ADVERTISEMENT
Thursday, June 18, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ನನ್ನ ಹೆಂಡ್ತಿ ಫೋಟೋ ಹಾಕಿ ಪ್ರಚಾರ ಮಾಡ್ತೀರಾ? ಸಿಎಂ ಆದ್ರೂ ಇವ್ರ ಬುದ್ಧಿ ಬದಲಾಗಿಲ್ಲ: ಬ್ಲೂ ಫಿಲಂ ಪೋಸ್ಟರ್ ಪಾಲಿಟಿಕ್ಸ್ ಬಗ್ಗೆ ಎಚ್‌ಡಿಕೆ ಕೆಂಡ

Shwetha by Shwetha
June 18, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ರಾಮನಗರದ ಬಿಡದಿಯಲ್ಲಿ ನಿರ್ಮಾಣವಾಗುತ್ತಿರುವ ಟೌನ್‌ಶಿಪ್ ವಿಚಾರವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಪೋಸ್ಟರ್ ಸಮರ ತಾರಕಕ್ಕೇರಿದೆ. ಕಾಂಗ್ರೆಸ್ ಹೂಡಿರುವ ಆರೋಪಗಳು ಮತ್ತು ಹಚ್ಚಿರುವ ಪೋಸ್ಟರ್‌ಗಳ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೆಂಡಾಮಂಡಲವಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಆದರೂ ಬಿಟ್ಟಿಲ್ಲ ಈ ಕೆಟ್ಟ ಚಾಳಿ

Related posts

ನಾನೇನು ಕೇರಳಕ್ಕೆ ಮೋಜು ಮಸ್ತಿ ಮಾಡಲು ಹೋಗಿದ್ನಾ : ಹಗಲು ರಾತ್ರಿ ಪಕ್ಷಕ್ಕಾಗಿ ದುಡಿದರೂ ನನ್ನ ಮೇಲೆ ಆರೋಪವೇಕೆ ಜಮೀರ್ ಅಹ್ಮದ್ ಖಾನ್ ಪ್ರಶ್ನೆ

ಸಚಿವ ಸ್ಥಾನಕ್ಕಾಗಿ ಹಠ ಹಿಡಿಯಲ್ಲ- ಹೈಕಮಾಂಡ್ ನಿರ್ಧಾರಕ್ಕೆ ಜಮೀರ್ ಶರಣು: ಡಿ ಕೆ ಸುರೇಶ್ ಭೇಟಿಯ ಕುರಿತು ಹೊರಬಂತು ಅಸಲಿ ಸತ್ಯ!

June 18, 2026
ಧರ್ಮಸ್ಥಳ ಪ್ರಕರಣದ ಸುತ್ತ ಸುತ್ತಿಕೊಂಡ ಪ್ರಕಾಶ್ ರಾಜ್ ಹೆಸರು: 200 ಕೋಟಿ ರೂಪಾಯಿ ಪಿತೂರಿ ಆರೋಪಕ್ಕೆ ನಟ ನೀಡಿದ ತಿರುಗೇಟು ಏನು?

ಚಿನ್ನಯ್ಯನೊಂದಿಗೆ ಮಾತನಾಡಿದ್ದು ನಿಜ; ಉಳಿದ ಆರೋಪಗಳನ್ನು ತಳ್ಳಿಹಾಕಿದ ಪ್ರಕಾಶ್ ರಾಜ್

June 18, 2026

ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ ಮೇಲಾದರೂ ಇಂತಹ ಕೆಳಮಟ್ಟದ ರಾಜಕೀಯ ಮಾಡುವುದನ್ನು ನಿಲ್ಲಿಸುತ್ತಾರೆ ಎಂದು ಭಾವಿಸಿದ್ದೆ. ಆದರೆ ಬ್ಲೂಫಿಲಂ ಮಾಡಿಸುವುದು ಮತ್ತು ಸುಳ್ಳು ಪೋಸ್ಟರ್ ಅಂಟಿಸುವ ಇವರ ವಿಕೃತ ಮನಸ್ಸು ಬದಲಾಗಿಲ್ಲ. ನನ್ನ ಹೆಂಡತಿಯ ಫೋಟೋವನ್ನು ಪೋಸ್ಟರ್‌ನಲ್ಲಿ ಹಾಕಿ ಪ್ರಚಾರ ಮಾಡುತ್ತಿರುವುದು ಇವರ ಘನತೆಗೆ ಶೋಭೆ ತರುತ್ತದೆಯೇ? ಎಂದು ಪ್ರಶ್ನಿಸಿದರು.

ಜಮೀನಿನ ಲೆಕ್ಕ ಕೊಟ್ಟ ಕುಮಾರಸ್ವಾಮಿ

ಪೋಸ್ಟರ್‌ಗಳಲ್ಲಿ ಉಲ್ಲೇಖಿಸಿರುವ 100 ಎಕರೆ ಜಮೀನಿನ ಬಗ್ಗೆ ಸ್ಪಷ್ಟನೆ ನೀಡಿದ ಅವರು, ನಾನು 40 ವರ್ಷಗಳ ಹಿಂದೆಯೇ ಕಷ್ಟಪಟ್ಟು 46 ಎಕರೆ ಜಮೀನು ಖರೀದಿಸಿದ್ದೇನೆ. ಅದನ್ನು ಬಿಟ್ಟು ಬೇರೆ ಯಾವ ಜಮೀನು ನನ್ನ ಹೆಸರಿನಲ್ಲಿಲ್ಲ. ನನ್ನ ಪತ್ನಿ ಅನಿತಾ ಕುಮಾರಸ್ವಾಮಿ ಅವರು 36-37 ಎಕರೆ ಜಮೀನನ್ನು ನ್ಯಾಯಯುತವಾಗಿ ಖರೀದಿ ಮಾಡಿದ್ದಾರೆ. ಇದನ್ನು ನೂರು ಎಕರೆ ಎಂದು ಬಿಂಬಿಸಿ ಪೋಸ್ಟರ್ ಹಚ್ಚುತ್ತಿರುವುದು ರಾಜಕೀಯ ಹತಾಶೆಯ ಪರಮಾವಧಿ ಎಂದು ಕಿಡಿಕಾರಿದರು.

ಡಿ.ಕೆ. ಶಿವಕುಮಾರ್ ವಿರುದ್ಧ ನೇರ ವಾಗ್ದಾಳಿ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೆಸರೆತ್ತದೆ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಬೆನ್ನಗಾನಹಳ್ಳಿಯಲ್ಲಿ ಮೃತಪಟ್ಟವರ ಹೆಸರಿನಲ್ಲಿ ಜಮೀನು ಕಬಳಿಸಿರುವ ವ್ಯಕ್ತಿಗಳು ಇವತ್ತು ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ. ನಿಜವಾದ ಹಗರಣಗಳ ಬಗ್ಗೆ ಪೋಸ್ಟರ್ ಹಾಕುವ ತಾಕತ್ತು ಇವರಿಗಿದೆಯೇ? ಇಂದಿನ ಕಾಲದಲ್ಲಿ ಇಂತಹ ಪೋಸ್ಟರ್‌ಗಳನ್ನು ಜನ ನಂಬುವುದಿಲ್ಲ. ಇಂತಹ ಕೆಲಸಗಳಿಂದ ಮುಖ್ಯಮಂತ್ರಿ ಕುರ್ಚಿಗೆ ಗೌರವ ಬರುವುದಿಲ್ಲ ಎಂದು ಹರಿಹಾಯ್ದರು.

ಬಿಡದಿ ಟೌನ್‌ಶಿಪ್ ವಿರೋಧಕ್ಕೆ ಬೆಂಬಲ

ರೈತರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಬಿಡದಿ ಟೌನ್‌ಶಿಪ್ ನಿರ್ಮಾಣವನ್ನು ಜೆಡಿಎಸ್ ವಿರೋಧಿಸುತ್ತಿದೆ. ರೈತರ ಭೂಮಿ ಕಿತ್ತುಕೊಳ್ಳುವ ಸರ್ಕಾರದ ನಿರ್ಧಾರದ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದು ಇದೇ ವೇಳೆ ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು. ಇಂತಹ ಬೆದರಿಕೆಗಳಿಗೆ ಮತ್ತು ಸುಳ್ಳು ಪೋಸ್ಟರ್‌ಗಳಿಗೆ ತಲೆಬಾಗುವ ಪ್ರಶ್ನೆಯೇ ಇಲ್ಲ ಎಂದು ಅವರು ಗುಡುಗಿದ್ದಾರೆ.

ShareTweetSendShare
Join us on:

Related Posts

ನಾನೇನು ಕೇರಳಕ್ಕೆ ಮೋಜು ಮಸ್ತಿ ಮಾಡಲು ಹೋಗಿದ್ನಾ : ಹಗಲು ರಾತ್ರಿ ಪಕ್ಷಕ್ಕಾಗಿ ದುಡಿದರೂ ನನ್ನ ಮೇಲೆ ಆರೋಪವೇಕೆ ಜಮೀರ್ ಅಹ್ಮದ್ ಖಾನ್ ಪ್ರಶ್ನೆ

ಸಚಿವ ಸ್ಥಾನಕ್ಕಾಗಿ ಹಠ ಹಿಡಿಯಲ್ಲ- ಹೈಕಮಾಂಡ್ ನಿರ್ಧಾರಕ್ಕೆ ಜಮೀರ್ ಶರಣು: ಡಿ ಕೆ ಸುರೇಶ್ ಭೇಟಿಯ ಕುರಿತು ಹೊರಬಂತು ಅಸಲಿ ಸತ್ಯ!

by Shwetha
June 18, 2026
0

ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ರಚನೆಯ ಕುರಿತು ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗುತ್ತಿದೆ. ಈ ನಡುವೆ ತಮಗೆ ಸಚಿವ ಸ್ಥಾನ ಸಿಗುತ್ತದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಕಾಂಗ್ರೆಸ್...

ಧರ್ಮಸ್ಥಳ ಪ್ರಕರಣದ ಸುತ್ತ ಸುತ್ತಿಕೊಂಡ ಪ್ರಕಾಶ್ ರಾಜ್ ಹೆಸರು: 200 ಕೋಟಿ ರೂಪಾಯಿ ಪಿತೂರಿ ಆರೋಪಕ್ಕೆ ನಟ ನೀಡಿದ ತಿರುಗೇಟು ಏನು?

ಚಿನ್ನಯ್ಯನೊಂದಿಗೆ ಮಾತನಾಡಿದ್ದು ನಿಜ; ಉಳಿದ ಆರೋಪಗಳನ್ನು ತಳ್ಳಿಹಾಕಿದ ಪ್ರಕಾಶ್ ರಾಜ್

by Shwetha
June 18, 2026
0

ನಟ ಪ್ರಕಾಶ್ ರಾಜ್ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿದ್ದು, ಚಿನ್ನಯ್ಯನೊಂದಿಗೆ ಮಾತನಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಕಾಶ್ ರಾಜ್, ಚಿನ್ನಯ್ಯ ನನ್ನೊಂದಿಗೆ...

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

ಪ್ರೆಸ್ ಮೀಟ್ ಕರೆಯದಿರಲು ನಾನು ಪ್ರಧಾನಿಯಲ್ಲ:ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ; ಮಾರಿಕೊಂಡವರು ಯಾರು? ಸುದ್ದಿಗೋಷ್ಠಿಯಲ್ಲಿ ನಟ ಮತ್ತು ಪತ್ರಕರ್ತರ ನಡುವೆ ನಡೆದಿದ್ದೇನು?

by Shwetha
June 18, 2026
0

ಬೆಂಗಳೂರಿನಲ್ಲಿ ನಟ ಪ್ರಕಾಶ್ ರಾಜ್ ಕರೆದಿದ್ದ ಸುದ್ದಿಗೋಷ್ಠಿಯು ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿತ್ತು. ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗೋಷ್ಠಿಗೆ ಆಹ್ವಾನ ನೀಡುವಾಗ ಮಾರಿಕೊಂಡ ಮಾಧ್ಯಮದವರಿಗೆ ವಿಶೇಷ ಆಹ್ವಾನ ಎಂದು ಪ್ರಕಾಶ್...

ದಿನ ಭವಿಷ್ಯ (15-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (18-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
June 18, 2026
0

ದಿನ ಭವಿಷ್ಯ : 18-06-2026 1. ಮೇಷ ರಾಶಿ ಇಂದು ನಿಮ್ಮಲ್ಲಿ ಹೊಸ ಚೈತನ್ಯ ಮತ್ತು ಉತ್ಸಾಹ ತುಂಬಿರಲಿದೆ. ಗ್ರಹಗಳ ಅನುಕೂಲಕರ ಚಲನೆಯಿಂದಾಗಿ ನೀವು ಕೈಹಾಕುವ ಕೆಲಸಗಳಲ್ಲಿ...

ಪಿಂಚಣಿ ಸ್ಥಗಿತ.. ಫಲಾನುಭವಿಗಳು ಕಂಗಾಲು.. ಮುಂದೇನು..?

ಪಿಂಚಣಿ ಸ್ಥಗಿತ.. ಫಲಾನುಭವಿಗಳು ಕಂಗಾಲು.. ಮುಂದೇನು..?

by admin
June 18, 2026
0

ಗ್ಯಾರಂಟಿ (GUARANTEE) ಯೋಜನೆಗೆ ಸರ್ಜರಿ ಬೆನ್ನಲ್ಲೇ ಇದೀಗ ರಾಜ್ಯದ ಲಕ್ಷ ಲಕ್ಷ ವೃದ್ಧರಿಗೆ ದೊಡ್ಡ ಆಘಾತವನ್ನೇ ಕೊಟ್ಟಿದೆ ಕಾಂಗ್ರೆಸ್ 2.0 ಸರ್ಕಾರ.. ಒಂದಲ್ಲಾ ಎರಡಲ್ಲಾ… 16 ಲಕ್ಷ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram