Bangalore : ಅಭಿವೃದ್ಧಿ ಮೂಲಕ ಮತದಾರರ ಋಣ ತೀರಿಸುತ್ತೇನೆ : ಸಚಿವ ವಿ.ಸೋಮಣ್ಣ
ಬೆಂಗಳೂರು : ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ, ನಾಯಂಡಹಳ್ಳಿ ವಾರ್ಡ್ ನೂತನವಾಗಿ ನಿರ್ಮಿಸಲಾದ ಸುವರ್ಣಭವನ ಹಾಗೂ ಸಾರ್ವಜನಿಕ ಗ್ರಂಥಾಲಯವನ್ನು ವಸತಿ ಸಚಿವ ವಿ.ಸೋಮಣ್ಣ ಅವರು ಉದ್ಘಾಟಿಸಿದ್ದರು.
ಬಳಿಕ ವಿ. ಸೋಮಣ್ಣ ರವರು ಮಾತನಾಡಿ, ಕಳೆದ ನಾಲ್ಕು ವರ್ಷದಲ್ಲಿ ಶಾಸಕನಾದ ಮೇಲೆ ಪ್ರತಿದಿನ ಜನರ ನಡುವೆ ಒಡನಾಟ ಮತ್ತು ಕ್ಷೇತ್ರ ದಲ್ಲಿ ಓಡಾಟ ಮಾಡಿ ಜನರ ಆಶಯದಂತೆ ಅಭಿವೃದ್ಧಿ ಮಾಡೋಕೆ ಶ್ರಮಿಸಿದ್ದೇನೆ.
300ಕೋಟಿಗೂ ಹೆಚ್ಚು ಅನುದಾನ ತಂದು ಗ್ರಂಥಾಲಯ, ಪಾರ್ಕ್, ಶುದ್ಧ ಕುಡಿಯುವ ಘಟಕ ದೇವಾಲಯ ಜೀರ್ಣೋದ್ದಾರ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗಿದೆ.
ದಾಸರಹಳ್ಳಿ ಆಸ್ಪತ್ರೆಯನ್ನ ಮೂರು ತಿಂಗಳಲ್ಲಿ ಲೋಕರ್ಪಣೆ ಮಾಡಲಾಗುವುದು.

ಗ್ರಂಥಾಲಯದಿಂದ ಬಡ ಮಕ್ಕಳಿಗೆ ಇದರ ಉಪಯೋಗ ಆಗುತ್ತೆ. 15ಜುಲೈ ರಂದು ಮುಖ್ಯಮಂತ್ರಿ ಬೊಮ್ಮಾಯಿರವರು ವಿವಿಧ ಕಾಮಗಾರಿಗಳ ಲೋಕಾರ್ಪಣೆ ಮಾಡಲಿದ್ದಾರೆ.
ಕೆಎಎಸ್, ಐಎಎಸ್, ಐಪಿಎಸ್, ಕೋರ್ಸ್ ಮಾಡುವ ಕ್ಷೇತ್ರದ ಆಕಾಂಕ್ಷಿಗಳಿಗೆ ಇದು ಸಹಾಯಕವಾಗಲಿದೆ.
ಬಡವರ ಮಕ್ಕಳು ಸಹ ವಿದ್ಯಾವಂತರಾಗಬೇಕು, ಡಯಾಲಿಸಿಸ್ ಕೇಂದ್ರದಿಂದ ಪ್ರತಿದಿನ ನೂರಕ್ಕೂ ಹೆಚ್ಚು ಜನರಿಗೆ ಡಯಾಲಿಸಿಸ್ ಮಾಡಿಸುತಿದ್ದಾರೆ.
ಜನರು ಕೊಟ್ಟ ಅವಕಾಶ ದಿಂದ ಇದೆಲ್ಲ ಮಾಡೋಕೆ ಸಾಧ್ಯ ವಾಯಿತು ಎಂದರು.








