ಯಾದಗಿರಿ : ಬುದ್ದಿ ಮಾತು ಹೇಳಲು ಬಂದವರಿಗೆ ಕಿಡಿಗೇಡಿಯೊಬ್ಬ ಪೆಟ್ರೋಲ್ ನಿಂದ ಬೆಂಕಿ ಹಚ್ಚಿದ್ದಾನೆ.. ನಾಲ್ವರಿಗೆ ಬೆಂಕಿ ಹಚ್ಚಿದ್ದು , ಘಟನೆಯಲ್ಲಿ ಓರ್ವ ಸಾವನಪ್ಪಿದ್ದಾನೆ.. ಮೂವರ ಸ್ಥಿತಿಯು ಚಿಂತಾಜನಕವಾಗಿದೆ..
ಈ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿ ನಡೆದಿದೆ.. ನಾಗಪ್ಪ ಎಂಬುವವನು ಸಾವಿಗೀಡಾದ ವ್ಯಕ್ತಿಯಾಗಿದ್ದಾನೆ.. ಹಲವು ದಿನಗಳಿಂದ ಗಂಡ ಶರಣಪ್ಪ, ಹೆಂಡತಿ ಹುಲಗಮ್ಮ ಇಬ್ಬರು ಜಗಳ ಆಡ್ತಾ ಇದ್ದರು. ಹೆಂಡತಿಯ ತವರು ಮನೆಯ ನಾಲ್ಕು ಜನ ಬುದ್ದಿಮಾತು ಹೇಳಲು ಬಂದಿದ್ದರು.
ಈ ವೇಳೆ ಬುದ್ದಿ ಮಾತು ಹೇಳಲು ಬಂದ ನಾಲ್ಕು ಜನರಿಗೆ ಶರಣಪ್ಪ ಪೆಟ್ರೋಲ್ ನಿಂದ ಬೆಂಕಿ ಹಚ್ಚಿದ್ದಾನೆ.. ಸಿದ್ರಾಮಪ್ಪ, ಮುತ್ತಪ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ.. ಗಾಯಾಳುಗಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.








