( ಹಿಂದಿನ ಅಧ್ಯಾಯಗಳನ್ನ ಓದಲು , ಲೇಖನದ ಕೊನೆಯಲ್ಲಿ ನೀಡಲಾಗಿರೋ ಲಿಂಕ್ ಗಳನ್ನ ಕ್ಲಿಕ್ ಮಾಡಿ )
ಅಧ್ಯಾಯ – 3
ಎಲ್ಲರಲ್ಲೂ ಕುತೂಹಲ,,,, ಜೊತೆಗೆ ಭಯವೂ..
ಆದ್ರೆ ಮನಸ್ವಿ ಮುಖದಲ್ಲಿದ್ದ ಭಾವನೆಯೇ ಬೇರೆ.. ಅವಳಿಗೆ ಬೇಕಾಗಿದ್ದು ಸಿಕ್ಕಿದೆ ಅನ್ನೋ ಭಾವನೆ.. ಜೊತೆಗೆ ವೇದನೆಯೂ ಸ್ಪಷ್ಟ..
ಆದರೆ ಯಾರೊಬ್ಬರಿಗೂ ಏನೂ ಅರ್ಥವಾಗದ ಸ್ಥಿತಿ..
ಮಾಧವ ಆಗಲಿ ಮತ್ತೊಬ್ಬರಾಗಲಿ ಇನ್ನೇನಾದ್ರೂ ಪ್ರಶ್ನೆ ಕೇಳಬೇಕು… ಅಷ್ಟರೊಳಗೆ ಬಂದವರು ಇವರ ಟೀಮ್ ಇಂಚಾರ್ಜ್… ಬಂದವರು ಬೇಗ ಬೇಗ ಊಟ ಮುಗಿಸಿ ನಾಳೆ ಬೇಗ ಎದ್ದೇಳಬೇಕು … ಈಗ ರೆಸ್ಟ್ ಮಾಡಿ ಎಂದವರ ಮಧ್ಯಪ್ರವೇಶದಿಂದಾಗಿ ,, ರಾಮು , ಶಾಮು ಕಥೆ ಹೇಳುವುದನ್ನ ನಿಲ್ಲಿಸಿ ಹೊರಟಿದ್ದರು..
ಅವರು ಹೋದ ನಂತರ ಎಲ್ಲರೂ ಭಯಭೀತರಾಗಿ ಆ ಬಗ್ಗೆಯೇ ಯೋಚಿಸಲಾರಂಭಿಸಿದ್ದರು.. ಅದರ ಬಗ್ಗೆಯೇ ಮಾತನಾಡುತ್ತಿದ್ದವರಲ್ಲಿ,
ಮಾಧವ ಜೋರು ನಗುತ್ತಾ ಯೂ ಫೂಲ್ಸ್ , ಅವರೇನೋ ಮುಗ್ಧರು ಮೂಡನಂಬಿಕೆ ಏನೇನೋ ಮಾತನಾಡ್ತಾರೆ..
ನಾವು ಸಿಟಿಯಲ್ಲೇ ಹುಟ್ಟಿ ಬೆಳೆದವರು.. ಪ್ರಾಕ್ಟಿಕಲ್ ಆಗಿ ಬದುಕುತ್ತಿರುವರು.. 21 ನೇ ಶತಮಾನದಲ್ಲಿದ್ದೇವೆ.. ದೆವ್ವ ಭೂತ ಇದನ್ನೆಲ್ಲಾ ನಂಬೋದಕ್ಕಾಗುತ್ತಾ…
ಮನಸ್ವಿ ” ಮಾಧವ್ ಕೆಲವೊಮ್ಮೆ ಕೆಲವೊಂದನ್ನ ನಾವು ನಂಬೋದಿಲ್ಲ ಅದು ನಮ್ಮ ಅನುಭವಕ್ಕೆ ಬಂದಿರಲ್ಲ ಅದಿಕ್ಕೆ.. ಕೆಲವರು ನಂಬುತ್ತಾರೆ , ಯಾಕೆಂದ್ರೆ ಅದವರ ಅನುಭವಕ್ಕೆ ಬಂದಿರುತ್ತೆ ಅದಿಕ್ಕೆ… ”
ಮಾಧವ್ ” ಮನಸ್ವಿ ನೀನೂ”
ಎಸ್ ಮಾಧವ್ ನಾನೇ.. ” ಸಕಾರಾತ್ಮಕತೆ ಇದೆ ಅಂಧ್ರೆ ನಕಾರಾತ್ಮಕತೆಯೂ ಇರುತ್ತೆ.. ನಾನು ನಂಬ್ತೇನೆ.. ಅಲ್ಲಿ ಏನೋ ಇರಬಹುದು ಸುಮ್ನೆ ಯಾರೂ ಕೋಮಾಗೆ ಹೋಗೋದು ಮಾಯವಾಗೋದೆಲ್ಲಾ ಆಗಲ್ಲ..
ಮಾಧವ್ ” ಕಮಾನ್ ಮನಸ್ವಿ… ಡೋಂಟ್ ಆಕ್ಟ್ ಲೈಕ್ ಸಿಲ್ಲಿ ”
ಯಾರೂ ಪ್ರತಿಕ್ರಿಯಿಸುವುದಿಲಗಲ..
ಜಾನಿ ” ಓಕೆ ಹಾಗದಾರೆ ಹಾಳು ಬಂಗಲೆ ಮಿಸ್ಟರಿ ತಿಳಿಯೋ ಕ್ಯೂರಿಯಾಸಿಟಿ ನನಗಂತೂ ಇದೆ.. ನಿಮ್ಮಲ್ಲಿ ಯಾರಿಗೆಲ್ಲಾ ಇದೆಯೋ ಅವರು ನಾಳೆ ನನ್ನ ಜೊತೆಗೆ ಬರಬಹುದು..”
ಅವನ ಮಾತು ಕೇಳಿ ಮನಸ್ವಿ , ಸನಂತ್ ಬಾಕಿಯವರೂ ಗಾಬರಿಯಾದ್ರೂ ,,, ಮೇರಿ, ಜಾನ್ ( ಪರಸ್ಪರ ಪ್ರೀತಿಸುತ್ತಿದ್ದರು ) ಫಯಾಜ್ , ಮಾಧವ್ ಎಕ್ಸೈಟ್ ಆಗುವರು..
ಆದ್ರೆ ಮನಸ್ವಿ ನಿರಾಕರಿಸುತ್ತಾ ” ರಾಮು ,ಶಾಮು ಅವರು ಹೇಳಿದ್ರೂ ತಾನೆ ಅಪಾಯಕಾರಿ ಅಂತ.. ಅಲ್ಲಿ ಏನೇನಿದೆಯೋ ಯಾರಿಗೆ ಗೊತ್ತು…ನಾವು ಅಲ್ಲಿಗೆ ಹೋಗದೇ ಇರೋದು ಒಳ್ಳೇದು.. ಅಪ್ಪಿ ತಪ್ಪಿ ಅಲ್ಲಿಗೆ ಹೋಗಿದ್ದು ಗೊತ್ತಾದ್ರೆ ರಂಪ ರಾಮಾಯಣನೇ ಆಗಿಬಿಡುತ್ತೆ ಇಲ್ಲಿ…
ಮಾಧವ್ ಅವಳನ್ನ ಪ್ರೇರೇಪಿಸುತ್ತಾ ಜಸ್ಟ್ ಸ್ಟಾಪ್ ಇಟ್ ಮನಸ್ವಿ ” ಹೆದರಪುಕಲಿ ನೀನು ಹದರಿಕೊಳ್ತಿದ್ಯಾ ಅಷ್ಟೇ ಅಲ್ಲಿಗೆ ಬರೋಕೆ.. ಧೈರ್ಯ ಇಲ್ಲ ನಿನಗೆಂದಾಗ ,, ಮನಸ್ವಿ ಸಿಟ್ಟಾಗುತ್ತಾ… ಓಕೆ ಫೈನ್ ಅಲ್ಲಿಗೆ ಬಂದೇ ನಿನಗೆ ನನ್ನ ಧೈರ್ಯ ತೋರಿಸಬೇಕೆಂದ್ರೆ ಓಕೆ ದೆನ್.. ಐ ವಿಲ್ ಕಮ್.. ಮಿಕ್ಕವರೆಲ್ಲಾ ಬಲವಂತಕ್ಕೆ ಒಪ್ಪಿ ನಾಳೆ ಸಂಜೆ ಯಾರಿಗೂ ಗೊತ್ತಾಗದೇ ಹೋಗುವ ಪ್ಲಾನ್ ಮಾಡಿಕೊಳ್ತಾರೆ…
@@@@@@
ಮರು ದಿನ ಬೆಳಿಗ್ಗೆ ಎಲ್ಲರೂ ಎದ್ದು ಬೇಗ ತಯಾರಾಗಿ ಗೈಡ್ ಗಳ ಸಹಾಯದ ಜೊತೆಗೆ ಡಾಕ್ಯುಮೆಂಟರಿ ಮೇಲೆ ಕೆಲಸ ಮಾಡುತ್ತಾ ಸುಂದರ ಕಾಡಿನ ಸೌಂದರ್ಯಕ್ಕೆ ಮಾರುಹೋಗಿದ್ದರು..
ಎಲ್ಲರೂ ಕತ್ತಲಾಗೋದಕ್ಕೂ ಮುಂಚೆ ಗೆಸ್ಟ್ ಗೌಸ್ ಸೇರಿದ್ದರೂ.. ಸ್ವಲ್ಪ ಆಹಾರವನ್ನೂ ಸೇವಿಸಿದವರು… ಇಂಚಾರ್ಜ್ ಗಳೆಲ್ಲಾ ಹೊರಟ ಮೇಲೆ ಮಾತನಾಡಿಕೊಳ್ತಾ ಎಲ್ಲರೂ ಹಾಳು ಬಂಗಲೆಯತ್ತ ಹೊರಟಿದ್ದರು.. ಆ ಜಾಗವನ್ನ ಇಂದು ಬೆಳಗ್ಗೆಯೇ ಎಲ್ಲರೂ ಕಂಡುಕೊಂಡಿದ್ದರು…
ಒಂದಿಬ್ಬರ ವಿರೋಧದ ನಡುವೆಯೂ ಇಡೀ ಟೀಮ್ ಕದ್ದು ಮುಚ್ಚಿ ಹುಷಾರಾಗಿ ಕಾಡಿನ ದಾರಿಯಲ್ಲಿ ಪಯಣಿಸುವಾಗ ಎಲ್ಲರೂ ಒಟ್ಟಾಗಿ ಇದ್ದರೂ ಜೋರಾದ ತಂಗಾಳಿ ಒಣ ಕೊಂಬೆಗಳ ತಿಕ್ಕಾಟ , ಸರಕ್ಕನೆ ಓಡಾಡುತ್ತಿದ್ದ ಪ್ರಾಣಿ , ಜಂತುಗಳ ಸದ್ದಿಗೆ ಎಲ್ಲರ ಜೀವ ಬಾಯಿಗೆ ಬಂದು ಹೋಗುವಂತೆ ಇತ್ತು ಅವರು ನದಿ ವರೆಗೂ ಬರೋವರೆಗೂ..
ನದಿ ಬಳಿ ಬಂದು ಭಯದಲ್ಲಿ ನದಿಯೊಳಗೆ ಕಾಲಿಟ್ಟಾಗಲೇ ಗೊತ್ತಾಗಿದ್ದು ನದಿ ನೀರು ಸ್ವಂಚ್ಛಂದವಾಗಿ ಹರಿಯುತ್ತಿದ್ದರೂ ಸರಿಯಾಗಿ ಮೊಣಕಾಲಿನಷ್ಟೂ ಆಳವಿಲ್ಲದೇ ಇರೋದು..
ನದಿ ತೀರಾ ಅಗಲವೂ ಇರಲಿಲ್ಲ..
ನದಿ ದಾಟಿದವರಿಗೆ ಒಮ್ಮೆಲೆ ಕಂಡದ್ದೇ ಅದೇ ನಿಷೇಧಿತ ಹಾಳು ಬಂಗಲೆ..
ಒಮ್ಮೆಲೆ ಎಲ್ಲರೂ ಆ ಭಯಾನಕ ಬಂಗಲೆಯನ್ನ ನೋಡಿ ಹೊರಗಿನಿಂದಲೇ ಹೆದರಿದ್ದು ಸುಳ್ಳಲ್ಲ..
ನಿಷೇಧಿತ ಹಾಳು ಬಂಗಲೆ ನೋಡಿ ಎಲ್ಲರ ದಿಲ್ ಝಲ್ ಎಂದಿದ್ದು ಸುಳ್ಳಲ್ಲ..
ಒಂದು ಕ್ಷಣ ನಿಂತಲ್ಲೇ ಎಲ್ಲರ ಕಾಲುಗಳೂ ಹೆಪ್ಪುಗಟ್ಟಿದ್ದವು.. ಉಸಿರು ಜೋರಾಗಿ ಎದೆ ಬಡಿತದ ಏರಿಳಿತಕ್ಕೆ ಪರಸ್ಪರ ಮುಖ ನೋಡಿಕೊಂಡಿದ್ದವರಿಗೆ ತಪ್ಪು ನಿರ್ಧಾರ ಮಾಡಿಬಿಟ್ಟೆವಾ ಎನಿಸಿದ್ದು ಸುಳ್ಳಲ್ಲ..
ಎಲ್ಲರ ಹಣೆಯಲ್ಲಿ ಬೆವರು ಕಾಣ್ತಿದ್ರೆ ಮನಸ್ವಿ ಮುಖದಲ್ಲಿ ಅವಳಿಗೆ ಏನ್ ಬೇಕಾಗಿತ್ತೋ , ಯಾವುದಕ್ಕಾಗಿ ಹುಡುಕಾಟ ನಡೆಸುತ್ತಿದ್ದಳೋ ಅದು ಸಿಕ್ಕಿರುವ ಭಾವನೆ ಅವಳಲ್ಲಿ ಭಯವಿಲ್ಲ..
ಎಲ್ಲರಿಗೂ ಭಯವೇನೋ ಇದೆ.. ಆದ್ರೂ ಹುಚ್ಚು ಕುತೂಹಲ ,, ಆ ಹುಚ್ಚು ಕುತೂಹಲ ಮಾಧವನಲ್ಲೇ ಹೆಚ್ಚು..
ಇದ್ದದ್ದು 9 ಜನರ ಪೈಕಿ ಹೋಗಲೇ ಬೇಕೆನ್ನೋ ಧೈರ್ಯ ಹುಚ್ಚಾಸೆ ಇದ್ದದ್ದು ಮಾಧವ ಮನಸ್ವಿಗೆ ಮಾತ್ರ… ಮಾಧವನಿಗೆ ಕುತೂಹಲ , ಮನಸ್ವಿಗೆ ಹಠ.. ಯಾವುದೋ ವಿಚಾರದ ಹಿಂದೆ ಬೆನ್ನತ್ತಿದ್ದಂತೆ..
ಯಾರೆಷ್ಟೇ ಬೇಡವೆಂದು ಬಲವಂತ ಮಾಡಿದ್ರೂ ಮಾಧವ, ಮನಸ್ವಿ ಆ ಕಬ್ಬಿಣದ ಗೇಟ್ ತೆಗೆದರೆ ಒಂದು ಬೋರ್ಡ್ ಅಸ್ಪಷ್ಟವಾಗಿ ಕಾಣಿಸುತಿತ್ತು..
ಟಾರ್ಚ್ ಲೈಟ್ ಆ ಕಡೆ ಬಿಟ್ಟವರಿಗೆ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಕಂಡಿದ್ದು , “ ಡು ನಾಟ್ ಎಂಟರ್ , ಪ್ರವೇಶ ನಿಷೇಧಿಸಲಾಗಿದೆ , ಡೇಂಜರ್ “..
ಈ ಬೋರ್ಡ್ ಕಂಡಿದ್ದೇ ತಡ ಎಲ್ಲರ ಜೀವ ಬಾಯಿಗೆ ಬಂದಿತ್ತು.. ಆದ್ರೆ ಮಾಧವ , ಮನಸ್ವಿ ಧೈರ್ಯ ಮಾಡಿ ಗೇಟ್ ತೆಗೆದು ಒಳಗೆ ಪ್ರವೇಶ ಮಾಡಿದರು..
ವಿಧಿ ಇಲ್ಲದೇ ಅವರಿಬ್ಬರನ್ನೇ ಕಳುಹಿಸುವ ಇಷ್ಟವಿಲ್ಲದೇ ಉಳಿದವರೂ ಹೆದರಿಕೊಂಡೆ ಅವರ ಹಿಂದೆ ಹೋದರು,..
ಜೋರಾಗಿ ಬೀಸುತ್ತಿದ್ದ ಗಾಳಿಗೆ , ಮರಗಳ ಎಲೆಗಳಿಂದ ಬರುತ್ತಿದ್ದ ಶಬ್ಧ , ಕೊರೆಯುವ ಚಳಿಯಲ್ಲೂ ಭಯಕ್ಕೆ ಬೆರವರಿದ್ದರು..
ಕಿವಿಗೆ ವಿಚಿತ್ರವಾಗಿ ಕೇಳಿಸುತ್ತಿದ್ದ ಕಿಚಿಕಿಚಿ ಧ್ವನಿಗೆ ಹೆದರಿದ್ದವರ ನಡುಕ ಹೆಚ್ಚಿಸಿದ್ದು ರಾತ್ರಿ ಹಕ್ಕಿಗಳ ಚೀರಾಟ , ಕಾಡು ಪ್ರಾಣಿಗಳ ಕಿರುಚಾಟ , ಕಾಡು ಬೆಕ್ಕುಗಳು ಎಲ್ಲೋ ಅಳುತ್ತಿದ್ದರೆ ,,, ಮಕ್ಕಳು ಅಳುವಂತೆ ಕೇಳುವ ಶಬ್ಧಕ್ಕೆ ಅಳುವುದೊಂದು ಬಾಕಿ ಅಷ್ಟು ಹೆದರಿದ್ದರು ಪಾಪ ಎಲ್ಲರೂ..
ಮಾಧವ ಧೈರ್ಯ ಮಾಡಿ ಮುಖ್ಯ ದ್ವಾರವನ್ನ ನೋಡಿದರೆ ಇಷ್ಟು ದೊಡ್ಡ ಬಂಗಲೆಗೊಂದು ಬೀಗವೂ ಹಾಕಿಲ್ಲ ಯಾರೂ ,,, ಅಲ್ಲಿಗೆ ಯಾರೂ ಬರೋ ಧೈರ್ಯ ಮಾಡಲ್ಲ ಅನ್ನೋದು ಸ್ಪಷ್ಟವಾಗಿತ್ತು..
ಆದ್ರೂ ಧೈರ್ಯ ಮಾಡಿದ್ದ ಮಾಧವ ಯಾರೊಬ್ಬರ ಮಾತಿಗೂ ತಲೆ ಕೆಡಿಸಿಕೊಳ್ಳದೇ ಯಾರೆಷ್ಟೇ ಬೇಡ ಎಂದು ಹೇಳಿದ್ರೂ ಬಾಗಿಲ ದೊಡ್ಡ ಕಬ್ಬಿಣದ ಚಿಲಕ ತೆಗೆದೇ ಬಿಡುವನು..
ಕಟ ಕಟ ಅಂತ ಶಬ್ಧ ಡೋರ್ ತೆಗೆಯುವಾಗ ಮತ್ತಷ್ಟು ಭಯವುಕ್ಕಿಸುತಿತ್ತು.. ಎಲ್ಲರಲ್ಲೂ… ಬಾಗಿಲು ತೆಗೆದೊಡಣೆ ಒಂದಷ್ಟು ಬಾವಲಿಗಳು ಅವರತ್ತ ನುಗ್ಗಿದ್ದನ್ನ ನೋಡಿ ಬೆಚ್ಚಿ ತಲೆ ಮೇಲೆ ಕೈ ಇಟ್ಟು ಕೆಳ ಕೂರುವರು..
ನಂತರ ಎಲ್ಲವೂ ಹೋಗಿದ್ದು ಖಾತ್ರಿಯಾದ ಮೇಲಷ್ಟೇ ಮೇಲೆದ್ದವರು ಭಯದಲ್ಲಿ ಒಂದೇ ಸಲವೇ ಒಳ ಪ್ರವೇಶಿಸಿದವರು.. ದೊಡ್ಡ ಬಂಗಲೆಯೊಳಗೆ ವರ್ಷಗಳಿಂದ ಕಟ್ಟಿದ್ದ ಜೇಡರ ಬಲೆ , ಪೀಠೋಪರಣಗಳ ಮೇಲೆ ಧೂಳು,, ಜೊತೆಗೆ ಮನೆಯೊಳಗೆ ಇದ್ದ ವಿಭಿನ್ನ ವಿಭಿನ್ನ ರೀತಿಯ ಗ್ಯಾಡ್ಜೆಟ್ ಗಳನ್ನ ನೋಡಿ ಹೌಹಾರಿದ್ದರು..
ಸುತ್ತಲೂ ಕಣ್ಣು ದೊಡ್ಡದಾಗಿಸಿ ಗುರಾಯಿಸುತ್ತಿದ್ದವರಲ್ಲಿ ರೋಮಾಂಚನವೂ , ಕುತೂಹಲವೂ ,, ವಿಭಿನ್ನ ಭಾವವೂ , ಪ್ರಶ್ನೆಗಳು ಗೊಂದಲಗಳೂ ಇದ್ದವು..
ಮಾಧು ” ವ್ಹಾ ಎಂತಹ ಗ್ಯಾಡ್ಜೆಟ್ ಗಳು ಇವೆಲ್ಲಾ.. ಇದೇನು ಮನೇನಾ ಸೈನ್ಸ್ ಲ್ಯಾಬ್ ಆ…??? ಮ್ಯೂಸಿಯಮ್..??? ಪ್ರತಿವಸ್ತುಗಳು ಒಂದೊಂಕ್ಕಿಂತ ಒಂದು ವಿಭಿನ್ನ ಆಂಟಿಕ್ ಅನ್ಸುತ್ತೆ..”
ಮನಸ್ವಿ ,, ಆಕರ್ಶಿತಳಾಗಿ ಎಲ್ಲಾ ಕಡೆ ಕಣ್ಣಾಡುಸುತ್ತಿದವಳು ಏನನ್ನೋ ಗಂಭೀರವಾಗಿ ಹುಡುಕಾಡುತ್ತಿದ್ದಳು.. ಎಲ್ಲರಲ್ಲೂ ಭಯವೂ ಇತ್ತು ಜೊತೆಗೆ ಎಕ್ಸೈಟ್ ಮೆಂಟ್ ಸಹ ಇತ್ತು… ಮಾಧವ ಅಲ್ಲೇ ಇದ್ದ ಲೈಟ್ಸ್ ಆನ್ ಮಾಡಿದರೇ ಎಲ್ಲರಿಗೂ ಆಶ್ಚರ್ಯ..
ಈ ಕಾಡಿನಲ್ಲಿ ಕರೆಂಟ್ ಕನೆಕ್ಷನ್ ಹೇಗೆ ಸಾಧ್ಯ… ಅದು ವರ್ಷಗಟ್ಟಲೆ ಇತ್ತ ಯಾರೂ ಬಾರದೇ ಇದ್ದರೂ… ಎಂದವನ ಮಾತಿಗೆ ಉತ್ತರಿಸಿದ ಜಾನ್ ಇದು ಸೈಂಟಿಸ್ಟ್ ಮನೆ ಏನೋ ವ್ಯವಸ್ಥೆ ಮಾಡಿಕೊಂಡಿರುತ್ತಾನೆ ಎನ್ನುವನ ಮಾತಿಗೆ ಎಲ್ಲರೂ ಒಪ್ಪಿ ತಲೆಯಾಡಿಸಿ ಲೈಟ್ ಬೆಳಕಿನಲ್ಲಿ ಬಂಗಲೆ ಸುತ್ತ ಕಣ್ಣಾಡಿಸಿದವರಿಗೆ…. ವ್ಹಾ ಎನ್ನದೇ ಇರಲಾಗಲಿಲ್ಲ…
ಧೂಳು ಕಟ್ಟಿದ್ದು ಜೇಡರ ಬಲೆ ಬಿಟ್ಟರೆ ಬಂಗಲೆ ಒಳಗಿನಿಂದ ನೋಡಲು ಸುಂದರವಾಗಿತ್ತು.. ವಾಸ್ತುಶಿಲ್ಪದಿಂದ ಹಿಡಿದು ಪ್ರತಿ ವಸ್ತುಗಳೂ ವಿಭಿನ್ನದಲ್ಲೇ ವಿಭಿನ್ನ..
ಎಲ್ಲರೂ ಒಂದೊಂದು ವಸ್ತುಗಳನ್ನೂ ಮುಟ್ಟುತ್ತಾ ತಮ್ಮದೇ ಗುಂಗಲ್ಲಿದ್ದರೆ
ಮನಸ್ವಿ ಮಾತ್ರ ತನ್ನದೇ ಲೋಕದಲ್ಲಿ ಕಳೆದುಹೋಗಿದ್ದಳು.. ಏನನ್ನೋ ಹುಡುಕಾಡುತಿದ್ದಳು…
ಹುಡುಕುತ್ತಾ ಹುಡುಕುತ್ತಾ ಅದ್ಯಾವಾಗ ಅವಳು ಟೆರೆಸ್ ಮೇಲಿನ ಕೋಣೆಗೆ ತಲುಪಿದ್ದಳೋ ಅವಳಿಗೂ ಹೊತ್ತಿಲ್ಲ…
ಆ ಕೋಣೆ ವಿಚಿತ್ರವಾಗಿತ್ತು… ಒಳಪ್ರವೇಶಿಸಿದ ಮನಸ್ವಿ ಅಲ್ಲಿದ್ದ ದೃಶ್ಯ ನೋಡಿ ಚಕಿತಳಾಗಿದ್ದಳು…
ಸುತ್ತಲೂ ಅವಳಿಗೆ ದೊಡ್ಡ ದೊಡ್ಡ ಟಿವಿ ಸ್ಕ್ರೀನ್ ಗಳೇ ಕಾಣಿಸುತ್ತಿತ್ತು… ಎಲ್ಲವನ್ನೂ ನೋಡುತ್ತಾ ಅವಳೆದೆ ಬಡಿತ ಜೋರಾಗಿತ್ತು…. ಆಗಲೇ ಅವಳನ್ನ ಮತ್ತಷ್ಟು ಆಕರ್ಶಿಸಿದ್ದು ದೊಡ್ಡದೊಂದು ಪರದೆ…. ಆ ಪರದೆ ಬಳಿಗೆ ಹೋದಳು ಕುತೂಹಲದಿಂದಲೇ ಅದನ್ನ ಸರಿಸಿದವಳಿಗೆ ಕಂಡದ್ದು 75 ಇಂಚಿನಷ್ಟು ದೊಡ್ಡದಾದ ಟಿವಿ..
ಆದ್ರೆ ಸಾಮಾನ್ಯವಾಗಿ ಮನೆಗಳಲ್ಲಿರುವ ಟಿವಿಯಂತಿರಲಿಲ್ಲ ಅದು… ಅದರ ಪಕ್ಕದಲ್ಲೊಂದು ಮೈಕ್ ಜೊತೆಗೊಂದು ಬಟನ್ ಇತ್ತು.. ಆ ಬಟನ್ ಕೆಂಪು ಬಣ್ಣದಲ್ಲಿ ಇತ್ತು ಆ ಬಟನ್ ಸಾಮಾನ್ಯ ಗಾತ್ರಕ್ಕಿಂತ ಹತ್ತು ಪಟ್ಟು ದೊಡ್ಡದಾಗಿತ್ತು.. ಅದರ ಮೇಲೆ ಇಂಗ್ಲಿಷ್ ನಲ್ಲಿ ಟಚ್ ಮಿ ಇಫ್ ಯು ಡೇರ್ ಎಂದು ಬರೆಯಲಾಗಿತ್ತು..
ಮನಸ್ವಿ ಅದನ್ನ ನೋಡ್ತಾ ನೋಡ್ತಾ ಭಯದಲ್ಲೂ ಕುತೂಹಲದಲ್ಲಿ ನಿಧಾನವಾಗಿ ಕೈ ಚಾಚುತ್ತಾ ಹೆದರುತ್ತಲೇ ಆ ಬಟನ್ ಒತ್ತಿಬಿಡ್ತಾಳೆ… ಅಷ್ಟೇ ….
ಆ ಮೈಕ್ ನಿಂದ ವೆಲ್ ಕಮ್ ಅನ್ನೋ ಧ್ವನಿ ಕೇಳಿ ಅವಳ ಜೀವ ಬಾಯಿಗೆ ಬಂದಿತ್ತು.. ಇದ್ದಕ್ಕಿದ್ದ ಹಾಗೆ ಟಿವಿ ಆನ್ ಆಗಿತ್ತು.. ಟಿವಿ ಸ್ಕ್ರೀನ್ ಗುರಾಯಿಸುತ್ತಿದ್ದವಳಿಗೆ ಒಮ್ಮೆಲೆ ಟಿವಿ ಸ್ಕ್ರೀನ್ ನಿಂದ ಬಂದ ಬೆಳಕು ಅವಳನ್ನ ಕಣ್ಣುಮಿಟುಕಿಸಲೂ ಅವಕಾಶ ಕೊಡದೆ ಒಳಗೆ ಎಳೆದುಕೊಂಡಿತ್ತು..
ಈಗ ಮನಸ್ವಿ ಟಿವಿಯೊಳಗೆ ಹೋಗಿದ್ದಳು..
ಅಲ್ಲಿಂದ ಮುಂದೇನು.. ಆ ಜಗತ್ತಿನಲ್ಲಿ ಏನೆಲ್ಲಾ ಇದೆ. ಎಷ್ಟೆಲ್ಲಾ ರೋಚಕತೆಗಳಿವೆ.. ಎಷ್ಟೆಲ್ಲಾ ನಿಗೂಢತೆ ಇದೆ ಅನಾವರಣವಾಗುತ್ತೆ… ಮುಂದಿನ ಎಪಿಸೋಡ್ ನಲ್ಲಿ …
@@@@@@@@@
ಎಲ್ಲರನ್ನ ರೋಮಾಂಚನಗೊಳಿಸುವ ಥ್ರಿಲ್ಲಿಂಗ್ ಎಪಿಸೋಡ್ ಗಳು , ಜೀವಕ್ಕಾಗಿ ಹೋರಾಡುವ ಗೇಮ್ ಜಗತ್ತಿನಲ್ಲಿ ಅವಳಿಗೆ ಸಿಗುವನೊಬ್ಬ ಸಾಥಿ… ಮುಂದೇನು ಹೇಳಲ್ಲಾ ನಿಮಗೆಲ್ಲಾ ಗೊತ್ತಾಗುತ್ತೆ… ಇಷ್ಟವೂ ಆಗುತ್ತೆ ….
– ನಿಹಾರಿಕಾ ರಾವ್ –
ಗಮನಿಸಿ : ಪ್ರತಿ ದಿನ ಬೆಳಿಗ್ಗೆ 6 . 30 ಗಂಟೆಗೆ ಹಾಗೂ ಸಂಜೆ 6 . 30 ರ ಸಮಯಕ್ಕೆ Saakshatv Special Series ( ಲೇಖಕರ ವಿಶೇಷ / Author Special ) ಸೀರೀಸ್ ನ ಪ್ರಕಟಿಸಲಾಗುತ್ತದೆ…
ನಮ್ಮ ವೆಬ್ ಸೈಟ್ ನ ‘ ಎಸ್ ಸ್ಪೆಷಲ್ / Saakshatv Special’ ಕ್ಯಾಟಗಿರಿಯಲ್ಲಿ ಎಲ್ಲಾ ಅಧ್ಯಾಯಗಳು ಲಭ್ಯವಿರುತ್ತವೆ..
ಇನ್ನೂ ಗೂಗಲ್ ನಲ್ಲಿ ‘ Saakshatv Special Series’ ಎಂದೂ ಸಹ ಸರ್ಚ್ ಮಾಡಿ ವಿಶೇಷ , ವಿಭಿನ್ನ ಕಥೆಗಳನ್ನ ಓದಬಹುದು…
ಇದೇ ರೀತಿ ಆಸಕ್ತಿದಾಯಕ , ವಿಭಿನ್ನ ಹಾಗೂ ರೋಚಕ ಕಥೆಗಳು , ಲೇಖನಗಳು , ಜೊತೆಗೆ ನ್ಯೂಸ್ ಅಪ್ ಡೇಟ್ ಗಳಿಗಾಗಿ ನಮ್ಮ ” Saakshatv” ಫಾಲೋ ಮಾಡಿ..
ಮೊದಲ ಅಧ್ಯಾಯ -1
ಅಧ್ಯಾಯ – 2
Saakshatv Special series – ನಿಗೂಢ ಟಿವಿ ಜಗತ್ತು – ಅಧ್ಯಾಯ 2 ( ಅದ್ಭುತ ಫ್ಯಾಂಟಸಿ ಜಗತ್ತು)