ಅನ್ನಭಾಗ್ಯ ಅಕ್ಕಿ ಕಳ್ಳಸಾಗಾಣೆ ಜಾಲ ಪತ್ತೆ ಹಚ್ಚಿದ ಕಂಪ್ಲಿ ಶಾಸಕ ಗಣೇಶ್…
ಅನ್ನಭಾಗ್ಯ ಅಕ್ಕಿನ್ನ ಹೊರರಾಜ್ಯಕ್ಕೆ ಕಳ್ಳಸಾಗಾಣೆ ಮಾಡುತ್ತಿದ್ದ ದೊಡ್ಡ ಜಾಲವೊಂದು ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಪತ್ತೆಯಾಗಿದೆ. ಕಂಪ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಜೆ.ಎನ್.ಗಣೇಶ್ ಅವರು ರಾತ್ರೋರಾತ್ರಿ ದಾಳಿ ಮಾಡಿ ಅಕ್ರಮ ಕಳ್ಳಸಾಗಾಣೆ ಜಾಲವನ್ನ ಪತ್ತೆಹಚ್ಚಿದ್ದಾರೆ.
ಶೆಡ್ನಲ್ಲಿ 50 ಕೆ.ಜಿ ತೂಕದ ಅಂದಾಜು ಒಂದು ಸಾವಿರ ಅಕ್ಕಿ ಚೀಲಗಳು ದಾಸ್ತಾನಿದೆ. ಬಡವರಿಗೆ ವಿತರಣೆಯಾಗಬೇಕಾದ ಅನ್ನಭಾಗ್ಯ ಅಕ್ಕಿಯನ್ನು ಕಳೆದ ಒಂದು ವರ್ಷದಿಂದ ಗುಜರಾತ್ ಮತ್ತು ಬಿಹಾರ ರಾಜ್ಯಗಳಿಗೆ ಈ ಭಾಗದಿಂದ ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದೆ. ಇದರ ಹಿಂದೆ ಪ್ರಭಾವಿಗಳ ಕೈವಾಡವಿದ್ದು, ಕ್ರಮ ತೆಗೆದುಕೊಳ್ಳಬೇಕು” ಎಂದು ಶಾಸಕರು ಆಗ್ರಹಿಸಿದರು.
ಒಂದು ಲಾರಿಯಲ್ಲಿ ನಾಲ್ಕು ನೂರು ಚೀಲ ಅಕ್ಕಿ ಸಾಗಾಟ ಮಾಡಲಾಗುತ್ತಿದ್ದು, ದಿನಕ್ಕೆ ಒಂದುವರೆ ಲಕ್ಷ ಲಾಭ ಪಡೆಯೋ ಪ್ರಭಾವಿ ನಾಯಕ ಯಾರು ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ. ದಾಳಿ ಮಾಡುತ್ತಿದ್ದಂತೆ ಸ್ಥಳದಿಂದ ಹಲವು ಖದೀಮರು ಓಡಿ ಹೋಗಿದ್ದು, ನಾಲ್ವರನ್ನ ಶಾಸಕರ ತಂಡ ವಶಕ್ಕೆ ಪಡೆದಿದೆ.
ಶಾಸಕರ ದಾಳಿ ಬಳಿಕ ಬಂದ ಪೊಲೀಸರು ಸಾವಿರಾರು ಚೀಲ ಪಡಿತರ ಅಕ್ಕಿ ಹಾಗೂ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.








