Pawan kalian: ಪವರ್ ಸ್ಟಾರ್ ಬರ್ತಡೇಗೆ ಹರಿಹರ ವೀರ ಮಲ್ಲು ಚಿತ್ರದ ಫಸ್ಟ್ ಗ್ಲಿಂಪ್ಸ್ ಬಿಡುಗಡೆ..
ತೆಲುಗು ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಇಂದು 51 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅಭಿಮಾನಿಗಳಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಪವನ್ ಕಲ್ಯಾಣ್ ನಟನೆಯ ಹರಿಹರ ವೀರ ಮಲ್ಲು ಚಿತ್ರದ ಗ್ಲಿಂಪ್ಸ್ ಬಿಡುಗಡೆಯಾಗಿದೆ.
ಒಂದು ನಿಮಿಷದ ಪ್ರೋಮೋದಲ್ಲಿ ಪವನ್ ಕಲ್ಯಾಣ್ ಏಕಾಂಗಿಯಾಗಿ ಕುಸ್ತಿ ಅಖಾಡದಲ್ಲಿ ಎದುರಾಳಿಗಳ ಮೇಲೆ ಸವಾರಿ ಮಾಡುತ್ತಿರುವುದನ್ನ ನೋಡಬಹುದು. ಚಿತ್ರದಲ್ಲಿ ಪವನ್ ಕಲ್ಯಾಣ್ ಲುಕ್ ಗೆ ಅಭಿಮಾನಿಗಹಳು ಫಿದಾ ಆಗಿದ್ದಾರೆ.
ಹರಿಹರ ವೀರ ಮಲ್ಲು ಪೌರಾಣಿಕ ಚಿತ್ರಕ್ಕಾಗಿ ಪವನ್ ಕಲ್ಯಾಣ್ ಮತ್ತು ನಿರ್ದೇಶಕ ಕ್ರಿಶ್ ಜಗರ್ಲಮುಡಿ ಅವರ ಜೊತೆ ಕೈಜೋಡಿಸಿದ್ದಾರೆ.
ಸೆಪ್ಟೆಂಬರ್ 2 ರಂದು, ಕ್ರಿಶ್ ಮತ್ತು ಹರಿಹರ ವೀರ ಮಲ್ಲು ನಿರ್ಮಾಪಕರು ಪವನ್ ಕಲ್ಯಾಣ್ ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ
ಕ್ರಿಶ್ ಜಗರ್ಲಮುಡಿ ಬರೆದು ನಿರ್ದೇಶಿಸಿಸುತ್ತಿರುವ ಪೌರಾಣಿಕ ಚಿತ್ರದಲ್ಲಿ ಪವನ್ ಕಲ್ಯಾಣ್ ವೀರ ಮಲ್ಲು ಪಾತ್ರದಲ್ಲಿ ನಟಿಸುತ್ತಿದ್ದಾರೆ. 17 ನೇ ಶತಮಾನದ ಮೊಘಲ್ ಸಾಮ್ರಾಜ್ಯದ ಹಿನ್ನೆಲೆಯಲ್ಲಿ ಕಥೆ ಸಾಗುತ್ತದೆ. ಚಿತ್ರದಲ್ಲಿ ಪವನ್ ಕಲ್ಯಾಣ್ ಅವರಲ್ಲದೆ, ನಿಧಿ ಅಗರ್ವಾಲ್, ಅರ್ಜುನ್ ರಾಂಪಾಲ್ ಮತ್ತು ನರ್ಗೀಸ್ ಫಕ್ರಿ ಕಾಣಿಸಿಕೊಂಡಿದ್ದಾರೆ. ಮೆಗಾ ಸೂರ್ಯ ಪ್ರೊಡಕ್ಷನ್ ನಿರ್ಮಿಸಿರುವ ಹರಿಹರ ವೀರ ಮಲ್ಲು ಮುಂದಿನ ವರ್ಷದ ಬೇಸಿಗೆಯಲ್ಲಿ ಬಿಡುಗಡೆಯಾಗಲಿದೆ.








