Udta Punjab! ಡ್ರಗ್ಸ್ ತೆಗೆದುಕೊಂಡು ನಡೆಯಲಾಗದೆ ನಿಂತ ಅಮೃತಸರದ ಯುವತಿ
ಮಾದಕ ದ್ರವ್ಯ ಸೇವನೆಯ ವಿಷಯದಲ್ಲಿ ಪಂಜಾಬ್ ಸುದ್ದಿ ಆಗುತ್ತಲೇ ಇರುತ್ತದೆ. ಇತ್ತೀಚೆಗೆ ಯುವತಿಯೊಬ್ಬಳು ಅಕ್ರಮ ಮಾದಕ ದ್ರವ್ಯ ಸೇವಿಸಿ ಕಾಣಿಸಿಕೊಂಡಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಭಗವಂತ್ ಮಾನ್ ನೇತೃತ್ವದ ರಾಜ್ಯ ಸರ್ಕಾರದ ವ್ಯಾಪಕ ಟೀಕೆಗೆ ಕಾರಣವಾಗಿದೆ.
ಎಎಪಿ ಶಾಸಕ ಜೀವನ್ ಜ್ಯೋತ್ ಕೌರ್ ಪ್ರತಿನಿಧಿಸುವ ಅಮೃತಸರ ಪೂರ್ವ ಕ್ಷೇತ್ರಕ್ಕೆ ಒಳಪಡುವ ಮಕ್ಬೂಲ್ಪುರ ಪ್ರದೇಶದಲ್ಲಿ ವೀಡಿಯೊವನ್ನು ಸೆರೆಹಿಡಿಯಲಾಗಿದೆ. ಈ ಪ್ರದೇಶ ಹೆಚ್ಚಿನ ಸಂಖ್ಯೆಯ ಮಾದಕ ವ್ಯಸನಿಗಳನ್ನು ಹೊಂದಿರುವ ಕುಖ್ಯಾತವಾಗಿದೆ.
ಮದ್ಯದ ಅಮಲಿನಲ್ಲಿ ಯುವತಿ ತನ್ನ ಕಾಲುಗಳ ಮೇಲೆ ನಿಲ್ಲಲಾಗದೆ ಹೆಣಗಾಡುತ್ತಿರುವುದನ್ನ ವಿಡಿಯೋದಲ್ಲಿ ಕಾಣಬಹುದು. ಮಹಿಳೆ ತನಗೆ ಡ್ರಗ್ಸ್ ಇಂಜೆಕ್ಷನ್ ಹಾಕಿಸಿಕೊಂಡಿದ್ದಾಳೆ ಎಂದು ಆ ಪ್ರದೇಶದ ನಿವಾಸಿಯೊಬ್ಬರು ವಿಡಿಯೋದಲ್ಲಿ ಆರೋಪಿಸಿದ್ದಾರೆ.
Arvind Kejriwal (Super CM) & Bhagwant Mann (titular CM) had promised to make Punjab “nasha mukt” in 1 week.
Due to drug overdose this girl is unable to stand on her feet properly in Maqboolpura,Punjab
From Delhi to Punjab-Kejriwal & AAP allowed Nasha & Sharab to flourish pic.twitter.com/JOq3hU3uN0
— Shehzad Jai Hind (Modi Ka Parivar) (@Shehzad_Ind) September 12, 2022
“ನಾವು ವೀಡಿಯೊದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದೇವೆ, ಅದು ಸ್ಪಷ್ಟವಾಗಿ ಹಳೆಯ ವಿಡಿಯೋ. ವೀಡಿಯೋ ಸೆರೆಹಿಡಿದ ವ್ಯಕ್ತಿಯನ್ನು ಗುರುತಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಡಿಸಿಪಿ ಮುಖ್ವಿಂದರ್ ಸಿಂಗ್ ಭುಲ್ಲರ್ ಹೇಳಿದ್ದಾರೆ.
ಎಎಪಿ ಮೇಲೆ ಬಿಜೆಪಿ ದಾಳಿ
ವೀಡಿಯೊ ವೈರಲ್ ಆದ ನಂತರ, ಬಿಜೆಪಿಯ ಶೆಹಜಾದ್ ಪೂನಾವಾಲಾ ಅವರು ಆಪ್ ವಿರುದ್ಧ ವಾಗ್ದಾಳಿ ನಡೆಸಿದರು. “ಅರವಿಂದ್ ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ಪಂಜಾಬ್ ಅನ್ನ 1 ವಾರದಲ್ಲಿ “ನಾಶ ಮುಕ್ತ” ಮಾಡುವುದಾಗಿ ಭರವಸೆ ನೀಡಿದ್ದರು. ಮಕ್ಬೂಲ್ಪುರದಲ್ಲಿ ಡ್ರಗ್ ಓವರ್ ಡೋಸ್ ನಿಂದಾಗಿ ಈ ಹುಡುಗಿ ತನ್ನ ಕಾಲ ಮೇಲೆ ಸರಿಯಾಗಿ ನಿಲ್ಲಲು ಸಾಧ್ಯವಾಗುತ್ತಿಲ್ಲ. ದೆಹಲಿಯಿಂದ ಅರವಿಂದ ಕೇಜ್ರವಾಲ್ ಮತ್ತು ಆಪ್ ಪಂಜಾಬ್ ಅನ್ನ ನಶೇ ಮತ್ತು ಮದ್ಯದಲ್ಲಿ ತೇಲುವಂತೆ ಮಾಡುತ್ತಿದೆ ಎಂದು ಹೇಳಿದ್ದಾರೆ.








