Dharwad – ಪಿಎಫ್ ಐ ಕಾರ್ಯಕರ್ತರ ಬಂಧನ – ಮುತಾಲಿಕ್ ಹೇಳಿದ್ದೇನು ?
ಧಾರವಾಡ : ರಾಜ್ಯಾದ್ಯಂತ ಪಿಎಫ್ ಐ, ಎಸ್ ಡಿಪಿಐ ಕಾರ್ಯಕರ್ತರಿಗೆ ಪೊಲೀಸರು ಶಾಕ್ ನೀಡಿದ್ದಾರೆ. ರಾಜ್ಯಾದ್ಯಂತ ಕರ್ನಾಟಕ ಪೊಲೀಸರು ದಾಳಿ ನಡೆಸಿ 40ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ, ಕಳೆದ ರಾತ್ರಿ ಹಾಗೂ ಇವತ್ತು ಬೆಳಿಗ್ಗೆ ದೇಶದ ಹಲವು ರಾಜ್ಯ ಹಾಗೂ ನಮ್ಮ ರಾಜ್ಯದ ಜಿಲ್ಲೆಗಳಲ್ಲಿ ಎಸ್ ಡಿಪಿಐ ಹಾಗೂ ಪಿ ಎಫ್ ಐ ಕಾರ್ಯಕರ್ತರ ಬಂಧನ ಆಗಿದೆ. ಇದು ಅಪಾಯಕಾರಿ ಸಂಗತಿ, ಈ ಎರಡು ಸಂಘಟನೆ ದೇಶದ್ರೋಹಿ ಸಂಘಟನೆ ಎಂದು ಜಗಜ್ಜಾಹಿರ ಆಗಿದೆ. ಎರಡನೇ ಬಾರಿಯೂ ಕೂಡಾ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿದ್ದು ಗಮನಾರ್ಹ ವಿಷಯ.

ಆರ್ ಎಸ್ ಎಸ್ ಹಾಗೂ ಆರ್ ಎಸ್ ಎಸ್ ನವರ ಮೇಲೆ ಟಾರ್ಗೆಟ್ ಇರುವಂತ ಪ್ರಕ್ರಿಯೆ ಇತ್ತು. ಹಿಂದು ಹಾಗೂ ಹಿಂದೂತ್ವದ ಮೇಲೆ ಇವರ ಟಾರ್ಗೆಟ್ ಇದೆ. ಇತ್ತೀಚೆಗೆ ಆರ್ ಎಸ್ ಎಸ್ ಕಾರ್ಯಕರ್ತರ ಕಾರಿನ ಮೇಲೆ ಕೊಲೆ ಮಾಡುತ್ತೇವೆ ಎಂದು ಬರವಣಿಗೆ ಬರೆದಿದ್ದಾರೆ, ಇವೆಲ್ಲ ಆತಂಕದ ವಿಷಯ. ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮ ಅಭಿನಂದನಾರ್ಹ, ಸ್ವಾಗತಾರ್ಹ ಎಂದಿದ್ದಾರೆ.
ಇನ್ನು ಜಾಲಾಡಿದರೆ, ಸಾಕಷ್ಟು ವಿಷಯ, ಸಾಕಷ್ಟು ಶಸ್ತ್ರ ಹಾಗೂ ಕಾರ್ಯಕರ್ತರು ಸಿಗುತ್ತಾರೆ. ಹಲವು ಪತ್ರ ಸಿಗುತ್ತವೆ. ಹಳ್ಳಿಗಳಲ್ಲಿ ಪಸರಿಸಿದ ಈ ಪಿಎಫ್ ಐ ಕ್ಯಾನ್ಸರ್ ಆಪರೇಟ್ ಮಾಡಿ ಕೇಂದ್ರ ಸರ್ಕಾರ ಸಂಪೂರ್ಣ ಸುರಕ್ಷತೆ ಕಡೆ ತೆಗೆದುಕೊಂಡು ಹೋಗುತಿದೆ. ಇದನ್ನ ವಿಸ್ತಾರವಾಗಿ ಮಾಡಬೇಕು ಎಂದು ಮುತಾಲಿಕ್ ಮನವಿ ಮಾಡಿಕೊಂಡಿದ್ದಾರೆ.









