Haveri | ವಿಷ ಸೇವಿಸಿ ರೈತ ಸಾವು – ರೈತರ ಪ್ರತಿಭಟನೆ
ಹಾವೇರಿ : ವಿಷ ಸೇವಿಸಿ ರೈತ ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆಯ ನಾಗೇನಹಳ್ಳಿಯಲ್ಲಿ ನಡೆದಿದೆ. 30 ವರ್ಷದ ದರ್ಶನ್ ನಾಗಪ್ಪ ಮುದ್ದಪ್ಪನವರ ಮೃತ ವ್ಯಕ್ತಿಯಾಗಿದ್ದಾರೆ.
ದರ್ಶನ್ ನಾಗಪ್ಪ ಮುದ್ದಪ್ಪನವರು ವಾರದ ಹಿಂದೆ ವಿಷ ಸೇವಿಸಿದ್ದು, ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಇಂದು ಕೊನೆಯುಸಿರೆಳೆದಿದ್ದಾರೆ.

ಅಂದಹಾಗೆ ದರ್ಶನ್ ನಾಗಪ್ಪ ಮುದ್ದಪ್ಪನವರ ಮಾಕನೂರಿನ ಯೂನಿಯನ್ ಬ್ಯಾಂಕಿನಿಂದ ಸಾಲ ಪಡೆದಿದ್ದರು. ಒಟಿಎಸ್ ಯೋಜನೆಯಿಂದ ವಂಚಿತರಾಗಿದ್ದರು. ಈ ಸಂಬಂಧ ರೈತರ ಹೋರಾಟದಲ್ಲೂ ಪಾಲ್ಗೊಂಡಿದ್ದರು.
ದರ್ಶನ್ ಸಾವಿಗೆ ಮಾಕನೂರಿನ ಯೂನಿಯನ್ ಬ್ಯಾಂಕಿನ ಅಧಿಕಾರಿಗಳು ಕಾರಣ ಎಂದು ರೈತ ಮುಖಂಡರು ಆರೋಪಿಸಿದ್ದಾರೆ. ಅಲ್ಲದೇ ಬ್ಯಾಂಕಿನ ಮುಂದೆ ಶವ ಇಟ್ಟು ಪ್ರತಿಭಟಿನೆ ನಡೆಸಲು ಮುಂದಾಗಿದ್ದರು.
ಇದರ ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಧಾವಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಪ್ರತಿಭಟನೆಗೆ ಮುಂದಾಗಿದ್ದ ರೈತರನ್ನು ಮನವೊಲಿಸಲು ಯತ್ನಿಸಿದರು.








