K.S. Eshwarappa | ಮುರುಘಾಮಠ ಶ್ರೀಗಳ ಬಗ್ಗೆ ಗೌರವ ಕಡಿಮೆ ಆಗಿಲ್ಲ
ಶಿವಮೊಗ್ಗ : ಮಠದ ಸ್ವಾಮೀಜಿಗಳು ಅಂದ್ರೆ ನನಗೆ ದೇವರು ಇದ್ದಂಗೆ, ಮುರುಘಾಮಠ ಶ್ರೀಗಳ ಬಗ್ಗೆ ಇನ್ನೂ ಗೌರವ ಕಡಿಮೆ ಆಗಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಚಿತ್ರದುರ್ಗ ಮುರುಘಾಮಠ ಶ್ರೀ ಗಳ ಬಂಧನ ವಿಚಾರವಾಗಿ ಶಿವಮೊಗ್ಗದಲ್ಲಿ ಮಾತನಾಡಿದ ಈಶ್ವರಪ್ಪ, ಮಠದ ಸ್ವಾಮೀಜಿಗಳು ಅಂದ್ರೆ ನನಗೆ ದೇವರು ಇದ್ದಂಗೆ. ಮುರುಘಾಮಠ ಶ್ರೀಗಳ ಬಗ್ಗೆ ಇನ್ನೂ ಗೌರವ ಕಡಿಮೆ ಆಗಿಲ್ಲ.
ತನಿಖೆಯಿಂದ ಎಲ್ಲವೂ ಹೊರಗೆ ಬರಲಿ, ಸತ್ಯವೂ ಸುಳ್ಳು ಎನ್ನುವುದು ಹೊರಗೆ ಬರಲಿ, ನಂತರ ತೀರ್ಮಾನ ತೆಗೆದುಕೊಳ್ಳೋಣ ಎಂದು ಹೇಳಿದರು.

ಒಂದೇ ಬಾರಿ ಸತ್ಯ ಮತ್ತು ಸುಳ್ಳು ಅಂತಾ ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಇಡೀ ದೇಶದಲ್ಲಿ ಮಠ ಮಂದಿರಗಳು ಭಕ್ತಿ ಜಾಗೃತಿ ಮಾಡುತ್ತೇವೆ.
ಹಿಂದೂ ಧರ್ಮ ಕ್ಕೆ ಪ್ರೇರಣೆ ಆಗಿರುವುದು ಸಾಧು ಸಂತರೇ. ಆ ಗೌರವ ನನಗೆ ಇವತ್ತಿಗೂ ಇದೆ, ಮುಂದೆ ಕೂಡಾ ಇರುತ್ತದೆ.
ಶ್ರೀ ಗಳ ಮೇಲೆ ಬಂದಿರುವ ಆರೋಪ ಸುಳ್ಳಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುವೆ. ಸತ್ಯ ಸುಳ್ಳು ತನಿಖೆಯಿಂದ ಹೊರಗೆ ಬರುತ್ತದೆ, ನಂತರ ಪ್ರತಿಕ್ರಿಯೆ ಕೊಡುತ್ತೇನೆ ಎಂದು ಹೇಳಿದ್ದಾರೆ.







