ಹೂ ಅಡ್ಡ ಹಿಡಿದು ಬೆತ್ತಲೆ ಬಂದ ಸಾಲಾ ಕ್ರಾಸ್ ಬ್ರೀಡ್ ದೇವರಕೊಂಡ…..
ಟಾಲಿವುಡ್ ನಲ್ಲಿ ರೌಡಿ ಸ್ಟಾರ್ ಎಂದೇ ಗುರುತಿಸಿಕೊಂಡಿರುವ ವಿಜಯ್ ದೇವರಕೊಂಡ ತಮ್ಮ ಮುಂಬರುವ ಲೈಗರ್ ಚಿತ್ರದ ಪೋಸ್ಟರ್ ಹಂಚಿಕೊಂಡಿದ್ದಾರೆ. ಪೋಸ್ಟರ್ ನೋಡಿ ಪ್ರೇಕ್ಷಕರು ಬೆಚ್ಚಿಬಿದ್ದಿದ್ದಾರೆ. ಪ್ಯಾನ್ ಇಂಡಿಯಾ ಚಿತ್ರದ ಪೋಸ್ಟರ್ ಒಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
‘ಅರ್ಜುನ್ ರೆಡ್ಡಿ’ ಚಿತ್ರದ ಮೂಲಕ ಟಾಲಿವುಡ್ ನಲ್ಲಿ ರೌಡಿ ಸ್ಟಾರ್ ಹೊರ ಹೊಮ್ಮಿರುವ ವಿಜಯ್ ದೇವರಕೊಂಡ. ಪ್ರಸ್ತುತ, ‘ಲೈಗರ್’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ‘ಸಾಲಾ ಕ್ರಾಸ್ ಬ್ರೀಡ್’ ಎಂಬುದು ಈ ಚಿತಕ್ಕಿರುವ ಟ್ಯಾಗ್ ಲೈನ್..
‘ಸಾಲಾ ಕ್ರಾಸ್ ಬ್ರೀಡ್ ಎಂಬ ಟ್ಯಾಗ್ ಲೈನ್ ಗೆ ತಕ್ಕಂತೆ ವಿಜಯ್ ದೇವರಕೊಂಡ ಲೈಗರ್ ಚಿತ್ರದ ಬೆತ್ತಲೆ ಪೋಸ್ಟರ್ ಹಂಚಿಕೊಂಡಿದ್ದಾರೆ. ಮಾನ ಮುಚ್ಚಿಕೊಳ್ಳಲು ಗುಲಾಬಿಯ ಹೂಗಳ ಗುಚ್ಚ ಬಿಟ್ಟರೆ ತುಂಡು ಬಟ್ಟೆಯೂ ಇಲ್ಲದ ಬೋಲ್ಡ್ ಪೋಟೋವನ್ನ ಸೋಶೀಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.
A Film that took my everything.
As a performance, Mentally, physically my most challenging role.I give you everything!
Coming Soon#LIGER pic.twitter.com/ljyhK7b1e1— Vijay Deverakonda (@TheDeverakonda) July 2, 2022
ಡ್ಯಾಶಿಂಗ್ ಡೈರೆಕ್ಟರ್ ಪೂರಿ ಜಗನ್ನಾಥ್ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದು, ಬಾಕ್ಸಿಂಗ್ ಬ್ಯಾಗ್ರೌಂಡ್ ಇಟ್ಟುಕೊಂಡು ಸ್ಪೋರ್ಟ್ಸ್ ಆಕ್ಷನ್ ಡ್ರಾಮವನ್ನ ತೆರೆಗೆ ತರುತ್ತಿದ್ದಾರೆ. ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ಈ ಚಿತ್ರದ ಮೂಲಕ ದಕ್ಷಿಣಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ವಿಶ್ವ ಪ್ರಸಿದ್ಧ ಬಾಕ್ಸಿಂಗ್ ಚಾಂಪಿಯನ್ ಮೈಕ್ ಟೈಸನ್ ಲೈಗರ್’ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪುರಿ – ಚಾರ್ಮಿ – ಕರಣ್ ಜೋಹರ್ ಒಟ್ಟಾಗಿ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಲೈಗರ್ ಸುಮಾರು 120 ಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಿದ್ದು, ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಆಗಸ್ಟ್ 25 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಲೈಗರ್’ ಚಿತ್ರದ ಪ್ರಚಾರದ ಭಾಗವಾಗಿ ವಿಜಯ್ ಗೆ ಸಂಬಂಧಿಸಿದ ಬೋಲ್ಡ್ ಪೋಸ್ಟರ್ ಬಿಡುಗಡೆಯಾಗಿದೆ. ಪೋಸ್ಟರ್ ನೋಡಿದ ಪ್ರೇಕ್ಷಕರು ಶಾಕ್ ಆಗಿದ್ದಾರೆ.






