ADVERTISEMENT
Friday, October 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 5

Author Special Series : ನಿಗೂಢ ಟಿವಿ‌ ಜಗತ್ತು - ಅಧ್ಯಾಯ 5 , ಫ್ಯಾಂಟಸಿ , ಥ್ರಿಲ್ಲಿಂಗ್ ಕಥೆ.. ಮತ್ತೊಂದು ಜಗತ್ತಿನ ಜೊತೆಗೆ ನಿಮ್ಮನ್ನ ಸೇರಿಸುವ ಕಥೆ..

Namratha Rao by Namratha Rao
August 17, 2022
in Newsbeat, Saaksha Special, ಎಸ್ ಸ್ಪೆಷಲ್
Saakshatv Special series

Saakshatv Special series

Share on FacebookShare on TwitterShare on WhatsappShare on Telegram

(  ಹಿಂದಿನ ಅಧ್ಯಾಯಗಳನ್ನ ಓದಲು , ಲೇಖನದ ಕೊನೆಯಲ್ಲಿ ನೀಡಲಾಗಿರೋ  ಲಿಂಕ್ ಗಳನ್ನ ಕ್ಲಿಕ್ ಮಾಡಿ )

ಅಧ್ಯಾಯ – 5

Related posts

ಬೊಗಳುವ ಯತ್ನಾಳ್ ಗೆ ಕಚ್ಚುವ ತಾಕತ್ತಿಲ್ಲ: ನಿಮ್ಮ ಡಿಎನ್‌ಎ ಬಗ್ಗೆ ನಮಗೆ ಸಂಶಯವಿದೆ- ಕಾಂಗ್ರೆಸ್ ನಾಯಕರನ್ನ ಟೀಕಿಸುವ ಮುನ್ನ ನಿಮ್ಮ ಮೂಲ ನೋಡಿ ಎಂದ ಪ್ರದೀಪ್ ಈಶ್ವರ್

ಬೊಗಳುವ ಯತ್ನಾಳ್ ಗೆ ಕಚ್ಚುವ ತಾಕತ್ತಿಲ್ಲ: ನಿಮ್ಮ ಡಿಎನ್‌ಎ ಬಗ್ಗೆ ನಮಗೆ ಸಂಶಯವಿದೆ- ಕಾಂಗ್ರೆಸ್ ನಾಯಕರನ್ನ ಟೀಕಿಸುವ ಮುನ್ನ ನಿಮ್ಮ ಮೂಲ ನೋಡಿ ಎಂದ ಪ್ರದೀಪ್ ಈಶ್ವರ್

October 9, 2026
ತಮಿಳುನಾಡಿಗೆ ಮತ್ತೆ 15 ದಿನ ಕಾವೇರಿ ನೀರು: ನಿತ್ಯ 3,000 ಕ್ಯೂಸೆಕ್ ಹರಿಸಲು CWRC ಶಿಫಾರಸು

ತಮಿಳುನಾಡಿಗೆ ಮತ್ತೆ 15 ದಿನ ಕಾವೇರಿ ನೀರು: ನಿತ್ಯ 3,000 ಕ್ಯೂಸೆಕ್ ಹರಿಸಲು CWRC ಶಿಫಾರಸು

October 9, 2026

ಅವರೆಲ್ಲಾ ಕಣ್ಣು ಬಿಟ್ಟಾಗಲೇ ಅರಿವಾಗಿದ್ದು ಹುಡುಗಿಗೆ.. ಅವರೆಲ್ಲಾ ಅಸಲಿಗೆ ಮನುಷ್ಯರೇ ಅಲ್ಲ…

ಆಗಲೇ  ಧ್ವನಿ ಕೇಳಿದ್ದು ಒಂದು ಹುಡುಗಿಯದ್ದು ,,, ರೋಬೋಟಿಕ್ ಧ್ವನಿ

Well come to  Life Game World

you Are In Stage 1

Stage 1 – Deadly Zoombies

ಧ್ವನಿ ಕೇಳಿದವಳಿಗಿದ್ದ ಗೊಂದಲಕ್ಕೆ ಉತ್ತರ ಸಿಕ್ಕಿದ್ದೇ‌ ಆದ್ರೂ ಹಾ…???? ಝೋಂಬೀಸ್ ಎಂದವಳ ಎದೆ ಬಡಿತ ಕ್ಷ ನಿಂತಿದ್ದು ಸುಳ್ಳಲ್ಲ..

ಅವರೆಲ್ಲಾ ಇದ್ದಕ್ಕಿದ್ದ ಹಾಗೆ ಅವಳ ಬಳಿ ಬರಲಾರಂಭಿಸಿದಾಗ ,,, ಅವರ ಸದ್ದು ಅವರು ಕತ್ತು ವಾಲಿಸಿ ಕೈಗಳನ್ನ ವಾಲಿಸಿ ನಡೆದು ಬರುತ್ತಿದ್ದಾಗಲೇ ಅವರ ಮುಖದ ಮೇಲೆ ರಕ್ತದ ಕಲೆಗಳನ್ನ ಗಮನಿಸಿದ ಹುಡುಗಿಗೆ ಅರಿವಿಗೆ ಬಂದಿದ್ದು …

ಅಸಲಿಗವು ಝೋಂಬಿಗಳಂತ..

(  Note : Tap on image… ಫೋಟೋ ಮೇಲೆ ಕ್ಲಿಕ್ ಮಾಡಿದರೆ ಝೂಮ್ ಆಗುತ್ತೆ… ಈ ಕಥೆಯಲ್ಲಿ ಎಲ್ಲಾ ಫೋಟೋಗಳ ಮೇಲೂ ಟಾಪ್ ಮಾಡಿ ಓದುತ್ತಾ ಹೋದರೆ ಮತ್ತಷ್ಟು ರೋಮಾಂಚನಕಾರಿ ಅನುಭವ ಸಿಗಲಿದೆ ಅನ್ನೋದು ನನ್ನ ಅಭಿಪ್ರಾಯ )

ಒಮ್ಮೆಲೆ ಜೀವ ಬಾಯಿಗೆ ಬಂದಿತ್ತು‌ ಮನಸ್ವಿಗೆ… ಝೋಂಬೀಸ್ ಬರೋಕೆ ಹೇಗೆ ಸಾಧ್ಯ ಅನ್ನೋದನ್ನ ಯೋಚಿಸುತ್ತಾ ಕೂರುವ ಸಮಯವಲ್ಲ ಬದಲಾಗಿ ಅಲ್ಲಿಂದ ತಪ್ಪಿಸಿಕೊಳ್ಳುವ ಸಮಯವಾಗಿತ್ತು…

ಎದೆ ಬಡಿತ ಜೋರಾಗಿತ್ತು… ಅಲ್ಲಿಂದ ಒಂದೇ ಉಸಿರಲ್ಲ ದಾರಿ ಸಿಕ್ಕಲ್ಲೆಲ್ಲಾ ಓಡೋಡಿ ಹೋಗ್ತಿದ್ದಾಳೆ.. ಬೆವರುತ್ತಾ… ಯಾವ ದಿಕ್ಕಿಗೋದರೂ ಝೋಂಬಿಗಳು ಸುತ್ತುವರೆದಿವೆ.. ಕೆಲವಕ್ಕೆ ತಲೆ ಇಲ್ಲ ಕೆಲವಕ್ಕೆ ಕೈ ಕಾಲುಗಳಿಲ್ಲ..

ಹುಡುಗಿ ಇನ್ನೇನು ತನ್ನ ಕಥೆ ಮುಗಿದೇ ಹೋಯಿತೆಂದು ಕಣ್ಮುಚ್ಚಿ ಜೀವ ಬಿಡಲು ರೆಡಿಯಾಗಿ ನಿಂತಿದ್ದವಳನ್ನ ಇದ್ದಕ್ಕಿದಂತೆ ಎಳೆದುಕೊಂಡಿತ್ತೊಂದು ಕೈ …

ಮೊದಲೇ ಭಯದಲ್ಲಿ ಹೆದರಿದ್ದವಳು ತನ್ನ ಕೈ ಯಾರೋ ಹಿಡಿದಾಗ ಕಿರುಚಾಡಿದವಳ ಬಾಯ್ಮೇಲೆ ಕೈಯಿಟ್ಟು ಮುಚ್ಚಿದವನ ಕೈ ಯಾರದ್ದೂ ಎಂದು ಹಿಂದುರುಗಿ‌ ನೋಡಿದವಳ ಎದೆ ತಾಳ ತಪ್ಪಿತ್ತು..

ಗಂಧರ್ವನಂತಹ ಸುಂದರನಾಗಿದ್ದನು ಅವಳ ಮುಂದಿದ್ದ ಕಟ್ಟುಮಸ್ತು‌ ದೇಹದ ಆ ಚೆಲುವನು…‌ ಹೊಳೆಯುವ ಕಣ್ಗಳು ಚಂದ್ರನಂತೆ ಅವನ ಮೊಗದಲ್ಲಿದ್ದ ಸೆಳೆತಕ್ಕೆ ಆಕರ್ಶಿತಳಾಗಿದ್ದವಳು ಒಂದು‌ ಕ್ಷಣ ತಾನೆಂತಹ ಪರಿಸ್ಥಿತಿಯಲ್ಲಿದ್ದೀನಿ ಎಂಬುದನ್ನೂ ಮರೆತು ಹೋಗಿದ್ದಳು..

ಆದ್ರೆ ಅವಳ‌ಕೈ ಹಿಡಿದು ಅಲ್ಲೇ ಅವಳನ್ನ ಎಳೆದುಕೊಂಡು ಬಾಗಿಲು‌ ಬಡೆದಿದ್ದ ಹುಡುಗ…

ಹೂವಿನಂತ ಚೆಲುವು , ಆಕರ್ಷಣೆ , ಗುಲಾಬಿ ತುಟಿ , ಚೆಂದುಟಿಯ ಪಕ್ಕದಲ್ಲಿದ್ದ ಹುಟ್ಟು ಮಚ್ಚೆ ,, ಬಾಣದಂತ ಉಬ್ಬುಗಳ ಕೆಳಗೆ ಮನೋಹರ ನಯನಗಳು ಅಬ್ಬಾ ಎಷ್ಟು ಸುಂದರವಾಗಿದ್ದಾಳೆ ಈ ಹುಡುಗಿ ಎಂದುಕೊಂಡಿದ್ದವನೂ ಮೈಮರೆತಿದ್ದನು..

ಇಬ್ಬರ ಕಣ್ಣೋಟ ಸರಿದು ವಾಸ್ತವಕ್ಕೆ ಬರುವ ಮೊದಲೇ ,, ಕಿಟಕಿ ಬಳಿ ಝೋಂಬಿಗಳು ಬಂದು ಬಾಗಿಲು ಬಡೆಯುವ ಸದ್ದಿಗೆ ಹೆದರಿದ ಹುಡುಗಿ ಭಯಕ್ಕೆ ಅವನನ್ನೇ ಬಿಗಿದಪ್ಪಿಬಿಟ್ಟಿದ್ದಳು…

ಅವಳ ಅಪ್ಪುಗೆಗೆ ಹುಡುಗನ ಎದೆ ಬಡಿತ ನೂರರ ಗಡಿ ದಾಟಿದ್ದು ಸುಳ್ಳಲ್ಲ…. ಅವಳು ಅವನೆದೆಗೆ ಬಚ್ಚಿಟ್ಟುಕೊಂಡಿದ್ದರೆ ಹುಡುಗ ಕರ್ಟನ್ ಸರಿಸಿದಂತೆ ಅವರ ಸದ್ದು ನಿಂತು ಹೋಗಿತ್ತು..

ಹೆದರುತ್ತಲೇ ನಿಧಾನವಾಗಿ ಅವನಿಂದ ದೂರವಾಗಿ ಅತ್ತಿತ್ತ ನೋಡುವವಳಿಗೆ ಮುಜುಗರವೂ ಆಗಿತ್ತು ಸಾವಿರ ಪ್ರಶ್ನೆಗಳೂ ಕಾಡುತಿತ್ತು.. ಗೊಂದಲದಲ್ಲೂ ಇದ್ದಳು..

ಭಯದಲ್ಲಿ ಅವನಿಂದ ದೂರಾಗಿ ಥ್ಯಾಂಕ್ಸ್ ಹೇಳಿದವಳಿಗೆ ಆತ ನಗುತ್ತಲೇ ವೆಲ್ ಕಮ್ ಹೇಳುವನು.. ಸಾಮಾನ್ಯ ಮನುಷ್ಯನಂತೆ ಕಂಡಿದ್ದ.. ಸುತ್ತಲೂ ನೋಡಿದವಳಿಗೆ ತಾನೊಂದು ಸೂಪರ್ ಮಾರ್ಕೆಟ್ ನೊಳಗೆ ಇರುವುದು ಅರಿವಿಗೆ ಬಂದಾಗ ಗಾಬರಿಯಲ್ಲೇ ಒಂದೇ ಉಸಿರಲ್ಲೇ ,,,

ಇದೆಲ್ಲಾ ಏನೂ.. ನೀವ್ಯಾರೂ.. ಇಲ್ಲಿ ಏನ್ ನಡೀತಿದೆ… ಅಲ್ಲ ನಾನ್ ಇಲ್ಲಿಗೆ ಹೇಗ್ ಬಂದೆ.. ಎಲ್ಲಾ ವಿಚಿತ್ರವಾಗಿದ್ಯಲ್ಲ‌. ಅಲ್ಲ ಝೋಂಬೀಸ್….   ಝೋಂಬೀಸ್ ಹೇಗ್ ಸಾಧ್ಯ ನಿಜ ಜೀವನದಲ್ಲಿ ಬರಲಿಕ್ಕೆ… ಇಟ್ಸ್ ಇಂಪಾಸಿಬಲ್..

ಎಂದವಳನ್ನ  ಮೊದಲಿಗೆ ಸಮಾಧಾನ ಮಾಡುವ  ಮೋಕ್ಷಿತ್ ಕಾಮ್ ಡೌನ್ ಕಾಮ್ ಡೌನ್ ರೀ… ಜಸ್ಟ್ ಕಾಮ್ ಡೌನ್ ಎಂದು ಅವಳೆದುರಿಗೆ ಕೂತ ಆ ಅಪರಿಚಿತ ಪರಿಚಿತರು , ತೀರ ಆಪ್ತರಿಗಿಂತ ಹೆಚ್ಚಾಗಿ ಅವಳ ಮೇಲೆ ಕಾಳಜಿ ತೋರಿದ್ದ…  ಅವನ ಈ ಪರಿಗೆ  ಅವಳಿಗೆ ಹೊಸ ಹೊಸ ಭಾವನೆ ಉದಯಿಸಲಾರಂಭಿಸಿತ್ತು..

ಅವನ ಕಣ್ಗಳನ್ನೇ ದಿಟ್ಟಿಸುತ್ತಿದ್ದವಳಿಗೆ ಅವನ ಪರಿಚಯ ಮಾಡಿಕೊಡುತ್ತಾ ,, ಹಾಯ್ ಐಮ್ ಮೊಕ್ಷಿತ್ ಒಂದು ವರ್ಷದ ಹಿಂದೆ ಇಲ್ಲಿ ಬಂದು ಸಿಲುಕಿಕೊಂಡಿದ್ದೀವಿ.. ಇಲ್ಲಿಂದ ಹೊರಗೆ ಹೋಗಲಿಕ್ಕೆ ಆಗಿಲ್ಲ‌.

ನಮ್ಮ ಒಂದು‌ ಟೀಮ್ ಬಂದಿದ್ವಿ.. 7 ಜನರ ಟೀಮ್… ನಾವು ಆ ಸೈಂಟಿಸ್ಟ್ ಬಂಗಲೆಗೆ ಬರಬೇಕು ಅನ್ನೋ ಕ್ಯೂರಿಯಾಸಿಟಿಲಿ ಬಂದ್ವಿ.. ಆಮೇಲೆ ನೀನು ಹೇಗೆ ಆ ಟಿವಿ‌ ಮುಂದೆ ನಿಂತು ಒಳಗೆ ಬಂದಿರುತ್ತೀಯೀ  ಹಾಗೇ ನಾವು ಬಂದಿದ್ವಿ…

ಎಂದವನ ಮಾತು‌ ಅರ್ಧಕ್ಕೆ ನಿಲ್ಲಿಸುವ ಮನಸ್ವಿ ವೇಯಿಟ್ ಹಾಗಾದ್ರೆ ನನ್ನ ಅಕ್ಕ ತೇಜಸ್ವಿ ನಿಮ್ಮ ಜೊತೆಗೆ ಬಂದಿದ್ದಳಾ.. ಎಂದವಳ ಮಾತಿಗೆ ಆಶ್ಚರ್ಯದಲ್ಲಿ ಉತ್ತರಿಸುತ್ತಾ ಹೂ ಹೌದು.. ಅಂದ್ರೆ ನಿನ್ ಅಕ್ಕ ತೇಜಸ್ವಿನಾ.. ಅವಳು ನನ್ನ  ಒಳ್ಳೆ ಫ್ರೆಂಡ್ ಎಂದವನ ಮಾತಿಗೆ ಖುಷಿಯಾದ ಹುಡುಗಿ ಹಾಗಾದ್ರೆ ಎಲ್ಲಿದ್ದಾಳೆ ಅಕ್ಕ… ಎಲ್ಲಿದ್ದಾಳೆ ಅಕ್ಕ ಎಂದವಳ ಮಾತಿಗೆ ಬೇಸರದಲ್ಲಿ ಉತ್ತರಿಸುವ ಮೋಕ್ಷಿತ್ ಎಲ್ಲರೂ ಒಂದೊಂದು ದಿಕ್ಕಿಗೆ ಹೋಗಿದ್ದೀವಿ.. ನಿನ್ನೆವರೆಗೂ ಎಲ್ಲರೂ ಜೊತೆಯಲ್ಲಿದ್ದೆವು..

ಆದ್ರೆ ನಿನ್ನೆ   ಝೋಂಬೀಗಳ ಗುಂಪು ಒಮ್ಮೆಲೆ ಬಂದಾಗ ಎಲ್ಲರೂ ಒಂದೊಂದು ದಿಕ್ಕಿಗೆ ತಪ್ಪಿಸಿಕೊಂಡ್ವಿ.. ‌ಆದ್ರೆ  ಎಲ್ಲಿ ಯಾವ ದಿಕ್ಕಲ್ಲಿದ್ದಾರೆ‌ ಅವರೆಲ್ಲಾ ಗೊತ್ತಿಲ್ಲ..  ಆದ್ರೆ ಸೇಫಾಗಿರಲಿ ಅನ್ನೊದೊಂದೇ ಆಸೆ ಎಂದವನ ಮಾತಿಗೆ ಭಯದಲ್ಲಿ ನಡುಗಿದ ಹುಡುಗಿ.. ಅಂದ್ರೆ ನೀವೆಲ್ಲಾ ಹೊರಗೆ ಕೋಮಾದಲ್ಲಿದ್ದೀರಾ.. ನಿಮ್ಮ ಆತ್ಮಗಳು ಇಲ್ಲಿ ಸೆರೆಯಾಗಿವೆ..

ಅಂದ್ರೆ ಈಗ ನಾನು ಕೂಡ ಆತ್ಮವೇ.. ಎಂದಾಗ ಹೂ ಎಂದು ತಲೆಯಾಡಿಸುತ್ತಾನೆ ಮೋಕ್ಷಿತ್..

ಭಯದಲ್ಲಿ ಬೆವರುತ್ತಾ ಅದ್ ಹೇಗ್ ಸಾಧ್ಯ …   ಇಟ್ಸ್ ಇಂಪಾಸಿಬಲ್ ಎಂದರೆ

ಮೋಕ್ಷಿತ್.. ನಾನು ಹೇಳೋದ್ ಸರಿಯಾಗಿ ಕೇಳು ನಿನ್ ಹೆಸರು ಎಂದವನಿಗೆ

ಹೆಸರು ಮನಸ್ವಿ‌ ಎಂದವಳಿಗೆ ಉತ್ತರಿಸುತ್ತಾ ,,, ಮನಸ್ವಿ‌ ನಾವು ಇರೋದು ಸೈಕೋ ಸೈಂಟಿಸ್ಟ್ ಒಬ್ಬನ‌ ಎಕ್ಸ್ ಪರಿಮೆಂಟ್ ಅವನು ಸೃಷ್ಟಿಸುರುವ ಗೇಮ್ ಜಗತ್ತಿನಲ್ಲಿ.. ಇಲ್ಲಿ ನಾವು ನಮ್ಮ ಆತ್ಮಗಳೂ ಸ್ಪರ್ಷ ಎಲ್ಲವನ್ನ ಅನುಭವಿಸುತ್ತವೆ..

ಹಾಗೆಯೇ ನೋವೂ ಆಗುತ್ತೆ.. ಎಲ್ಲವೂ ಸಹಜ ಮನುಷ್ಯರಂತೆಯೇ ಅನಿಸುತ್ತೆ..

ಇದು ಒಬ್ಬ ಹುಚ್ಚು ವಿಜ್ಞಾನಿ ಸೃಷ್ಟಿ ಮಾಡಿರುವ ಜಗತ್ತು.. ಆ ಝೋಂಬಿಗಳು ಅಸಲಿಗೆ ನಿಜ ಅಲ್ಲ ಗೇಮ್ ಮತ್ತೆ ಯಾವುದೋ ಸಿನಿಮಾದಿಂದ ತೆಗೆದ ಭಾಗ… ಆದ್ರೆ ಅದನ್ನ ಈ‌ ಟೆಕ್ನಾಲಾಜಿಕಲ್ ಜಗತ್ತಿನಲ್ಲಿ ಅಳವಡಿಸಿ ನಮ್ಮ ಆತ್ಮಗಳು ಇಲ್ಲಿರೋದರಿಂದ ಅವುಗಳ ಜಗತ್ತಿನಲ್ಲಿ ನಾವಿದ್ದೇವೆ.. ಇದಿನ್ನೂ ಮೊದಲ‌ ಸ್ಟೇಜ್ ಅಷ್ಟೇ…

ಇದೇ ರೀತಿ 7 ಸ್ಟೇಜ್ ಗಳಿವೆ.. ಒಂದೊಮ್ಮೆ ಅಷ್ಟೂ ಹಂತಗಳನ್ನೂ ದಾಟಿದೆ  ಅಂದ್ಕೋ ನಿನ್ನ ಆತ್ಮ ಇಲ್ಲಿಂದ ಹೊರಗೆ ಹೋಗುತ್ತೆ.. ಸೀದಾ ನಿನ್ನ ದೇಹಕ್ಕೆ ಸೇರುತ್ತೆ..

ಆದ್ರೆ ಅದು ಸಾಧ್ಯವಿಲ್ಲ… ನಾವೇ ಒಂದು‌ ವರ್ಷದಿಂದ ತಪ್ಪಿಸಿಕೊಳ್ಳಲಾಗದೇ ಸಿಲುಕಿ ಒದ್ದಾಡ್ತಿದ್ದೀವಿ.. ಒಂದೆರೆಡು ಸ್ಟೇಜ್ ಕ್ಲಿಯರ್ ಆದ್ರೂ ಮೂರನೇ ಸ್ಟೇಜ್ ನಲ್ಲಿ ಮೂರು ಸಲ‌ ಸೋತು ಸೋತು ವಾಪಸ್ ಮೊದಲನೇ ಸ್ಟೇಜ್ ಗೆ ವಾಪಸ್ ಬರುತ್ತಿದ್ದೇವೆ ಎಂದವನ ಮಾತಿಗೆ ಎದ್ದು ನಿಂತಿದ್ದಗಳ ಕಣ್ಗಳು ಹಿಗ್ಗಿದ್ದವು… ಅವನ‌ ಮಾತಿನ ನಂಬಿಕೆ ಬರುತ್ತಿಲ್ಲ …

– ನಿಹಾರಿಕಾ ರಾವ್ –

ಗಮನಿಸಿ :  ಪ್ರತಿ ದಿನ ಬೆಳಿಗ್ಗೆ 6 . 30 ಗಂಟೆಗೆ ಹಾಗೂ ಸಂಜೆ 6 . 30 ರ ಸಮಯಕ್ಕೆ  Saakshatv Special Series ( ಲೇಖಕರ ವಿಶೇಷ / Author Special ) ಸೀರೀಸ್ ನ ಪ್ರಕಟಿಸಲಾಗುತ್ತದೆ…

ನಮ್ಮ ವೆಬ್ ಸೈಟ್ ನ ‘ ಎಸ್ ಸ್ಪೆಷಲ್ / Saakshatv Special’ ಕ್ಯಾಟಗಿರಿಯಲ್ಲಿ ಎಲ್ಲಾ ಅಧ್ಯಾಯಗಳು ಲಭ್ಯವಿರುತ್ತವೆ..

ಇನ್ನೂ ಗೂಗಲ್ ನಲ್ಲಿ ‘ Saakshatv Special Series’ ಎಂದೂ ಸಹ ಸರ್ಚ್ ಮಾಡಿ ವಿಶೇಷ , ವಿಭಿನ್ನ ಕಥೆಗಳನ್ನ ಓದಬಹುದು…

ಇದೇ ರೀತಿ ಆಸಕ್ತಿದಾಯಕ , ವಿಭಿನ್ನ ಹಾಗೂ ರೋಚಕ ಕಥೆಗಳು , ಲೇಖನಗಳು , ಜೊತೆಗೆ ನ್ಯೂಸ್ ಅಪ್ ಡೇಟ್ ಗಳಿಗಾಗಿ ನಮ್ಮ ” Saakshatv” ಫಾಲೋ ಮಾಡಿ..

ಮೊದಲ ಅಧ್ಯಾಯ 1

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 1

ಅಧ್ಯಾಯ – 2

Saakshatv Special series – ನಿಗೂಢ ಟಿವಿ ಜಗತ್ತು – ಅಧ್ಯಾಯ 2 ( ಅದ್ಭುತ ಫ್ಯಾಂಟಸಿ ಜಗತ್ತು)

ಅಧ್ಯಾಯ – 3

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 3

ಅಧ್ಯಾಯ – 4

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 4

 

Tags: fantasymysterious tvnigooda tvSaakshatv Special Series
ShareTweetSendShare
Join us on:

Related Posts

ಬೊಗಳುವ ಯತ್ನಾಳ್ ಗೆ ಕಚ್ಚುವ ತಾಕತ್ತಿಲ್ಲ: ನಿಮ್ಮ ಡಿಎನ್‌ಎ ಬಗ್ಗೆ ನಮಗೆ ಸಂಶಯವಿದೆ- ಕಾಂಗ್ರೆಸ್ ನಾಯಕರನ್ನ ಟೀಕಿಸುವ ಮುನ್ನ ನಿಮ್ಮ ಮೂಲ ನೋಡಿ ಎಂದ ಪ್ರದೀಪ್ ಈಶ್ವರ್

ಬೊಗಳುವ ಯತ್ನಾಳ್ ಗೆ ಕಚ್ಚುವ ತಾಕತ್ತಿಲ್ಲ: ನಿಮ್ಮ ಡಿಎನ್‌ಎ ಬಗ್ಗೆ ನಮಗೆ ಸಂಶಯವಿದೆ- ಕಾಂಗ್ರೆಸ್ ನಾಯಕರನ್ನ ಟೀಕಿಸುವ ಮುನ್ನ ನಿಮ್ಮ ಮೂಲ ನೋಡಿ ಎಂದ ಪ್ರದೀಪ್ ಈಶ್ವರ್

by Shwetha
October 9, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹರಿತವಾದ ಮಾತುಗಳಿಗೆ ಹೆಸರಾದ ಇಬ್ಬರು ನಾಯಕರ ನಡುವೆ ಈಗ ಡಿಎನ್‌ಎ ಸಮರ ಶುರುವಾಗಿದೆ. ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರನ್ನು ಸದಾ ಟೀಕಿಸುವ ಹಿರಿಯ ಶಾಸಕ...

ತಮಿಳುನಾಡಿಗೆ ಮತ್ತೆ 15 ದಿನ ಕಾವೇರಿ ನೀರು: ನಿತ್ಯ 3,000 ಕ್ಯೂಸೆಕ್ ಹರಿಸಲು CWRC ಶಿಫಾರಸು

ತಮಿಳುನಾಡಿಗೆ ಮತ್ತೆ 15 ದಿನ ಕಾವೇರಿ ನೀರು: ನಿತ್ಯ 3,000 ಕ್ಯೂಸೆಕ್ ಹರಿಸಲು CWRC ಶಿಫಾರಸು

by Shwetha
October 9, 2026
0

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದೆ. ತಮಿಳುನಾಡಿನ ಮನವಿಯನ್ನು ಪರಿಗಣಿಸಿರುವ ಕಾವೇರಿ ನೀರು ನಿಯಂತ್ರಣ ಸಮಿತಿ (CWRC), ಮುಂದಿನ 15 ದಿನಗಳ ಕಾಲ...

ಕ್ಯಾಪ್ಟನ್ ಸ್ಮಿತ್ ಮಚ್ಚರ್ ಶೌರ್ಯಕ್ಕೆ ವಿಶ್ವವೇ ಫಿದಾ ಆದರೂ ರಾಹುಲ್ ಗಾಂಧಿ ಮೌನವೇಕೆ: ಭಾರತೀಯರ ಸಾಧನೆ ಎಂದರೆ ನೆಹರು ಕುಟುಂಬಕ್ಕೆ ಅಲರ್ಜಿಯೇ ಎಂದು ಕಿಡಿಕಾರಿದ ಕಿಶನ್ ರೆಡ್ಡಿ

ರಾಜ್ಯ ಸರ್ಕಾರ ಉರುಳಿಸಲು ಕೇಂದ್ರದ ಮಾಸ್ಟರ್ ಪ್ಲಾನ್ ಐಟಿ ಮತ್ತು ಇಡಿ ಮೂಲಕ ನಡೆಯುತ್ತಿದೆ ಸ್ಟಿಂಗ್ ಆಪರೇಷನ್ ಎಂದು ಗುಡುಗಿದ ಪ್ರಿಯಾಂಕ್ ಖರ್ಗೆ

by Shwetha
October 9, 2026
0

ಬೆಂಗಳೂರು: ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರದ ಬಿಜೆಪಿ ಸರ್ಕಾರ ವ್ಯವಸ್ಥಿತ ಸಂಚು ರೂಪಿಸಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ....

ವಿಪ್ ಉಲ್ಲಂಘನೆ ಆರೋಪ: ಹಗರಿಬೊಮ್ಮನಹಳ್ಳಿ ಪುರಸಭೆಯ ಮೂವರು ಬಿಜೆಪಿ ಸದಸ್ಯರು ಅನರ್ಹ

ವಿಪ್ ಉಲ್ಲಂಘನೆ ಆರೋಪ: ಹಗರಿಬೊಮ್ಮನಹಳ್ಳಿ ಪುರಸಭೆಯ ಮೂವರು ಬಿಜೆಪಿ ಸದಸ್ಯರು ಅನರ್ಹ

by Shwetha
October 9, 2026
0

ಪಕ್ಷದ ಅಧಿಕೃತ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ ಹಾಗೂ ಪುರಸಭೆಯ ಸಭೆಗೆ ಉದ್ದೇಶಪೂರ್ವಕವಾಗಿ ಗೈರುಹಾಜರಾದ ಆರೋಪದ ಹಿನ್ನೆಲೆಯಲ್ಲಿ ಹಗರಿಬೊಮ್ಮನಹಳ್ಳಿ ಪುರಸಭೆಯ ಮೂವರು ಬಿಜೆಪಿ ಸದಸ್ಯರನ್ನು ಸದಸ್ಯತ್ವದಿಂದ...

ಮೋದಿ ಮತ್ತು ಶಾ ಅವರನ್ನು ಕಾನೂನಿನ ಕಟಕಟೆಯಲ್ಲಿ ನಿಲ್ಲಿಸುತ್ತೇವೆ: ದೇಶದ್ರೋಹದ ಸಂಚು ರೂಪಿಸಿದವರಿಂದ ದೇಶವನ್ನು ಮುಕ್ತಗೊಳಿಸುತ್ತೇವೆ- ರಾಹುಲ್ ಗಾಂಧಿ ಎಚ್ಚರಿಕೆ

ಮೋದಿ ಮತ್ತು ಶಾ ಅವರನ್ನು ಕಾನೂನಿನ ಕಟಕಟೆಯಲ್ಲಿ ನಿಲ್ಲಿಸುತ್ತೇವೆ: ದೇಶದ್ರೋಹದ ಸಂಚು ರೂಪಿಸಿದವರಿಂದ ದೇಶವನ್ನು ಮುಕ್ತಗೊಳಿಸುತ್ತೇವೆ- ರಾಹುಲ್ ಗಾಂಧಿ ಎಚ್ಚರಿಕೆ

by Shwetha
October 9, 2026
0

ನವದೆಹಲಿ: ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ಬಿಜೆಪಿ ಸರ್ಕಾರ ಸತತವಾಗಿ ದಾಳಿ ಮಾಡುತ್ತಿದೆ ಎಂದು ಆರೋಪಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಈಗ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram