( ಹಿಂದಿನ ಎಪಿಸೋಡ್ ಗಳಿಗಾಗಿ ಲಿಂಕ್ ಗಳನ್ನ ಕ್ಲಿಕ್ ಮಾಡಿ )
ಮೊದಲನೇ ಅಧ್ಯಾಯಕ್ಕಾಗಿ ಲಿಂಕ್ ಕ್ಲಿಕ್ ಮಾಡಿ…
ಅಧ್ಯಾಯ 2
ರಾಮು ಮಾತು ಕೇಳಿ ಎಲ್ಲರೂ ಆತಂಕದಲ್ಲಿದ್ದರು..
” ಬಂದವರೆಲ್ಲಾ ಮಾಯ ಆಗ್ತಿದ್ದಾರಾ…??? ” ಎನ್ನುವ ಮಾಧವನ ಪ್ರಶ್ನೆಗೆ ಗಾಬರಿಯಾಗಿ ತಡಬಡಾಯಿಸುವ ರಾಮು,,,
” ಅದು ಅದು ಸಾರ್ ಇಲ್ಲಿ ನೀವು ಸುರಕ್ಷಿತವಾಗಿದ್ದೀರಾ… ಸುರಕ್ಷಿತವಾಗಿದ್ದೀರಾ… ಆದ್ರೆ ನೀವು ತಿಳಿಯಬೇಕಾದ ,, ಯಾರೂ ತಿಳಿಯದ ಸಾಕಷ್ಟು ರಹಸ್ಯಗಳು ಈ ಗಾರ್ಣಿಕ ( ಕಾಲ್ಪನಿಕ ಹೆಸರು …. ಎಲ್ಲಾ ಊರು ಹೆಸರು ಪ್ರತಿಯೊಂದು ಈ ಕಥೆಯಲ್ಲಿ ಕಾಲ್ಪನಿಕವಾಗಿರುತ್ತೆ ) ಅರಣ್ಯದಲ್ಲಿ ಅಡಗಿದೆ… ನಿಗೂಢ ರೋಚಕಗಳಿವೆ… ಈ ದಟ್ಟಾರಣ್ಯದಲ್ಲಿ ಸಾಕಷ್ಟು ಅಪರೂಪದ ಜೀವಿಗಳ ಜೊತೆಗೆ ,,, ಕಂಡೂ ಕೇಳರಿಯದ ಜೀವಿಗಳೂ , ವಿಷಕಾರಿ ಜಂತುಗಳು , ಸಾವಿರಾರು ಪ್ರಜಾತಿ ಹಾವು , ಹುಳ ಹಪ್ಪಟೆಗಳು , ಅಪಾಯಕಾರಿ ಪ್ರಾಣಿಗಳಿವೆ..
ಪರ್ವತಗಳ ಶಿಖರಗಳ ತಪ್ಪಲಲ್ಲಿ ಹರಿಯುವ ಶ್ರೇಷ್ಠ ( ನದಿ ) ನಮ್ಮ ಗ್ರಾಮದವರಿಗೆ ಆಸರೆಯಾಗಿದ್ದಾಳೆ… ನೀವು ಈ ಎಲ್ಲಾ ಜಾಗಗಳನ್ನ ಸುತ್ತಬಹುದು.. ಅಪಾಯಕಾರಿಯಾದ್ರೂ ಅರಣ್ಯಾಧಿಕಾರಿ ನಿಮ್ಮ ಜೊತೆಗೆ ಇರೋದ್ರಿಂದ ನೀವು ಗಾಬರಿಪಡಬೇಕಾಗಿಲ್ಲಾ.. ಆದ್ರೆ ಯಾರೂ ಯಾವುದೇ ಕಾರಣಕ್ಕೂ ಒಬ್ಬೊಬ್ಬರೇ ಮಾತ್ರ ಎಲ್ಲೂ ಹೋಗಬೇಡಿ..
ಈ ಕಾಡು ನೋಡೋಕೆ ಎಷ್ಟು ಸುಂದರವೋ ಅಷ್ಟೇ ಭೇದಿಸಲಾಗದ ನಿಗೂಢಗಳಿಂದ ಕೂಡಿದೆ… ದೆವ್ವ ಪಿಶಾಚಿಗಳ ವಾಸವಿದೆ…
ಎಂದವನ ಮಾತು ಕೇಳಿ
ಮಾಧವ ನಗುತ್ತಾ ” ಸ್ಟಾಪ್ ಇಟ್ ರಾಮು ದೆವ್ಬ ಅಂತೆ ಪಿಶಾಚಿ ಅಂತೆ ಭ್ರಮೆ… ಮೂಡನಂಬಿಕೆ… ಅಲ್ಲಾ ಈಗಲೂ ಈ ಜಮಾದಲ್ಲೂ ನಂಬುತ್ತೀರಾ ಅದನೆಲ್ಲಾ…”
ರಾಮು ” ಸರ್ ನಿಜ ಸರ್ ನೀವದನ್ನೆಲ್ಲಾ ನಂಬದೇ ಇರಬಹುದು ನಾವು ನಂಬುತ್ತೇವೆ… ”
ಶಾಮು ” ಸರ್ ಕತ್ತಲಾಗೋದ್ರೊಳಗೆ ವಾಪಸ್ ರೂಮ್ ಗಳಿಗೆ ಬಂದು ಸೇರಿ.. ಆಮೇಲೆ ನದಿ ದಾಟಿ ಆಕಡೆ ಮಾತ್ರ ಯಾವುದೇ ಕಾರಣಕ್ಕೂ ಹೋಗಬೇಡಿ ಸರ್.. ನದಿಯಾಚೆ ಇರುವ ಹಾಳು ಬಂಗಲೆಯಿಂದ ಸಾಧ್ಯವಾದಷ್ಟೂ ದೂರ ಇರಿ ಅಲ್ಲಿಗೆ ಹೋದವರು ಇಲ್ಲಿ ತನಕ ಯಾರೂ ವಾಪಸ್ ಜೀವಂತವಾಗಿ ಬಂದಿಲ್ಲ ಸರ್…
ವಾಟ್…!!! ” ಏನ್ ಜೋಕ್ ಮಾಡ್ತಿದ್ದೀರಾ ಶಾಮು ಅವರೇ ಅಲ್ಲಾ ಕಾಡಲ್ಲಿ ಯಾರೀ ಬಂಗಲೆ ಕಟ್ತಾರೆ.. ಅಲ್ಲಿಗೋದವರು ಯಾಕ್ ನಾಪತ್ತೆ ಆಗ್ತಾರೆ ” ಎಂದು ಕೇಳಿದ ಮಾಧವನ ಪ್ರಶ್ನೆಗೆ ಉತ್ತರಕ್ಕಾಗಿ ಪ್ರತಿಯೊಬ್ಬರು ಸುತ್ತಲೂ ಕೂತು ಗಮನವಿಟ್ಟು ಕೇಳ್ತಿದ್ದರು..
ಶಾಮು ” ಅಲ್ಲಿ ಮೊದಲಿಗೆ ಅದನ್ನ ಮೋಜಿಗಾಗಿ ಯಾರೋ ಶ್ರೀಮಂತರು ಕಟ್ಟಿಸಿದ್ದರು..ಈ ವಾತಾವರಣದಲ್ಲೊಂದು ಬಂಗಲೆ ಇದ್ರೆ ಚಂದ ಅಂತ.. ಆಮೇಲೆ ಅದೇನಾಯ್ತೋ ಅವರದನ್ನ ಒಬ್ಬ ಸೈಂಟಿಸ್ಟ್ ಗೆ ಮಾರಿಹಾಕಿದ್ರು… ಅದಾದ ನಂತರ ಆ ಸೈಂಟಿಸ್ಟ್ ಅಲ್ಲಿಗೆ ಬಂದು ಉಳಿದುಕೊಂಡಿದ್ದರು… ನದಿಯಾಚೆಯಿಂದಲೇ ರಸ್ತೆಯಿದೆ ಮೇನ್ ರೋಡ್ ಗೆ ತಲುಪುದಕ್ಕೆ.. ಈಗ ಅದನ್ನ ಬಂದ್ ಮಾಡಿಸಲಾಗಿದೆ… ಆ ಮನೆಯಲ್ಲಿ ಯಾರೊಬ್ಬರೂ ಇರಲಿಲ್ಲ ಅವನನ್ನ ಬಿಟ್ಟರೆ.. ಅಷ್ಟು ದೊಡ್ಡ ಮನೇಲಿ ಇದ್ದದ್ದು ಅವನೊಬ್ಬನೆ.. ಯಾರೊಬ್ಬರನ್ನೂ ಮನೆ ಹತ್ರ ಬಿಟ್ಕೊಳ್ತಿರಲಿಲ್ಲವಂತೆ ಆತ.. ಅವನ ಬಗ್ಗೆ ಗೊತ್ತಿರಲಿಲ್ಲ ಯಾರಿಗೂ… ಆ ಸೈಂಟಿಸ್ಟ್ ಆ ಮನೇಲಿ ಏನೋ ಎಕ್ಸ್ ಪೈರ್ಸ್ ಮಾಡ್ತಿದ್ರಂತೆ..
ಮಾಧವ್ ” ಯೂ ಮೀನ್ ಎಕ್ಸ್ ಪೆರಿಮೆಂಟ್”
ರಾಮು ” ಹು ಅದೇ ಸರ್..” ಹಾಗಂತ ಎಲ್ರೂ ಹೇಳ್ತಿದ್ದರು… ಅವರ ಜೊತೆಗೆ ಬಂದವರು ವಾಪಸ್ ಹೋಗ್ತಿರಲಿಲ್ಲ ಅಂತನೂ ಜನ ಮಾತನಾಡೋರು.. ಅದೇನಾಯ್ತೋ ಗೊತ್ತಿಲ್ಲ..
ಆ ಸೈಂಟಿಸ್ಟ್ ಒಂದಿನ ನಾಪತ್ತೆಯಾದ.. ಸುಮಾರು 7 ವರ್ಷಗಳ ಹಿಂದೆ… ಅವನನ್ನ ಹುಡುಕೋಕೆ ಅಂತ ಬಂದವರಿಗೆ ಅವರೆಲ್ಲೂ ಸಿಗಲಿಲ್ಲ… ಆ ನಂತರ ಅವರನ್ನ ಹುಡುಕೋಕೆ ಬಂದವರೆಲ್ಲಾ ನಾಪತ್ತೆಯಾಗೋದ್ರು ಅವರೆಲ್ಲಾ ಎಲ್ಲಿಗೆ ಹೋದ್ರು ಏನಾಯ್ತು ಏನೂ ಗೊತ್ತಿಲ್ಲ ಇಲ್ಲಿವರೆಗೂ..
ಅದಾದ ಮೇಲೆ ಆಕಡೆ ಜನ ಓಡಾಡೋದನ್ನೆ ಬಿಟ್ರು ಭಯಕ್ಕೆ… ಅದಾದ ಮೇಲೆ ಸುಮಾರು ಒಂದ್ಮೂರ್ಲಾಕು ವರ್ಷಗಳ ಕಾಲ ಯಾರೂ ಅತ್ತ ಕಡೆ ಹೋಗಿರಲಿಲ್ಲ..
ಆದ್ರೆ ಈಗ ಒಂದ್ ವರ್ಷದ ಕಳೆಗೆ ನಿಮ್ ಹಾಗೆ ಕೆಲ ಕಾಲೇಜ್ ಸ್ಟೂಡೆಂಟ್ಸ್ ಬಂದಿದ್ದರು… ಒಂದ್ 5 ಜನ… ಅವರಿಗೆ ಯಾರೆಷ್ಟೇ ಹೇಳಿದ್ರೂ ಕೇಳಲಿಲ್ಲ. ಕುತೂಹಲಕ್ಕೆ ಬಲಿಯಾಗಿ ಯಾರಿಗೂ ಹೇಳದೇ ಕೇಳದೆ ಅಲ್ಲಿಗೆ ಹೋಗಿದ್ರು… ಮಾರನೇ ದಿನ ಅವರು ಸಿಕ್ಕಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿ…
ಅರಣ್ಯಾಧಿಕಾರಿಗಳು, ಪೊಲೀಸರು , ಕಾಲೇಜಿನ ಅಧಿಕಾರಿಗಳು ಬೆಳಿಗ್ಗೆ ಹೋಗಿ ನೋಡಿದಾಗ ಅವರೆಲ್ಲಾ ಸಿಕ್ಕಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿ..
ಆಮೇಲೆ ಅವರನ್ನ ಪಟ್ಟಣಕ್ಕೆ ಕರೆದುಕೊಂಡು ಹೋದಾಗ ಅವರು ಅದೇನೋ ಕೋಮಾಗೆ ಹೋದ್ರಂತೆ… ಆಮೇಲೆ ಅವರನ್ನ ವಾಪಸ್ ಅವರ ಊರಿಗೆ ಕರೆದುಕೊಂಡು ಹೋದ್ರು…
ಆಮೇಲಿಂದ ಆಕಡೆ ಹೋಗೋದನ್ನ ಸಂಪೂರ್ಣವಾಗಿ ನಿಷೇಧಿಸಲಾಗಿದೆ… ಆದ್ರೆ ಅಲ್ಲಿ ದೆವ್ವ ಭೂತ ಇದೆ ಅದೇ ಸೈಂಟಿಸ್ಟ್ ಮತ್ತೆ ಎಲ್ಲರನ್ನೂ ನಾಪತ್ತೆ ಆಗೋತರ ಮಾಡಿದ್ದು ,
ಆ ಹುಡುಗರ ಆತ್ಮ ತೆಗೆದುಕೊಂಡು ಹೋಗಿರೋದು ಅಂತ ಊರವರು ಹೇಳ್ತಾರೆ..
ಇನ್ನೂ ಕೆಲವರು ಆ ಸೈಂಟಿಸ್ಟ್ ಏನೋ ಎಕ್ಸ್ ಪರಿಮೆಂಟ್ ವೇಳೆ ಸತ್ತಮೇಲೆ ಆತ್ಮ ಆಗಿ ಹೀಗೆಲ್ಲಾ ಮಾಡ್ತಿರಬೇಕು ಅಂತಾರೆ…
ಅವರ ಮಾತು ಕೇಳಿ ಪ್ರತಿಯೊಬ್ಬರೂ ಶಾಕ್ ಆಗಿದ್ದರೂ… ಎಲ್ಲರ ಕುತೂಹಲ ಹೆಚ್ಚಾಗಿತ್ತು….
@@@@@@@
– ನಿಹಾರಿಕಾ ರಾವ್ –
ಗಮನಿಸಿ : ಪ್ರತಿ ದಿನ ಬೆಳಿಗ್ಗೆ 6 . 30 ಗಂಟೆಗೆ ಹಾಗೂ ಸಂಜೆ 6 . 30 ರ ಸಮಯಕ್ಕೆ Saakshatv Special Series ( ಲೇಖಕರ ವಿಶೇಷ / Author Special ) ಸೀರೀಸ್ ನ ಪ್ರಕಟಿಸಲಾಗುತ್ತದೆ…
ನಮ್ಮ ವೆಬ್ ಸೈಟ್ ನ ‘ ಎಸ್ ಸ್ಪೆಷಲ್ / Saakshatv Special’ ಕ್ಯಾಟಗಿರಿಯಲ್ಲಿ ಎಲ್ಲಾ ಅಧ್ಯಾಯಗಳು ಲಭ್ಯವಿರುತ್ತವೆ..
ಇನ್ನೂ ಗೂಗಲ್ ನಲ್ಲಿ ‘ Saakshatv Special Series’ ಎಂದೂ ಸಹ ಸರ್ಚ್ ಮಾಡಿ ವಿಶೇಷ , ವಿಭಿನ್ನ ಕಥೆಗಳನ್ನ ಓದಬಹುದು…
ಇದೇ ರೀತಿ ಆಸಕ್ತಿದಾಯಕ , ವಿಭಿನ್ನ ಹಾಗೂ ರೋಚಕ ಕಥೆಗಳು , ಲೇಖನಗಳು , ಜೊತೆಗೆ ನ್ಯೂಸ್ ಅಪ್ ಡೇಟ್ ಗಳಿಗಾಗಿ ನಮ್ಮ ” Saakshatv” ಫಾಲೋ ಮಾಡಿ..