ ಆಶೀರ್ವಾದ ಇದ್ರೆ ನಾವು, ಆಶೀರ್ವಾದ ಇಲ್ಲ ಅಂದ್ರೆ ಇಲ್ಲ. ನನಗೆ ಏನು ಕೋಲ್ಡ್ ವಾರ್ ಇಲ್ಲ ಎಂದು ಹೇಳಿದರು.








