ಮುಂಬೈ : ಟಾಲಿವುಡ್ ನ ಸ್ಟಾರ್ ಹೀರೋಯಿನ್ ಗಳಲ್ಲಿ ಒಬ್ಬರಾದ ಪೂಜಾ ಹೆಗ್ಡೆ ತಮ್ಮ ನೆಚ್ಚಿನ ಕ್ರಿಕೆಟ್ ಆಟಗಾರ ಯಾರು ಎಂಬುದನ್ನು ರಿವೀಲ್ ಮಾಡಿದ್ದಾರೆ.ಲಾಕ್ ಡೌನ್ ಕಾರಣದಿಂದಾಗಿ ಸದ್ಯ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡತಿ ಪೂಜಾ ಹೆಗ್ಡೆ ಸಖತ್ ಆಕ್ಟೀವ್ ಆಗಿದ್ದಾರೆ. ಈ ಮಧ್ಯೆ ಅಭಿಮಾನಿಗಳೊಂದಿಗೆ ಮಾತನಾಡಿದ್ದ ಪೂಜಾ ಹೆಗ್ಡೆ ಸಾಕಷ್ಟು ವಿಶೇಷ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ನಿಮ್ಮ ನೆಚ್ಚಿನ ಕ್ರಿಕೆಟರ್ ಯಾರು ಎಂದು ಅಭಿಮಾನಿ ಒಬ್ಬ ಕೇಳಿದ ಪ್ರಶ್ನೆಗೆ ಪೂಜಾ ಉತ್ತರಿಸಿದ್ದು, ರಾಹುಲ್ ಡ್ರಾವಿಡ್ ಅವರನ್ನು ಕೊಂಡಾಡಿದ್ದಾರೆ.
‘ದಿ ವಾಲ್’ ರಾಹುಲ್ ದ್ರಾವಿಡ್ ಅವರಿಗೆ ನಾನು ಅಭಿಮಾನಿ. ಎಷ್ಟೇ ಆಟಗಾರರು ಬಂದರೂ ರಾಹುಲ್ ಅವರಿಗೆ ಯಾರು ಸಮ ಎನಿಸುವುದಿಲ್ಲ. ಸದ್ಯದ ಆಟಗಾರರಲ್ಲಿ ನನಗೆ ಧೋನಿ, ಕೆಎಲ್ ರಾಹುಲ್ ಫೇವರೆಟ್. ಎಷ್ಟು ಬ್ಯುಸಿ ಇದ್ದರೂ, ತಪ್ಪದೇ ಕ್ರಿಕೆಟ್ ನೋಡುತ್ತಿದೆ. ಅದು ಸಾಧ್ಯವಾಗದಿದ್ದರೆ ಸ್ಕೋರ್ ಎಷ್ಟು ಎಂದು ತಿಳಿದುಕೊಳ್ಳುತ್ತಿದೆ. ಕ್ರಿಕೆಟ್ ಎಂದರೇ ನನಗೆ ಅಷ್ಟು ಇಷ್ಟ ಎಂದು ಪೂಜಾ ಹೆಗ್ಡೆ ಹೇಳಿದ್ದಾರೆ.
ಕಳೆದ ವರ್ಷ ನಟಿ ಪೂಜಾ ಹೆಗ್ಡೆ, ‘ಅರವಿಂದ ಸಮೇತ’, ‘ಮಹರ್ಷಿ’, ‘ಗದ್ದಲಕೊಂಡ ಗಣೇಶ್’ ಸಿನಿಮಾಗಳೊಂದಿಗೆ ಬ್ಯಾಕ್ ಟು ಬ್ಯಾಕ್ ಹಿಟ್ ಪಡೆದಿದ್ದರು. ಅಲ್ಲದೇ 2020ರ ಆರಂಭದಲ್ಲಿ ಬಿಡುಗಡೆಯಾಗಿದ್ದ ‘ಅಲಾ ವೈಕುಂಠಪುರಮುಲೋ’ ಸಿನಿಮಾ ಕೂಡ ಪೂಜಾ ಹೆಗ್ಡೆಗೆ ಭಾರೀ ಯಶಸ್ಸು ತಂದು ಕೊಟ್ಟಿತ್ತು. ಸದ್ಯ ಪೂಜಾ ಹೆಗ್ಡೆ, ನಟ ಪ್ರಭಾಸ್ ನಟನೆಯ ರಾಧಾಕೃಷ್ಣ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.








