ADVERTISEMENT
Sunday, May 31, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 14

Author Special Series : ನಿಗೂಢ ಟಿವಿ‌ ಜಗತ್ತು - ಅಧ್ಯಾಯ 14 , ಫ್ಯಾಂಟಸಿ , ಥ್ರಿಲ್ಲಿಂಗ್ ಕಥೆ.. ಮತ್ತೊಂದು ಜಗತ್ತಿನ ಜೊತೆಗೆ ನಿಮ್ಮನ್ನ ಸೇರಿಸುವ ಕಥೆ..

Namratha Rao by Namratha Rao
August 20, 2022
in Newsbeat, Saaksha Special, ಎಸ್ ಸ್ಪೆಷಲ್
Saakshatv Special series

Saakshatv Special series

Share on FacebookShare on TwitterShare on WhatsappShare on Telegram

(  ಹಿಂದಿನ ಅಧ್ಯಾಯಗಳನ್ನ ಓದಲು , ಲೇಖನದ ಕೊನೆಯಲ್ಲಿ ನೀಡಲಾಗಿರೋ  ಲಿಂಕ್ ಗಳನ್ನ ಕ್ಲಿಕ್ ಮಾಡಿ )

ಅಧ್ಯಾಯ  – 14

Related posts

ಸೆಕ್ಸ್ ವರ್ಕರ್‌ಗಳ ವಿರುದ್ಧ ಕ್ರಿಮಿನಲ್ ಕೇಸ್‌ಗಳು ಕಾನೂನುಬಾಹಿರ: ಸುಪ್ರೀಂ ಕೋರ್ಟ್

ಸೆಕ್ಸ್ ವರ್ಕರ್‌ಗಳ ವಿರುದ್ಧ ಕ್ರಿಮಿನಲ್ ಕೇಸ್‌ಗಳು ಕಾನೂನುಬಾಹಿರ: ಸುಪ್ರೀಂ ಕೋರ್ಟ್

May 30, 2026
ಸಿದ್ದರಾಮಯ್ಯ ನಿರ್ಗಮನದ ಹಿಂದೆ ದಿಲ್ಲಿ ಒಪ್ಪಂದದ ರಹಸ್ಯ: ಅಹಿಂದ ವರ್ಗಕ್ಕೆ ಸತೀಶ್ ಜಾರಕಿಹೊಳಿ ಹೊಸ ಸಾರಥಿ

ಸಿದ್ದರಾಮಯ್ಯ ನಿರ್ಗಮನದ ಹಿಂದೆ ದಿಲ್ಲಿ ಒಪ್ಪಂದದ ರಹಸ್ಯ: ಅಹಿಂದ ವರ್ಗಕ್ಕೆ ಸತೀಶ್ ಜಾರಕಿಹೊಳಿ ಹೊಸ ಸಾರಥಿ

May 30, 2026

5 ನೇ ಹಂತ ಪ್ರವೇಶ ಮಾಡಿದವರಿಗೆ ಅಸಲಿ ಚಿಂತೆ ಶುರುವಾಗಿದ್ದು ತಾವಿರುವ ಜಾಗ ನೋಡಿ..

ಬಹಳ‌ ವಿಚಿತ್ರವಾಗಿದೆ.. ಏನ್ ಎಲ್ಲಿ ನೋಡಿದ್ರೂ ಬೆಟ್ಟ ಗುಡ್ಡ ಅಲ್ಲಲ್ಲಿ ಮೋಡ ತಮ್ಮಿಂದ ಸ್ವಲ್ಪ ಮುಂದೆ ದೊಡ್ಡ ಪ್ರಪಾತ ಅದರ ಹಿಮ್ಮುಖವಾಗಿ ಹರಿಯುತ್ತಿರುವ ಜಲಪಾತ..

ದೂರ ದೂರದ ವರೆಗೂ ಏನೂ ಗೊತ್ತಾಗ್ತಿಲ್ಲ.. ಇಲ್ಲಿ‌ ಅವರಿಗೆ ಯಾವ ಅಪಾಯ ಎದುರಾಗಲಿದೆ ಎಂಬ ವಿಚಾರ

ಅವರೆದುರಿಗೆ ದೈತ್ಯ ಮಾನವ ಕತ್ತಿ ಹಿಡಿದು ಬರುವ ವರೆಗೂ ಗೊತ್ತಾಗಿರಲಿಲ್ಲ..

ಅದ್ಯಾವಾಗ ಆ ದೈತ್ಯ ರಾಕ್ಷಸ ಅವರತ್ತ ಕತ್ತಿ‌ ಹಿಡಿದು ಬರುತ್ತಿದ್ದಾನೋ ಆಗ ಇವರೆಲ್ಲರ ಮುಂದೆಯೂ ಕತ್ತಿ ಪ್ರತ್ಯಕ್ಷವಾಯಿತು..

ಆಗಲೇ ತಿಳಿದಿದ್ದು ಅವರಿಗೆ ಈ ಬಾರಿ ಮುಖಾಮುಖಿಯಾಗಿ ಹೊಡೆದಾಡಿಕೊಳ್ಬೇಕು ಅಂತ..

ಎಲ್ಲರಿಗೂ ಉಸಿರು ನಿಂತಂತಾಗಿತ್ತು..

ಎಲ್ಲಿ ಆ ದೈತ್ಯ ಜೀವ…  ಎಲ್ಲಿ ಅದರ ಮುಂದೆ ಇಲಿಗಳಂತಿದ್ದ ಇವರು..

ಆದ್ರೆ ಎಲ್ಲರಂತೆ ಮೋಕ್ಷಿತ್ , ಮನಸ್ವಿ ಕುಗ್ಗಲಿಲ್ಲ‌, ಹೆದರಿದರೂ ತೋರಿಸಿಕೊಳ್ಳಲಿಲ್ಲ‌ ಭಯಭೀತರಾಗಲಿಲ್ಲ..

ಮೋಕ್ಷಿತ್ ಮನಸ್ವಿ ಎಲ್ಲರ ಮನವೊಲಿಸಿ , ಒಗ್ಗಟ್ಟಿನಲ್ಲಿ ಬಲವಿದೆ ವಾಕ್ಯದ ಮೂಲಕ ಎಲ್ಲರ ವಿಶ್ವಾಸ ಹೆಚ್ಚಿಸಿದ್ದರು… ಆಗ ಅವರ ಪ್ಲಾನ್ ಕೂಡ ರೆಡಿಯಾಗಿತ್ತು.. ಹೇಗೆ ಆ ರಾಕ್ಷಸನ ಸಂಹಾರ ಮಾಡಬೇಕೆಂದು..

ಅದೇ ಸಮಯಕ್ಕೆ ಸರಿಯಾಗಿ ಗೇಮ್ ಹುಡುಗಿ ಧ್ವನಿ

Wellcome to Monster World

ಅದೃಶ್ಯ ಬೋರ್ಡ್ ಮೇಲೆ ದಿನ 4
ಅಂತೆಲ್ಲಾ‌ ಉಳಿದ ಮಾಹಿತಿಯೂ ಪ್ರಕಟವಾಗಿದೆ..

ಆದ್ರೆ ಈ ರಾಕ್ಷಸನ ಸಂಹಾರಕ್ಕೆ ಅವರ ಬಳಿ ಇರುವುದು 10 ನಿಮಿಷ…  ಇದನ್ನ ನೋಡಿಯೇ ಅವರ ಜೀವ ಬಾಯಿಗೆ ಬಂದಾಗಿತ್ತು..

ಎಲ್ಲರೂ ಒಟ್ಟಾಗಿ ಖಡ್ಗ ಜಫಲಿಸುತ್ತಾ ಮೊದಲಿಗೆ ಆ ರಾಕ್ಷಸನ ಕಾಲುಗಳು , ಸೂಕ್ಷ್ಮ ಅಂಗಾಗಳ ಮೇಲೆ ದಾಳಿ ಮಾಡಿದರೆಬ, ಮೋಕ್ಷಿತ ಆ ದೈತ್ಯನ ದೇಹದ ಮೇಲೆಯೇ ಮರ ಹತ್ತುವಂತೆ ಹತ್ತಿ‌ ಮೂಗುಗೆ ಕಚಗುಳಿ ಇಟ್ಟು ನಗಿಸಿ ಅದನ್ನ‌ ಕೆಳಗುರುಳಿಸಿದರೆ ಅದರ ಕರ್ಕಶ ನಗುವಿನ ಧ್ವನಿ ಜೊತೆಗೆ ಧರೆಗುರುಳಿದ ಸದ್ದಿಗೆ  ಪಕ್ಷಿಗಳು ಹೆದರಿ ಒಟ್ಟಿಗೆ ಹಾರಿದ ದೃಶ್ಯ ಭಯಾನಕ… ಸಾಧ್ಯವಾದಷ್ಟೂ ಎಲ್ಲರೂ ಆ ರಾಕ್ಷಸನಿಗೆ ಹಾನಿ ಮಾಡಿ ಎಲ್ಲರೂ ಓಡೋಡಿ ಹೋಗ್ತಿದ್ದಾರೆ.. ರಾಕ್ಷಸನೂ ಎದ್ದು ಅವರ ಹಿಂದೆ ಹಿಂದೆ ಓಡಿಬರುತ್ತಿದ್ದರೆ ಭೂಮಿ ಕಂಪಿಸುತ್ತಿದೆ.. ಭಯದಲ್ಲಿ ಎಲ್ಲರೂ ಮುಂದೆ ಓಡಿಹೋಗಿ ಹೇಗೋ ಹಸಿರು ಗೆರೆ ದಾಟಿಯೂ ಬಿಟ್ಟರಾದರೆ ಮನಸ್ವಿ ಹಿಂದೆ ಬಿದ್ದು ಬಿಟ್ಟಳು..  ಅವಳ ತೀರ ಸನಿಹದಲ್ಲಿ ರಾಕ್ಷಸನಿದ್ದಾನೆ..  ಕಾಲು ಜಾರಿ ಮನಸ್ವಿ‌ ಬಿದ್ದುಬಿಟ್ಟಿದ್ದಾಳೆ.. ಭಯಕ್ಕೆ ಅವಳು ಕಣ್ಮುಚ್ಚಿದರೆ ತಕ್ಷಣ ಅವಳ ಕೈ ಹಿಡಿದ ಮೋಕ್ಷಿತ್ ಅವಳನ್ನ ಎಳೆದುಕೊಂಡು ಹಸಿರು ಗೆರೆ ದಾಟಿಯೇ ಬಿಡುವನು…

ಭಯಕ್ಕೆ ಜೋರಾಗಿ ಏದುಸಿರು ಬಿಡುತ್ತಿದ್ದ ಮನಸ್ವಿಯನ್ನ ಅಪ್ಪಿ ತಲೆ ಕೂದಲು ಸವರಿ ಸಮಾಧಾನ ಮಾಡುತ್ತಾ‌ ಅವಳ ಹಣೆಗೆ ಮುತ್ತಿಡುವನು…

ಎಲ್ಲರಲ್ಲೂ ಸಮಾಧಾನ ಈಗ ಮುಂದೆ 6 ನೇ ಹಂತವೆಂಬ ಖುಷಿ.. ಮತ್ತೊಂದೆಡೆ ಸೈಂಟಿಸ್ಟ್ ಗೆ ಕೋಪವೂ ಜೊತೆಗೆ ಅಹಮ್ … ಅವರೂ ಏನೇ ಮಾಡಿದರೂ ಇನ್ನೆರೆಡು ಹಂತ ತಲುಪೋದಕ್ಕೆ ಸಾಧ್ಯವೇ ಇಲ್ಲ ಎಂಬ ಅತಿಯಾದ ಆತ್ಮ‌ವಿಶ್ವಾಸ…

ಎಲ್ಲರೂ ಬೆಳಕು ಪ್ರವೇಶಿಸಿ 6 ನೇ ಹಂತಕ್ಕೆ ಪ್ರವೇಶಿಸಿದರೆ ತಾವು ನಿಂತಿರುವ ನೆಲ ತಮ್ಮ ಸುತ್ತಲಿನ ವಾತಾವರಣ ನೋಡಿ ಖುಷಿಯೂ , ಗೊಂದಲವೂ , ಆತಂಕವೂ , ಕಾತರವೂ. ಬಾಯಲ್ಲಿ‌ ನೀರೂರುತ್ತಿದೆ ಕೂಡ..

ಯಾಕಂದ್ರೆ ಅವರಿದ್ದದ್ದು ಚಾಕಲೇಟ್ ಲ್ಯಾಂಡ್ ನಲ್ಲಿ…

Wellcome to Stage -6 – chocolate Land

ಚಾಕೊಲೇಟ್ ಲ್ಯಾಂಡ್ ನೋಡಿ‌ ಎಲ್ಲರಿಗೂ ಖುಷಿ ಬಾಯಲ್ಲಿ‌ ನೀರೂರುತ್ತಿದೆ.. ಎಲ್ಲಿ ನೋಡಿದ್ರೂ ಚಾಕೊಲೇಟ್ , ಕ್ಯಾಂಡಿ , ಪೇಸ್ಟ್ರಿ , ಐಸ್ ಕ್ರೀಮ್ ಲಾಲಿಪಾಪ್ , ವೇಫರ್ ಗಳು , ಗಿಡಬಳ್ಳಿ ,ಮರ , ಮನೆ , ಬೆಟ್ಟ , ಕಾಡು ಗುಡ್ಡ , ನದಿ ಭೂಮಿ , ಹುಲ್ಲು ಎಲ್ಲವೂ ಚಾಕಲೇಟ್ ಗಳೇ..

ಎಲ್ಲರೂ ಖುಷಿಯಲ್ಲಿ ಹುಚ್ಚರಾಗಿದ್ದಾರೆ.. ಮನಸ್ವಿ‌, ಮೋಕ್ಷಿತ್ ಬಿಟ್ಟು ,, ಅವರಿಗೆ ಪಕ್ಕಾ ಏನೋ ಆಗುತ್ತೆ ಅನ್ನೋ ಯೋಚನೆ.. ಮಿಕ್ಕವರೆಲ್ಲಾ ಸಿಕ್ಕಿದೆ ಚಾನ್ಸ್ ಅಂತ ಹೋಗಿ ಚಾಕಲೇಟ್ ಮನೆ ಕಡಿಯೋದೇನು , ಮರದ ಕೊಂಬೆ ಮುರಿದು ತಿನ್ನೋದೇನು..

ಆದ್ರೆ ಒಂದ್ ಸ್ವಲ್ಪ ಸೆಕೆಂಡ್ ನಲ್ಲೇ ಅವರ ಸುತ್ತಲೂ ಇದ್ದ ಚಾಕಲೇಟ್ ವಸ್ತುಗಳಿಗೆ ಜೀವ ಬಂದು ಎಲ್ಲವೂ ಕಣ್ಬಿಟ್ಟಿದ್ದವು.. ಅವುಗಳ ಕಣ್ಗಳು ಭಯಾನಕವಾಗಿದ್ದವು…

ಎಲ್ಲರೂ ಹೆದರಿ ಹೆಜ್ಜೆಗಳನ್ನ ಹಿಂದಿಂದೆ ಇಟ್ಟರೆ ಐಸ್ ಕ್ರೀಮ್ ಚಾಕಲೇಟ್ ಗಳಿಗೆ ಕೈ ಕಾಲುಗಳು ಬಂದು ಅವರ ಹತ್ತಿರಕ್ಕೆ

ವಿಚಿತ್ರವಾಗಿ ಭಯಾನಕವಾಗಿ ಕಿಕಿಕಿಕಿಕಿ ಅಂತ ನಗುತ್ತಾ ಬರುತ್ತಿದ್ದರೆ ಇವರೆಲ್ಲರ ಎದೆ ಬಡಿತ ಜೋರಾಗಿದೆ…

ಆಗಲೇ ಈ ಹಂತವನ್ನ ಹೇಗೆ ದಾಟಬೇಕೆಂಬುದುರ ಹಿಂಟ್ ಸಿಕ್ಕಿದ್ದ ಮನಸ್ವಿ ಎಲ್ಲರೂ ಒಟ್ಟಿಗೆ ಕೈ ಹಿಡಿದಿಲೊಳ್ಳುವಂತೆ ನೀಡಿದ್ದ ಇಶಾರೆಗೆ ಎಲ್ಲರೂ ತಲೆಯಾಡಿಸಿ‌ ಒಟ್ಟಾಗಿ ಕೈ ಹಿಡಿದಿದ್ದರು…

ಮನಸ್ವಿ ಆದಷ್ಟು ಬೇಗ ಓಡೋಡಿ ಹೋಗ್ತಿದ್ದಾಳೆ ಮೋಕ್ಷಿತನ ಕೈ ಹಿಡಿದು… ಮೋಕ್ಷಿತ ಕೈ ಹಿಡಿದಿದ್ದ ಮಿಕ್ಕವರೂ ಅವರ ಹಿಂದಿಂದೆ ಓಡ್ತಿದ್ದಾರೆ.. ಅವರು ಓಡುತ್ತಿರುವ ಭೂಮಿ‌ ಬಿರುಕು ಬಿಡುತ್ತಿದೆ.. ಎಲ್ಲರಲ್ಲೂ ನಡುಕವಿದೆ..

ಮನಸ್ವಿಗೆ ಚಾಕಲೇಟ್ ಭೂಮಿಯಲ್ಲಿ ಒಂದು ಚಿಕ್ಕ ಮಣ್ಣಿನ ಭೂಮಿ ಕಂಡಿತ್ತು… ಆ ಭೂಮಿಗೆ ಅವಳು ತನ್ನ ಪಾದ ಸ್ಪರ್ಷ ಮಾಡಿದ್ದಳು.. ಇಕ್ಕಟ್ಟಿನ ಮಣ್ಷುಭೂಮಿ ಅದು ಕಷ್ಟ ಪಟ್ಟು ನಾಲ್ವರು ನಿಲ್ಲಬಹುದಾಗಿತ್ತು.. ಆದ್ರೆ ಎಲ್ಲರೂ ಚಾಕಲೇಟ್ ಭೂಮಿಯಿಂದ ಹೊರ ನಿಂತರೇನೇ ಉಳಿಗಾಲ ಎನ್ನುವುದನ್ನ ಅರಿತಿದ್ದರು..

ಆಗಲೇ ಎಲ್ಲರೂ ಮನಸ್ವಿ‌ ಮೋಕ್ಷಿತನ ನಕಲು ಮಾಡಿದ್ದು.. ಮೋಕ್ಷಿತನ ಹೆಗಲೇರಿ ಕುಳಿತಳು ಮನಸ್ವಿ.. ಅಂತೆಯೇ ಮಿಕ್ಕವರೂ ಮಾಡಿದರು.. ಟಿಕ್ ಟಿಕ್ ಸದ್ದು ಕೇಳಿಸಿತು.. 10 ಕೌಂಟ್ ಡೌನ್ ಆದ ನಂತರ ಇದ್ದಕ್ಕಿದ್ದ ಹಾಗೆ ಅವರ ಸುತ್ತಲಿದ್ದ ಚಾಕೋಲೇಟ್ ಭೂಮಿ‌ ಮಾಯವಾಗಿತ್ತು.. ಸಾಮಾನ್ಯ ಮಣ್ಣಭೂಮಿಗೆ ಪರಿವರ್ತನೆಗೊಂಡು ಹರಿಯುತ್ತಿದ್ದ ಚಾಕಲೇಟ್ ನದಿ ನೀರಿನ ನದಿಗೆ ಬದಲಾಗಿ ಗಿಡ ಮರ ಪರ್ವತಗಳು ಸಹಜವಾಗಿ‌ ಪರಿವರ್ತನೆಗೊಂಡಿದ್ದು ನೋಡಿ ಎಲ್ಲರ ಜೀವ ಮರಳಿ ಬಂದಂತಾಗಿದ್ರೆ ,,

ಹೊರಗೆ ಸೈಂಟಿಸ್ಟ್ ಕೋಪ ಕ್ಷಣ ಕ್ಷಣಕ್ಕೂ ಏರುತ್ತಲೇ ಇದೆ..

ಎಲ್ಲಿರಿಗೂ ಹಸಿರು ನಿಶಾನೆ ಕಾಣಿಸಿ ಖುಷಿಯಲ್ಲಿ ಎಲ್ಲರೂ ಭಾವುಕರಾಗಿ ಆ ನಿಶಾನೆ ದಾಟಿದ್ದರು.. ಅವರಿಗೆ ಈಗ ಖುಷಿಯೂ ಜೊತೆಗೆ ಹೆದರಿಕೆಯೂ… ಕೊನೆಯ ಹಂತದ ವರೆಗೂ ಕಷ್ಟ ಪಟ್ಟು‌ ಬಂದಿದ್ದೇವೆ.. ಈ ಹಂತ ದಾಟಲೇ ಬೇಕೆಂಬ ಹಂಬಲ.. ಚೂರು ಎಡವಿದರೂ ಮೊದಲನೇ ಹಂತಕ್ಕೆ ಮರಳುವ ಆತಂಕ..

ಅಂತೂ ಇಂತೂ 7 ನೇ ಹಂತಕ್ಕೆ‌ ಪ್ರವೇಶಿಸಿಯೇ ಬಿಟ್ಟರು…

ಆದ್ರೆ ಅವರು ಈ ಬಾರಿ ಯಾವುದೋ ಕಾಡಿನಲ್ಲಿರಲಿಲ್ಲ ಬದಲಾಗಿ ದೊಡ್ಡ ಹಾಳುಬಿದ್ದ ಬಂಗಲೆ ಹೊರಗೆ ನಿಂತಿದ್ದರು…

ಆ ಬಂಗಲೆ ಸುತ್ತ ಭಯಾನಕ ಜೊತೆಗೆ ಮನಮೋಹಕ ದೃಶ್ಯ … ನೀರು ,,, ಮೇಲೆ ಸೇತುವೆ ,,, ಸುತ್ತ  ಮರಗಿಡಗಳ ಸಾಲು ಮನಸ್ಸಿಗೆ ಮುದವೂ ನೀಡ್ತಿದೆ… ಭಯವನ್ನೂ ಹೆಚ್ವಿಸುತ್ತಿದೆ..

ಗೇಮ್ ಹುಡುಗಿ ಧ್ವನಿ ಕೇಳಿತ್ತು..

Wellcome to Final stage – Puzzle world

– ನಿಹಾರಿಕಾ ರಾವ್ –

ಗಮನಿಸಿ :  ಪ್ರತಿ ದಿನ ಬೆಳಿಗ್ಗೆ 6 . 30 ಗಂಟೆಗೆ ಹಾಗೂ ಸಂಜೆ 6 . 30 ರ ಸಮಯಕ್ಕೆ  Saakshatv Special Series ( ಲೇಖಕರ ವಿಶೇಷ / Author Special ) ಸೀರೀಸ್ ನ ಪ್ರಕಟಿಸಲಾಗುತ್ತದೆ…

ನಮ್ಮ ವೆಬ್ ಸೈಟ್ ನ ‘ ಎಸ್ ಸ್ಪೆಷಲ್ / Saakshatv Special’ ಕ್ಯಾಟಗಿರಿಯಲ್ಲಿ ಎಲ್ಲಾ ಅಧ್ಯಾಯಗಳು ಲಭ್ಯವಿರುತ್ತವೆ..

ಇನ್ನೂ ಗೂಗಲ್ ನಲ್ಲಿ ‘ Saakshatv Special Series’ ಎಂದೂ ಸಹ ಸರ್ಚ್ ಮಾಡಿ ವಿಶೇಷ , ವಿಭಿನ್ನ ಕಥೆಗಳನ್ನ ಓದಬಹುದು…

ಇದೇ ರೀತಿ ಆಸಕ್ತಿದಾಯಕ , ವಿಭಿನ್ನ ಹಾಗೂ ರೋಚಕ ಕಥೆಗಳು , ಲೇಖನಗಳು , ಜೊತೆಗೆ ನ್ಯೂಸ್ ಅಪ್ ಡೇಟ್ ಗಳಿಗಾಗಿ ನಮ್ಮ ” Saakshatv” ಫಾಲೋ ಮಾಡಿ..

 

ಮೊದಲ ಅಧ್ಯಾಯ – 1

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 1

ಅಧ್ಯಾಯ – 2

Saakshatv Special series – ನಿಗೂಢ ಟಿವಿ ಜಗತ್ತು – ಅಧ್ಯಾಯ 2 ( ಅದ್ಭುತ ಫ್ಯಾಂಟಸಿ ಜಗತ್ತು)

ಅಧ್ಯಾಯ – 3

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 3

ಅಧ್ಯಾಯ – 4

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 4

ಅಧ್ಯಾಯ – 5

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 5

ಅಧ್ಯಾಯ – 6

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 6

ಅಧ್ಯಾಯ – 7

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 7

ಅಧ್ಯಾಯ  – 8

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 8

 

 

Tags: fantasynigooda tv jagattuSaakshatv Special Series
ShareTweetSendShare
Join us on:

Related Posts

ಸೆಕ್ಸ್ ವರ್ಕರ್‌ಗಳ ವಿರುದ್ಧ ಕ್ರಿಮಿನಲ್ ಕೇಸ್‌ಗಳು ಕಾನೂನುಬಾಹಿರ: ಸುಪ್ರೀಂ ಕೋರ್ಟ್

ಸೆಕ್ಸ್ ವರ್ಕರ್‌ಗಳ ವಿರುದ್ಧ ಕ್ರಿಮಿನಲ್ ಕೇಸ್‌ಗಳು ಕಾನೂನುಬಾಹಿರ: ಸುಪ್ರೀಂ ಕೋರ್ಟ್

by Shwetha
May 30, 2026
0

ಸ್ವಯಂಪ್ರೇರಿತವಾಗಿ ಲೈಂಗಿಕ ವೃತ್ತಿಯಲ್ಲಿ ತೊಡಗಿಸಿಕೊಳ್ಳುವ ವಯಸ್ಕ ಮಹಿಳೆಯರ ವಿರುದ್ಧ ದಾಳಿ ನಡೆಸುವುದು ಅಥವಾ ಕ್ರಿಮಿನಲ್ ಪ್ರಕರಣ ದಾಖಲಿಸುವುದು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ....

ಸಿದ್ದರಾಮಯ್ಯ ನಿರ್ಗಮನದ ಹಿಂದೆ ದಿಲ್ಲಿ ಒಪ್ಪಂದದ ರಹಸ್ಯ: ಅಹಿಂದ ವರ್ಗಕ್ಕೆ ಸತೀಶ್ ಜಾರಕಿಹೊಳಿ ಹೊಸ ಸಾರಥಿ

ಸಿದ್ದರಾಮಯ್ಯ ನಿರ್ಗಮನದ ಹಿಂದೆ ದಿಲ್ಲಿ ಒಪ್ಪಂದದ ರಹಸ್ಯ: ಅಹಿಂದ ವರ್ಗಕ್ಕೆ ಸತೀಶ್ ಜಾರಕಿಹೊಳಿ ಹೊಸ ಸಾರಥಿ

by Shwetha
May 30, 2026
0

ಬೆಂಗಳೂರು: ರಾಜ್ಯ ರಾಜಕಾರಣದ ದಿಢೀರ್ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ, ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ಹಲವು ಸ್ಫೋಟಕ ಮತ್ತು...

ಸಚಿವ ಸಂಪುಟದ ಫೈನಲ್ ಲಿಸ್ಟ್ ಸಿದ್ಧ? ಕೃಷ್ಣ ಬೈರೇಗೌಡರಿಂದ ದಿನೇಶ್ ಗುಂಡುರಾವ್ ವರೆಗೆ ಯಾರಿಗೆ ಸಿಗಲಿದೆ ಚಾನ್ಸ್?

ಸಚಿವ ಸಂಪುಟದ ಫೈನಲ್ ಲಿಸ್ಟ್ ಸಿದ್ಧ? ಕೃಷ್ಣ ಬೈರೇಗೌಡರಿಂದ ದಿನೇಶ್ ಗುಂಡುರಾವ್ ವರೆಗೆ ಯಾರಿಗೆ ಸಿಗಲಿದೆ ಚಾನ್ಸ್?

by Shwetha
May 30, 2026
0

ರಾಜ್ಯ ರಾಜಕಾರಣದಲ್ಲಿ ಇದೀಗ ನೂತನ ಸಚಿವ ಸಂಪುಟ ರಚನೆಯದ್ದೇ ಬಹುದೊಡ್ಡ ಸದ್ದು. ಕಾಂಗ್ರೆಸ್ ವಲಯದಲ್ಲಿ ಸಚಿವ ಸ್ಥಾನಕ್ಕಾಗಿ ಬಿರುಸಿನ ಚಟುವಟಿಕೆಗಳು ಹಾಗೂ ಭಾರೀ ಕಸರತ್ತುಗಳು ತೆರೆಮರೆಯಲ್ಲಿ ನಡೆಯುತ್ತಿವೆ....

ದೆಹಲಿಯಲ್ಲಿ ಸಿದ್ದರಾಮಯ್ಯ ನಾಯಕತ್ವಕ್ಕೆ ಖರ್ಗೆ ಮೆಚ್ಚುಗೆ

ದೆಹಲಿಯಲ್ಲಿ ಸಿದ್ದರಾಮಯ್ಯ ನಾಯಕತ್ವಕ್ಕೆ ಖರ್ಗೆ ಮೆಚ್ಚುಗೆ

by Shwetha
May 30, 2026
0

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಯಲ್ಲಿ ನಿರ್ಗಮಿತ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಅವರ ದೀರ್ಘ ಸಾರ್ವಜನಿಕ ಜೀವನದ ಸೇವೆಯನ್ನು ಶ್ಲಾಘಿಸಿದರು. ಸಾಮಾಜಿಕ ನ್ಯಾಯ,...

ರಾಜಕಾರಣವೇ ಬೇಡ ಎನಿಸುವಷ್ಟು ನೋವು ಕೊಟ್ಟರು:ಪತ್ನಿಯ ವಿರುದ್ಧವೂ ಸುಳ್ಳು ಆರೋಪ ಮಾಡಿ ಮಾನಸಿಕ ಹಿಂಸೆ ನೀಡಿದರು; ಸಿದ್ದರಾಮಯ್ಯ ಕಣ್ಣೀರಿನ ವಿದಾಯದ ನುಡಿ

ರಾಜಕಾರಣವೇ ಬೇಡ ಎನಿಸುವಷ್ಟು ನೋವು ಕೊಟ್ಟರು:ಪತ್ನಿಯ ವಿರುದ್ಧವೂ ಸುಳ್ಳು ಆರೋಪ ಮಾಡಿ ಮಾನಸಿಕ ಹಿಂಸೆ ನೀಡಿದರು; ಸಿದ್ದರಾಮಯ್ಯ ಕಣ್ಣೀರಿನ ವಿದಾಯದ ನುಡಿ

by Shwetha
May 30, 2026
0

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸಿದ್ದರಾಮಯ್ಯ ಅವರು ಹೊರಹಾಕಿರುವ ಮಾತುಗಳು ಕೇವಲ ರಾಜಕೀಯ ಹೇಳಿಕೆಗಳಲ್ಲ, ಅವು ಹತ್ತಾರು ವರ್ಷಗಳ ಕಾಲ ಸಾರ್ವಜನಿಕ ಜೀವನದಲ್ಲಿದ್ದ ಒಬ್ಬ ನಾಯಕನ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram