Mangalore : ಕುವೈತ್ ನಲ್ಲಿ ಅಪಘಾತ – ಮಂಗಳೂರಿನ ಯುವಕ ಸಾವು
ಮಂಗಳೂರು : ಕುವೈತ್ ನಲ್ಲಿ ನಡೆದ ಅಪಘಾತದಲ್ಲಿ ಮಂಗಳೂರು ಮೂಲದ ಯುವಕ ಕೊನೆಯುಸಿರೆಳೆದಿದ್ದಾರೆ.
33 ವರ್ಷದ ಬಜಾಲ್ ಪಕ್ಕಲಡ್ಕದ ಸಫಿಯಾ ಅವರ ಪುತ್ರ ಆಸೀಫ್ ಪಕ್ಕಲಡ್ಕ ಮೃತ ದುರ್ದೈವಿಯಾಗಿದ್ದಾರೆ.

ಆಸೀಫ್ ಕುವೈತ್ ನ ಕಂಪೆನಿಯೊಂದರಲ್ಲಿ ಸೇಲ್ಸ್ ಮನ್ ಆಗಿ ಕೆಲಸ ಮಾಡುತ್ತಿದ್ದರು.
ಶುಕ್ರವಾರ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬೈಕ್ ನಲ್ಲಿ ವಾಪಸ್ ಆಗುತ್ತಿದ್ದಾಗ ಕಾರು ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ.
ಮೃತರು ಪತ್ನಿ, ತಾಯಿಯನ್ನು ಅಗಲಿದ್ದಾರೆ.








