Thursday, February 9, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 7

Author Special Series : ನಿಗೂಢ ಟಿವಿ‌ ಜಗತ್ತು - ಅಧ್ಯಾಯ 7 , ಫ್ಯಾಂಟಸಿ , ಥ್ರಿಲ್ಲಿಂಗ್ ಕಥೆ.. ಮತ್ತೊಂದು ಜಗತ್ತಿನ ಜೊತೆಗೆ ನಿಮ್ಮನ್ನ ಸೇರಿಸುವ ಕಥೆ..

Namratha Rao by Namratha Rao
August 17, 2022
in Newsbeat, Saaksha Special, ಎಸ್ ಸ್ಪೆಷಲ್
Saakshatv Special Series
Share on FacebookShare on TwitterShare on WhatsappShare on Telegram

(  ಹಿಂದಿನ ಅಧ್ಯಾಯಗಳನ್ನ ಓದಲು , ಲೇಖನದ ಕೊನೆಯಲ್ಲಿ ನೀಡಲಾಗಿರೋ  ಲಿಂಕ್ ಗಳನ್ನ ಕ್ಲಿಕ್ ಮಾಡಿ )

ಅಧ್ಯಾಯ – 7

Related posts

pawan kalyan

Pawan Kalyan:  ಖಿನ್ನತೆಯಿಂದಾಗಿ  ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೆ –  ಪವನ್ ಕಲ್ಯಾಣ್….

February 9, 2023
Shivarajkumnar

Shivaraj kumar : ಒಳ್ಳೆಯ ಪಾತ್ರ ಸಿಕ್ಕರೆ ಸಣ್ಣ ಪಾತ್ರವಾದರೂ ನಟಿಸುತ್ತೇನೆ…  

February 9, 2023

ಸೈಂಟಿಸ್ಟ್ ಮಾತು ಕೇಳಿ ಕೆಲ ಸಮಯ ಮೌನವಾಗಿದ್ದರು ಇಬ್ಬರೂ..

ಆನಂತರ ಮೇಲೇಳುವ ಮನಸ್ವಿ ಸೀದಾ ಹೋದವಳೇ ಕಿಟಕಿಯ ಕರ್ಟನ್ ಸರಿಸಿ ಹೊರಗಡೆ ನೋಡಿದವಳಿಗೆ ಯಾರೂ ಕಾಣುವುದಿಲ್ಲ.. ಝೋಂಬಿಗಳ ಸುಳಿವು ದೂರ ದೂರದ ವರೆಗೂ ಇರೋದಿಲ್ಲ…

ಇವಳನ್ನೇ ದಿಟ್ಟಿಸುತ್ತಿದ್ದ ಮೋಕ್ಷಿತನಿಗೆ ಗೊಂದಲ..
ಏನ್ ಮಾಡ್ತಾ ಇದ್ಯಾ…??? ಏನ್ ಪ್ಲಾನ್ ಮಾಡಿಕೊಂಡಿದ್ಯಾ ಎಂದವನಿಗೆ ಉತ್ತರಿಸಿದ ಹುಡುಗಿ,,,???
ಇಲ್ಲಿಂದ ಹೊರಗಡೆ ಹೋಗೋದ್ಹೇಗೆ ,,, ಈ ಸ್ಟೇಜ್ ನ ಕ್ಲಿಯರ್ ಮಾಡೋದ್ ಹೇಗೆ ಎಂದು ಕೇಳುವವಳ ಮಾತಿಗೆ ,,

ಇಲ್ಲಿಂದ ಎಲ್ಲಿಯವರೆಗೂ ಹೋದರೆ ನಿನಗೆ ಹೊಸ ಸ್ಟೇಜ್ ಸಿಗುತ್ತೆ ಅನ್ನೋದು ನನಗೆ ಗೊತ್ತಿದೆ.. ಆದ್ರೆ ಅದಕ್ಕೂ ಮುನ್ನ ನೀನು ಈ ಝೋಂಬಿಗಳಿಂದ ತಪ್ಪಿಸಿಕೊಳ್ಳಬೇಕು..

ಅವುಗಳು ಎಲ್ಲಿಂದ ಯಾವಾಗ ಹೇಗೆ ಅಟ್ಯಾಕ್ ಮಾಡುತ್ವೋ ಗೊತ್ತಿಲ್ಲ.. ಆದ್ರೆ ಹುಷಾರಾಗಿರಬೇಕು ತುಂಬಾ..  ಅವು ನಿನ್ನ ಕಚ್ಚಲಿಕೆ ಮಾತ್ರ ಬಿಡಬೇಡ ಎಂದವನ ಮಾತಿಗೆ
ಉತ್ತರಿಸುತ್ತಾ ಪ್ರಶ್ನೆ ಕೇಳುವ ಮನಸ್ವಿ… ಯಾಕೆ..??
ಎಂದವಳಿಗೆ ಮೋಕ್ಷಿತ್ ಉತ್ತರ ಕೇಳಿಯೇ ನಡುಕ ಶುರುವಾಗಿತ್ತು..

ಗಂಟಲು ಒಣಗಲಾರಂಭಿಸಿತ್ತು..

“ ಝೋಂಬಿಗಳು ಕಚ್ಚಿದರೆ ಸಿನಿಮಾದಲ್ಲಿ ನೀನು ನೋಡಿಲ್ವಾ ಅದೇ ರೀತಿ ಝೋಂಬಿ ಆಗೋಗುತ್ತೀಯ”

ಎಂದವನ ಮಾತು ಕೇಳಿ ಮನಸ್ವಿ ಕೈ ಕಾಲುಗಳು ಕಂಪಿಸಿತ್ತು..

ವಾಟ್..???

ಏನಂದ್ರಿ ಏನಂದ್ರಿ ನಾವು ಝೋಂಬಿಗಳಾಗ್ತೀವಾ…??
ಎಂದವಳ ಮಾತಿಗೆ ಕಿರು ನಕ್ಕವನು..

ಸಾರಿ ಸಾರಿ ತಮಾಷೆ ಮಾಡಿದೆ ಎಂದವನ ಕಡೆಗೆ ಸಿಟ್ಟಲ್ಲಿ ಗುರಾಯಿಸುವವಳ ಪರಿಗೆ ಮತ್ತೆ ಮತ್ತೆ ಮರುಳಾಗ್ತಿದ್ದ..

ಸಾರಿ ಮಾ ಸಾರಿ “ ಆದ್ರೆ ಅವು ಕಚ್ಚಿದ್ರೆ ಒಂದಿನ ನೀನು  ಪ್ರಜ್ಞೆ ತಪ್ತೀಯ… ಅಂದ್ರೆ  ನಿನ್ನ ಒಂದಿನ  ವ್ಯರ್ಥ…

ಎಂದವನ ಮಾತು ಕೇಳಿ ಮನಸಲ್ಲೇ ಲೆಕ್ಕಾಚಾರ ಹಾಕುತ್ತಾ ಅಂದ್ರೆ  ನಾನು ಅಪ್ಪಿ ತಪ್ಪಿ ಸಿಕ್ಕಿಹಾಕಿಕೊಂಡ್ರೆ ಒಂದಿನ ವೇಸ್ಟ್  ಆಗುತ್ತೆ.. ನಾನು ಆಮೇಲೆ ಎಲ್ಲಾ ಸ್ಟೇಜ್ ಗಳನ್ನ ಟೈಮ್ ಗೆ ಸರಿಯಾಗಿ ಮುಗಿಸಿ ಎಲ್ಲರನ್ನೂ ಹೊರಗಡೆ ಸುರಕ್ಷಿತವಾಗಿ ವಾಪಸ್ ಕರೆತರುವುದಕ್ಕೆ ಆಗಲ್ಲಾ ಎಂದುಕೊಂಡವಳು… ನೋ ನೋ ಹಾಗಾಗಬಾರದು.. ನಾನು ಹುಷಾರಾಗಿ ಬುದ್ದಿವಂತಿಕೆಯಿಂದ ಧೈರ್ಯದಿಂದ ಎಲ್ಲವನ್ನೂ ಎದುರಿಸಬೇಕೆಂದುಕೊಂಡವಳು ,,,

ಮೋಕ್ಷಿತ್ ,,, “ ಇಲ್ಲಿಂದ ಈ ಹಂತ ಮುಕ್ತಾಯಕ್ಕೆ ದಾರಿ ಗೊತ್ತಾ ಎಂದವಳು ಅವನಿಂದ ಕೆಲ ಮಾಹಿತಿ ಪಡೆದು ಕಡೆಗೂ ಧೈರ್ಯ ಮಾಡಿ  ಅವನಿಗೆ ಹೇಳುವ ಪ್ಲಾನ್ ಕೇಳಿದವನಿಗೆ ಇವಳ ಟ್ಯಾಲೆಂಟ್  ನೋಡಿ ಆಶ್ಚರ್ಯ.. ಈ ಹುಡುಗಿಯ ಕಾನ್ಫಿಡೆನ್ಸ್ ನೋಡಿ ,

ಎಲ್ಲರನ್ನೂ ಕಾಪಾಡಲೇಬೇಕೆಂದು ಕೊಂಡಿದ್ದವಳ ನಿಸ್ವಾರ್ಥ ಜೊತೆಗವಳ  ಧೈರ್ಯಕ್ಕೆ    ಮಂತ್ರಮುಗ್ಧನಾಗಿದ್ದವನ ಬಾಯಿಯಿಂದ ಮಾತೊಂದು ಹೊರಬಂದಿತ್ತು..

ಟ್ರೂ ಬ್ಯೂಟಿ ವಿತ್ ಬ್ರೇನ್ ಎಂದವನ ಮಾತು ಕೇಳಿ ಅವನತ್ತ ನೋಡಿದವಳ ಕಣ್ಣಲ್ಲಿದ್ದ ಸೆಳೆತ ಅವನನ್ನ ಕೊಂಚ ಕೊಂಚವೇ ದಿಕ್ಕು ತಪ್ಪಿಸುತ್ತಿತ್ತು.. ಎದೆ ತಾಳ ತಪ್ಪುತ್ತಿತ್ತು.. ಅವನ ಬಾಣದಂತಹ ಕಣ್ಣಿನಲ್ಲಿದ್ದ ಮಿಂಚಿಗೆ ಹುಡುಗಿಯೂ ಕರಗುತ್ತಿದ್ದಳು..

ಪ್ಲಾನ್ ಏನು..?? ಎಂದ ಮೋಕ್ಷಿತನ ಕಡೆ ನೋಡಿದವಳ ಮೊಗದಲ್ಲೊಂದು ಸಣ್ಣ ನಗುವಿತ್ತು..
ಅವನ ಕೈ ಹಿಡಿದವಳ ಪರಿಗೆ ಅರ್ಧ ಬೆದರಿಹೋಗಿದ್ದ ಹುಡುಗ , ಆದರೂ ಅವಳ ಹಿಂದೆಯೇ ಓಡೋಡಿ ಹೋದವನಿಗೆ ಎದೆ ಬಡಿತದ ಮೇಲೆ ನಿಯಂತ್ರಣ ತಪ್ಪಾಗಿತ್ತು… ಆದ್ರೂ ಎಲ್ಲಿಗೆ ಕರೆದುಕೊಂಡು ಹೋಗ್ತಿದ್ದಾಳೆ ಎಂದವನನ್ನ ಮನಸ್ವಿ ಕರೆದದೊಯ್ದದ್ದು ಮಾತ್ರ ಬಟ್ಟೆ ಕಾರ್ನರ್ ಗೆ…

ಎಸ್…. ಸೂಪರ್ ಮಾರ್ಕೆಟ್ ನಲ್ಲಿ ಕ್ಲಾತ್ಸ್ ಕಾರ್ನರ್ ಇದೆ ಅನ್ನೋದನ್ನ ಆರಂಭದಲ್ಲಿ ತಿಳಿದುಕೊಂಡಿದ್ದ ಹುಡುಗಿ ಮೇನ್ ಲೈಟ್ಸ್ ಆನ್ ಮಾಡಿ ಕ್ಲಾತ್ ಡಿಪಾರ್ಟ್ ಮೆಂಟ್ ಗೆ ಅವನನ್ನ ಎಳೆದೊಯ್ದವಳು ಅಲ್ಲಿದ್ದ ಎರೆಡು ಬ್ಯಾಗ್ ಗಳನ್ನ ತೆಗೆದುಕೊಂಡವಳು ಅವನಿಗೂ ಕೊಟ್ಟು ತಾನೂ ಹಿಡಿದವಳು ಅದಕ್ಕೆ ಒಂದೆರೆಡು ಟವೆಲ್ ಗಳನ್ನ ಹಾಕಿಕೊಂಡಿದ್ದಳು,.

ಅವನೂ ಸಹ…

ನಂತರ ಅಲ್ಲೇ  ಜಾಕೆಟ್ ಸೆಕ್ಷನ್ ಗೆ ಹೋದವಳು ಎಷ್ಟ್ ಸಾಧ್ಯವೋ ಅಷ್ಟು ದಪ್ಪ ಜಾಕೆಟ್  ಸೆಲೆಕ್ಟ್ ಮಾಡಿದ್ದಳು..

ಅವನಿಗೂ ಕತ್ತು ಇಡೀ ದೇಹ ಕವರ್ ಮಾಡುವಂತಹ ದಪ್ಪ ಬಟ್ಟೆ ಧರಿಸುವಂತೆ ಇಶಾರೆ ನೀಡಿದ್ದಳು.. ಅವನೂ ಹುಡುಕಿ ಕತ್ತು ಸಂಪೂರ್ಣ ಮುಚ್ಚಿಕೊಳ್ಳುವಂತೆ ಬಟ್ಟೆ  ಜಾಕೆಟ್ ಧರಿಸಿ ,, ದಪ್ಪದಾದ ಜೀನ್ಸ್ ಬ್ಯಾಂಟ್ ಧರಿಸಿ ,, ಬೂಟ್ಸ್  ಧರಿಸಿದವನು ,,, ನೀ ಪಾಡ್ ಗಳನ್ನೂ ಧರಿಸಿದ್ದ , ಸಾಲದಕ್ಕೆ ಕತ್ತಿಗೆ ಸ್ಕಾರ್ಪ್ ನಿಂದ ಸಂಪೂರ್ಣ ಕವರ್ ಮಾಡಿದವನು ,, ತಲೆಗೆ ಒಂದೆರೆಡು ಮೂರು ಒಂದರ ಮೇಲೊಂದು ಮಂಕಿ ಕ್ಯಾಪ್ ಧರಿಸಿ ಕಿವಿಯನ್ನೂ ಕವರ್ ಮಾಡಿಕೊಂಡಿದ್ದ.. ಅಲ್ಲೇ  ಇದ್ದ ಶೀಲ್ಡ್  ಮಾಸ್ಕ್ ಗಳನ್ನೂ ಧರಿಸಿ ಅವಳಿಗೊಂದು ತೆಗೆದುಕೊಂಡಿದ್ದ..

ಜೊತೆಗೆ ತುಂಬಾ ಗಟ್ಟಿಯಾದ ಎರೆಡು ಜೊತೆ ಲೆದರ್ ಗ್ಲೌಸ್ ಕೂಡ ತೆಗೆದುಕೊಂಡು ತಾನೂ ಧರಿಸಿ ಆಕೆಗೂ ಹೋಗಿ ಕೊಡುವನು.. ಅವನನ್ನ ನೋಡಿ ನಕ್ಕವಳನ್ನ ನೋಡಿ ,,, ನೀನೂ ಭಾರೀ ಚನಾಗಿ ಕಾಣಿಸ್ತಿಲ್ಲ ಮೇಡಮ್ ಎಂದವನ ಮಾತಿಗೆ ಟ್ರೈಯಲ್ ರೂಮಿನ ಕನ್ನ ಡಿ ಮುಂದೆ ನಿಂತವಳು ಮುಜುಗರಗೊಂಡಿದ್ದಳು…

ದೊಡ್ಡದಾಗ ಬಲೂನ್ ಟೈಪ್ ಜಾಕೆಟ್ ನಲ್ಲಿ ಒಳ್ಳೆ ಬಾಡಿ ಬಿಲ್ಡರ್ ತರ ಕಾಣಿಸುತ್ತಿದ್ದಳು.,. ಕತ್ತಿಗೆ ಶಾಲು … ಸುತ್ತಿದ್ದಳು… ಕೂದಲೆಲ್ಲ ಮಂಕಿ ಕ್ಯಾಪ್ ನೊಳಗೆ ಸೇರಿಸಿ ಕಿವಿ ಮುಚ್ಚಿಕೊಂಡಿದ್ದಳು..  ಅವನು ಕೊಟ್ಟಿದ್ದ ಶೀಲ್ಡ್ ಮಾಸ್ಕ್ ಧರಿಸಿದ್ದಳು.. ಗ್ಲೌಸ್ ಧರಿಸಿದ್ದಳು…  ಗಟ್ಟಿಯಾದ ಬೂಟ್ಸ್ ಧರಿಸಿ ಜೀನ್ಸ್ ಪ್ಯಾಂಟ್ ನ ಇಮ್ಮಡಿ ಭಾಗದ ಬಳಿ ಬೂಟ್ಸ್ ಒಳಗೆ ಟಕ್ ಮಾಡಿದ್ದಳು..

ಅವಳನ್ನ ನೋಡಿದ್ರೆ ಕಂಪ್ಲೀಟ್ ಲೇಡಿ ಫೈಟರ್ ಫೀಲಿಂಗ್ ಬರುತ್ತಿತ್ತು.. ಇಬ್ಬರೂ ಕೆಳಗೆ ಹೋದವರು
ನೀರಿನ ಬಾಟೆಲ್ ಗಳು ಕೆಲ ತಿನಿಸುಗಳನ್ನಷ್ಟೇ ತೆಗೆದುಕೊಂಡವಳ ಸ್ಮಾರ್ಟ್  ನೆಸ್ ನೋಡಿ ಕಳೆದುಹೋಗಿದ್ದವನ ಮನಸ್ಸಲ್ಲಿ ಇಷ್ಟ್ ತಲೆ ನಾವ್ಯಾಕ್ ಓಡಿಸಿರಲಿಲ್ಲ ಎಂದುಕೊಂಡು ನಿಂತಿದ್ದರೆ ,,, ಅವನಿಗೆ ಬೈದು ,,, ಹರಿತವಾದ ವಸ್ತುಗಳನ್ನ ತುಂಬಿಸ್ಕೋ , ಚಾಕು , ಚೂರಿ , ನೀರು ತಿನ್ನೋ ವಸ್ತುಗಳನ್ನ ಸ್ವಲ್ಪ ತುಂಬಿಸಿಕೋ..
ಸಿಕ್ಕಿದ್ದೆ ಚಾನ್ಸ್ ಅಂತ ಮತ್ತೆ ಬಾಚಿ ಬಳಿದುಕೊಂಡ್ ಬಿಟ್ಟೀಯ ಎಂದವಳ ಮಾತಿಗೆ ನಕ್ಕ..

ಇಬ್ಬರೂ ಏನೇನು ಬೇಕೆನುಸುತ್ತೋ ,,, ಅಷ್ಟನ್ನ ತುಂಬಿಕೊಂಡವರು ಓಡುವುದಕ್ಕೆ ಕಷ್ಟವಾಗದಷ್ಟು ಮಾತ್ರವೇ ಭಾರ ಹೊತ್ತಿದ್ದು.. ಈಗ ಇಬ್ಬರಿಗೂ  ಇದ್ದಿದ್ದು ಅಸಲಿ ,,,, ಸವಾಲು…. ಭಯದಲ್ಲಿ ಒಂದು ಧೀರ್ಘವಾದ ಉಸಿರು ತೆಗೆದುಕೊಂಡವರಿಬ್ಬರೂ ಇನ್ನೇನು ಹೊರಗಡೆ ಕಾಲಿಡಬೇಕು ಅಷ್ಟ್ರಲ್ಲೇ ಸೆಕ್ಯುರಿಟಿ ಆಫೀಸ್ ನಲ್ಲಿ ಸೇಫ್ಟಿಗಾಗಿ ಇಡಲಾಗಿದ್ದ ಎರೆಡು ಗನ್ ಗಳು ಕಂಡು ಇಬ್ಬರೂ ಸ್ವಲ್ಪ ಖುಷಿಯಾಗಿದ್ದರು… ಆದ್ರೆ ಇಬ್ಬರಿಗೂ ಗನ್ ಬಳಸುವುದು ಗೊತ್ತಿರಲಿಲ್ಲ.. ಆದ್ರೂ ಸುರಕ್ಷತೆಗಾಗಿ ಒಂದೊಂದು ತೆಗೆದುಕೊಂಡವರು…

ಒಂದೇ ಸಲವೇ ದೇವರನ್ನ ನೆನಪಪಿಸಿಕೊಂಡವರು ಮಾಲ್ ನಿಂದ ಹೊರಗೆ ಕಾಲಿಟ್ಟಿಯೇ ಬಿಟ್ಟರು.. ನಿಧಾನ ನಿಧಾನವಾಗಿ ಅತ್ತಿತ್ತ ನೋಡುತ್ತ ಹೊರಟವರಿಗೆ ಇಬ್ಬರಿಗೂ ಭಯವೇನೂ  ಕಡಿಮೆ ಇರಲಿಲ್ಲವಾದರೂ ಅನಿವಾರ್ಯತೆ ,,,ವಿಧಿ ಇಲ್ಲದೇ ಧೈರ್ಯವಂತರನ್ನಾಗಿಸಿತ್ತು ಮೇಲ್ನೋಟಕ್ಕಾದರೂ..

ಇಬ್ಬರೂ ನಿಧಾನವಾಗಿ ಅತ್ತಿತ್ತ ಕಣ್ಣಾಡಿಸುತ್ತಾ ನಡೆಯುತ್ತಿದ್ದರು.. ಎತ್ತ ನೋಡಿದರೂ ಕಣ್ಣಾಯಿಸಿದಷ್ಟೂ ದೂರ ಖಾಲಿ ಖಾಲಿ ಬಿಕೋ ಎನ್ನುತ್ತಿದ್ದ ರಸ್ತೆಗಳಲ್ಲಿ ಆವರಿಸಿದ್ದ ನೀರವ ಮೌನ..

ಇಬ್ಬರೂ ಹೀಗೆಯೇ ನಡೆದು ಒಂದಷ್ಟು ದೂರ ಬಂದವರಿಗೆ ಜೀವ ಬಾಯಿಗೆ ಬಂದಿದ್ದೇ ತಮ್ಮ ಮುಂದೆ ನಿಂತಿದ್ದ ದೊಡ್ಡ ಝೋಂಬಿಗಳ ಗುಂಪು ನೋಡಿ ಇಬ್ಬರ ಉಸಿರಾಟವೂ ಬಿಗಿಯಾಗಿತ್ತು ಪರಸ್ಪರ ಮುಖ ನೋಡಿಕೊಂಡವರಿಗೆ ಒಂದ್ ಹೆಜ್ಜೆಯೂ ಮುಂದಿಡುವ ಧೈರ್ಯವಿರಲಿಲ್ಲ.. ನಿಧಾನವಾಗಿ ಹೋಗುತ್ತಿದ್ದವರು ಎಡಕ್ಕೆ ತಿರುಗಿ ಆ ದಾರಿಯಲ್ಲಿ ಹೊರಟರೆ ಅಲ್ಲೂ ಇವೆ.. ಈ ದಾರಿಯಲ್ಲಿ ಹೊರಟರೂ ಇಲ್ಲೂ ಇವೆ.. ಮತ್ತೆ ಬಂದ ದಾರಿಗೆ ವಾಪಸ್ ಬಂದರೇ ಅಲ್ಲೂ ಇವೆ.. ಈಗ ಅವರು ಝೋಂಬಿಗಳ ನಡುವೆ ಬಂಧಿತರಾಗಿದ್ದರು..

ಹೋಗಲು ಬೇರೆ ದಾರಿಯಿಲ್ಲ… ಇಬ್ಬರಿಗೂ ಗೊತ್ತಿಲದೆಯೇ ಪರಸ್ಪರ ಕೈಗಳು ಬಂಧಿಯಾಗಿತ್ತು.. ಕೊಂಚ ಧೈರ್ಯ ಬಂದಿತ್ತು..    ಇಬ್ಬರೂ ಪರಸ್ಪರ ಮುಖ ನೋಡಿಕೊಂಡವರು ನಿಧಾನವಾಗಿ ಹೆಜ್ಜೆ ಇಡುತ್ತಾ ಸದ್ದು ಮಾಡದೇ ಉಸಿರಾಟದ ಸದ್ದೂ ಹೊರ ಬರದಂತೆ ಹೋಗುತ್ತಿದ್ದರು.. ಝೋಂಬಿಗಳಿಗೆ ಕಣ್ಣು ಕಾಣಿಸುತ್ತಿರಲಿಲ್ಲವಾದರೆ ಸದ್ದು ಕೇಳುತ್ತೆ ಎಂಬುದು ಇಬ್ಬರಿಗೂ ಅದಾಗಲೇ ಗೊತ್ತಾಗಿತ್ತು..

ಆದ್ರೆ ಹೀಗೆ ನಡೆದುಕೊಂಡು ಹೋಗುವಾಗ ಅಲ್ಲೇ  ಇದ್ದ ಪ್ಲಾಸ್ಟಿಕ್ ಖಾಲಿ ಬಾಟೆಲ್ ಮೇಲೆ ಗೊತ್ತಿಲ್ಲದೇ ಮನಸ್ವಿ ಕಾಲಿಟ್ಟಾಗಿತ್ತು.. ಝೋಂಬಿಗಳು ಅವರತ್ತ ತಿರುಗಿ ಅವರತ್ತ ಬರಲಾರಂಭಿಸಿದ್ದವು.. ಇವರಿಬ್ಬರಿಗೂ ಭಯದಲ್ಲಿ ಏನ್ ಮಾಡೋದಕ್ಕೂ ತೋಚದೆ ಹೆದರಿದ್ದರು.. ನಾಲ್ಕು ಬದಿಯಿಂದ ಅವರತ್ತ ಬರುತ್ತಿವೆ ಝೋಂಬಿಗಳು…

– ನಿಹಾರಿಕಾ ರಾವ್ –

ಗಮನಿಸಿ :  ಪ್ರತಿ ದಿನ ಬೆಳಿಗ್ಗೆ 6 . 30 ಗಂಟೆಗೆ ಹಾಗೂ ಸಂಜೆ 6 . 30 ರ ಸಮಯಕ್ಕೆ  Saakshatv Special Series ( ಲೇಖಕರ ವಿಶೇಷ / Author Special ) ಸೀರೀಸ್ ನ ಪ್ರಕಟಿಸಲಾಗುತ್ತದೆ…

ನಮ್ಮ ವೆಬ್ ಸೈಟ್ ನ ‘ ಎಸ್ ಸ್ಪೆಷಲ್ / Saakshatv Special’ ಕ್ಯಾಟಗಿರಿಯಲ್ಲಿ ಎಲ್ಲಾ ಅಧ್ಯಾಯಗಳು ಲಭ್ಯವಿರುತ್ತವೆ..

ಇನ್ನೂ ಗೂಗಲ್ ನಲ್ಲಿ ‘ Saakshatv Special Series’ ಎಂದೂ ಸಹ ಸರ್ಚ್ ಮಾಡಿ ವಿಶೇಷ , ವಿಭಿನ್ನ ಕಥೆಗಳನ್ನ ಓದಬಹುದು…

ಇದೇ ರೀತಿ ಆಸಕ್ತಿದಾಯಕ , ವಿಭಿನ್ನ ಹಾಗೂ ರೋಚಕ ಕಥೆಗಳು , ಲೇಖನಗಳು , ಜೊತೆಗೆ ನ್ಯೂಸ್ ಅಪ್ ಡೇಟ್ ಗಳಿಗಾಗಿ ನಮ್ಮ ” Saakshatv” ಫಾಲೋ ಮಾಡಿ..

ಮೊದಲ ಅಧ್ಯಾಯ – 1

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 1

ಅಧ್ಯಾಯ – 2

Saakshatv Special series – ನಿಗೂಢ ಟಿವಿ ಜಗತ್ತು – ಅಧ್ಯಾಯ 2 ( ಅದ್ಭುತ ಫ್ಯಾಂಟಸಿ ಜಗತ್ತು)

ಅಧ್ಯಾಯ – 3

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 3

ಅಧ್ಯಾಯ – 4

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 4

ಅಧ್ಯಾಯ – 5

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 5

ಅಧ್ಯಾಯ – 6

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 6

 

Tags: fantasymysterious tvnigooda tvSaakshatv Special Series
ShareTweetSendShare
Join us on:

Related Posts

pawan kalyan

Pawan Kalyan:  ಖಿನ್ನತೆಯಿಂದಾಗಿ  ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೆ –  ಪವನ್ ಕಲ್ಯಾಣ್….

by Naveen Kumar B C
February 9, 2023
0

Pawan Kalyan:  ಖಿನ್ನತೆಯಿಂದಾಗಿ  ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೆ -  ಪವನ್ ಕಲ್ಯಾಣ್….   ಖಿನ್ನತೆಯಿಂದಾಗಿ ನಾನು 17ನೇ ವರ್ಷಕ್ಕೆ ಅಣ್ಣ(ಚಿರಂಜೀವಿ) ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ...

Shivarajkumnar

Shivaraj kumar : ಒಳ್ಳೆಯ ಪಾತ್ರ ಸಿಕ್ಕರೆ ಸಣ್ಣ ಪಾತ್ರವಾದರೂ ನಟಿಸುತ್ತೇನೆ…  

by Naveen Kumar B C
February 9, 2023
0

Shivaraj kumar :  ಒಳ್ಳೆಯ ಪಾತ್ರ ಸಿಕ್ಕರೆ ಸಣ್ಣ ಪಾತ್ರವಾದರೂ ನಟಿಸುತ್ತೇನೆ... ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ವೇದ ಚಿತ್ರದ ಮೂಲಕ ಮತ್ತೊಮ್ಮೆ ತೆಲುಗು ಪ್ರೇಕ್ಷಕರ...

crude oil

Crude oil : ಭಾರತಕ್ಕೆ ತಲೆ ಭಾಗಿದ ಅಮೆರಿಕಾ; ರಷ್ಯಾದೊಂದಿಗೆ ತೈಲ ಖರೀದಿಗೆ ಅಭ್ಯಂತರವಿಲ್ಲ ಎಂದ US

by Naveen Kumar B C
February 9, 2023
0

ಭಾರತಕ್ಕೆ ತಲೆ ಭಾಗಿದ ಅಮೆರಿಕಾ; ರಷ್ಯಾದೊಂದಿಗೆ ತೈಲ ಖರೀದಿಗೆ ಅಭ್ಯಂತರವಿಲ್ಲ ಎಂದ US   ರಷ್ಯಾ - ಉಕ್ರೇನ್ ನಡುವಿನ ಯುದ್ಧದ ನಂತರ  ರಷ್ಯಾದೊಂದಿಗೆ  ತೈಲ ಖರೀದಿಸದಂತೆ ...

navodaya

Jobs : ದೇಶಾದ್ಯಂತ 58,000 ಕ್ಕೂ ಹೆಚ್ಚು ಹುದ್ದೆಗಳು ಖಾಲಿ – ಶಿಕ್ಷಣ ಇಲಾಖೆ

by Namratha Rao
February 9, 2023
0

Jobs : ದೇಶಾದ್ಯಂತ 58,000 ಕ್ಕೂ ಹೆಚ್ಚು ಹುದ್ದೆಗಳು ಖಾಲಿ - ಶಿಕ್ಷಣ ಇಲಾಖೆ ಕೇಂದ್ರ ಶಿಕ್ಷಣ ಸಚಿವಾಲಯದ ರಾಜ್ಯ ಖಾತೆ ಸಚಿವ ಸುಭಾಶ್‌ ಸರ್ಕಾರ್‌ ಅವರು...

kuttappa boxing

Indian Boxing ಭಾರತ ಬಾಕ್ಸಿಂಗ್ ತಂಡಕ್ಕೆ ಕನ್ನಡಿಗ ಕುಟ್ಟಪ್ಪ ಕೋಚ್

by Namratha Rao
February 9, 2023
0

Indian Boxing ಭಾರತ ಬಾಕ್ಸಿಂಗ್ ತಂಡಕ್ಕೆ ಕನ್ನಡಿಗ ಕುಟ್ಟಪ್ಪ ಕೋಚ್ ಭಾರತ ಪುರುಷರ ಬಾಕ್ಸಿಂಗ್ ತಂಡದ ಮುಖ್ಯ ಕೋಚ್ ಆಗಿ ದ್ರೋಭಾಚಾರ್ಯ ಪ್ರಶಸ್ತಿ ವಿಜೇತ ಕನ್ನಡಿಗ ಸಿ.ಎ.ಕುಟ್ಟಪ್ಪ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

pawan kalyan

Pawan Kalyan:  ಖಿನ್ನತೆಯಿಂದಾಗಿ  ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೆ –  ಪವನ್ ಕಲ್ಯಾಣ್….

February 9, 2023
Shivarajkumnar

Shivaraj kumar : ಒಳ್ಳೆಯ ಪಾತ್ರ ಸಿಕ್ಕರೆ ಸಣ್ಣ ಪಾತ್ರವಾದರೂ ನಟಿಸುತ್ತೇನೆ…  

February 9, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram