BJP ಅಂದರೆ “ಸಿಲ್ಲಿ ಸೋಲ್ಸ್”ಗಳ ಕೂಟ!
ಬೆಂಗಳೂರು : ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸಕಾರಣವಿಲ್ಲದೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಎರಡನೇ ಬಾರಿಗೆ ಜಾರಿ ನಿರ್ದೇಶನಾಲಯ ವಿಚಾರಣೆಗೆ ಕರೆದಿದೆ ಎಂದು ಆರೋಪಿಸಿ ಜುಲೈ 26 ರಂದು ಕಾಂಗ್ರೆಸ್ ಮೌನ ಸತ್ಯಾಗ್ರಹಕ್ಕೆ ಮುಂದಾಗಿದೆ.
ಈ ಸಂಬಂಧ ರಾಜ್ಯ ಬಿಜೆಪಿ – ಕಾಂಗ್ರೆಸ್ ಪಕ್ಷಗಳು ಟ್ವಿಟ್ಟರ್ ನಲ್ಲಿ ಯುದ್ಧ ಆರಂಭಿಸಿದೆ. ಕಾಂಗ್ರೆಸ್ ನ ಮೌನ ಸತ್ಯಾಗ್ರಹವನ್ನು ಟೀಕಿಸುತ್ತಾ ಬಿಜೆಪಿ, ಕಳ್ಳನಾಯಕಿಯ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಮೌನ ಪ್ರತಿಭಟನೆ ಮಾಡಲು ಸಿದ್ಧತೆ ನಡೆಸಿದೆ. ಕಾಂಗ್ರೆಸ್ಸಿಗರು ದಿವ್ಯ ಮೌನಕ್ಕೆ ಶರಣಾಗುತ್ತಿರುವುದು ಹೊಸತೇನಲ್ಲ.ಈ ಹಿಂದೆ ಹಿಂದೂಗಳ ಮೇಲೆ, ದಲಿತರ ಮೇಲೆ, ಮಹಿಳೆಯರ ಮೇಲೆ, ರೈತರ ಮೇಲೆ, ಸೈನಿಕರ ಮೇಲೆ, ಬಡವರ ಮೇಲೆ ದೌರ್ಜನ್ಯವಾದಾಗ ಕಾಂಗ್ರೆಸ್ ಬಾಯಿ ಬಿಟ್ಟಿತ್ತೇ ಎಂದು ಪ್ರಶ್ನಿಸಿದೆ. ದಲಿತ ನಾಯಕ, ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆ ಮೇಲೆ ಮತಾಂಧರು ದಾಳಿ ನಡೆಸಿದಾಗ, ಅಲ್ಪಸಂಖ್ಯಾತರ ಓಲೈಕೆಗಾಗಿ ಕಾಂಗ್ರೆಸ್ ಮೌನವಾಗಿತ್ತು. ದಲಿತ ನಾಯಕನ ವಿಚಾರದಲ್ಲೂ ಕಾಂಗ್ರೆಸ್ ಮೌನವಾಗಿದ್ದೇಕೆ?
ಬಿಜೆಪಿ ಅಂದರೆ "ಸಿಲ್ಲಿ ಸೋಲ್ಸ್"ಗಳ ಕೂಟ!#BrashtaJanataPaksha ದಲ್ಲಿ ಕಳ್ಳ ನಾಯಕರು, ಖಳ ನಾಯಕರೇ ತುಂಬಿಕೊಂಡಿದ್ದಾರೆ!
ಹಲವು ಪತ್ರ ತಲುಪಿದರೂ
ಕರ್ನಾಟಕದ ಲಂಚ ಮಂಚದ ಸರ್ಕಾರದ ಬಗ್ಗೆ ದೆಹಲಿಯಲ್ಲಿರುವ
ಬಿಜೆಪಿಯ ಕಳ್ಳರ ಗುರು ಮೌನದ ಮೂಲಕ ಭ್ರಷ್ಟಾಚಾರಕ್ಕೆ ಸಮ್ಮತಿ ನೀಡಿದ್ದಾರೆ.ವೈಫಲ್ಯಗಳಿಗೆ ಮೌನವೇ ಮದ್ದು ಎಂದು ತಿಳಿದಿರುವಂತಿದೆ!
— Karnataka Congress (@INCKarnataka) July 25, 2022
ವ್ಯಾಪಾರಿಯೊಬ್ಬನ ಕಲ್ಲಂಗಡಿ ಹಣ್ಣು ಕೊಚ್ಚಿ ಹಾಕಿದಾಗ ಆರ್ಭಟಿಸಿ ಬೊಬ್ಬಿರಿದ ಕಾಂಗ್ರೆಸ್ ನಾಯಕರು, ರಾಜಸ್ಥಾನದ ಕನ್ನಯ್ಯ ಲಾಲ್ ಅವರನ್ನು ಕೊಚ್ಚಿಹಾಕಿದ್ದಾಗ, ಚಾಮರಾಜಪೇಟೆಯ ಚಂದುವನ್ನು ಹತ್ಯೆಗೈದಾಗ ಮೌನ ಪ್ರತಿಭಟನೆ ಮಾಡಿದರು. ಹಿಂದೂ ದ್ವೇಷಿ ಕಾಂಗ್ರೆಸ್ಸಿಗರು, ಅವರಿಗೆ ಬೇಕಾದಾಗ ಮಾತ್ರ ಮೌನ ಸತ್ಯಾಗ್ರಹ ಮಾಡುತ್ತಾರೆ ಎಂದು ಕಿಡಿಕಾರಿತ್ತು.
ಇದಕ್ಕೆ ಇದೀಗ ತಿರುಗೇಟು ನೀಡಿರುವ ರಾಜ್ಯ ಕಾಂಗ್ರೆಸ್, ಬಿಜೆಪಿ ಅಂದರೆ “ಸಿಲ್ಲಿ ಸೋಲ್ಸ್”ಗಳ ಕೂಟ! #BrashtaJanataPaksha ದಲ್ಲಿ ಕಳ್ಳ ನಾಯಕರು, ಖಳ ನಾಯಕರೇ ತುಂಬಿಕೊಂಡಿದ್ದಾರೆ! ಹಲವು ಪತ್ರ ತಲುಪಿದರೂ ಕರ್ನಾಟಕದ ಲಂಚ ಮಂಚದ ಸರ್ಕಾರದ ಬಗ್ಗೆ ದೆಹಲಿಯಲ್ಲಿರುವ ಬಿಜೆಪಿಯ ಕಳ್ಳರ ಗುರು ಮೌನದ ಮೂಲಕ ಭ್ರಷ್ಟಾಚಾರಕ್ಕೆ ಸಮ್ಮತಿ ನೀಡಿದ್ದಾರೆ. ವೈಫಲ್ಯಗಳಿಗೆ ಮೌನವೇ ಮದ್ದು ಎಂದು ತಿಳಿದಿರುವಂತಿದೆ ಎಂದು ಬರೆದುಕೊಂಡಿದೆ.








