ಪೊನ್ನಿಯನ್ ಸೆಲ್ವನ್ – ಚಿಯಾನ್ ವಿಕ್ರಮ್, ಐಶ್ವರ್ಯಗೆ ಸಿಕ್ಕಿದ್ದು ಇಷ್ಟು ಸಂಭಾವನೆ..
ಮಣಿರತ್ನಂ ಅವರ ಕನಸಿನ ಪ್ರಾಜೆಕ್ಟ್ ‘ಪೊನ್ನಿಯಿನ್ ಸೆಲ್ವನ್’ ಬಿಡುಗಡೆಗೆ ಸಿದ್ದವಾಗಿದ್ದು, ಚಿತ್ರಂಡ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ಜಯಂ ರವಿ, ಐಶ್ವರ್ಯ ರೈ, ಚಿಯಾನ್ ವಿಕ್ರಮ್, ಕಾರ್ತಿ, ತ್ರಿಶಾ, ಐಶ್ವರ್ಯ ಲಕ್ಷ್ಮಿ, ವಿಕ್ರಮ್ ಪ್ರಭು, ಪ್ರಕಾಶ್ ರಾಜ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಚಿತ್ರವು ಕಲ್ಕಿ ಕೃಷ್ಣಮೂರ್ತಿ ಬರೆದಿರುವ ಪೊನ್ನಿಯಿನ್ ಸೆಲ್ವನ್ ಕಾದಂಬರಿಯನ್ನು ಆಧರಿಸಿದೆ. ಈ ಸಿನಿಮಾ ಪ್ಯಾನ್ ಇಂಡಿಯಾ ಲೆವಲ್ ನಲ್ಲಿ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಸೆಪ್ಟೆಂಬರ್ 30 ರಂದು ಮೊದಲ ಭಾಗ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸುಭಾಸ್ಕರನ್ ಮತ್ತು ಮದ್ರಾಸ್ ಟಾಕೀಸ್ ಜಂಟಿಯಾಗಿ ನಿರ್ಮಿಸಿದ್ದಾರೆ.
ದೊಡ್ಡ ತಾರಾಗಣವೇ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದೆ. ಸ್ಟಾರ್ ಡಮ್ ಹೊಂದಿರುವ ಹಲವು ನಟರು ಒಂದೇ ಚಿತ್ರದಲ್ಲಿ ನಟಿಸುವುದು ಅಪರೂಪ. ಹಾಗಾಗಿ ಈ ಚಿತ್ರದ ಎಲ್ಲಾ ನಟರಿಗೂ ಭಾರೀ ಸಂಭಾವನೆಯನ್ನೇ ನಿಡಲಾಗಿದೆ ಎನ್ನುತ್ತಿದೆ ಕಾಲಿವುಡ್ ಮಾಧ್ಯಮಗಳು.
‘ಪೊನ್ನಿಯಿನ್ ಸೆಲ್ವನ್’ ಚಿತ್ರದಲ್ಲಿ ವಿಕ್ರಮ್ (ವಿಕ್ರಮ್) ನಟರ ಪೈಕಿ ಅತಿ ಹೆಚ್ಚು ಸಂಭಾವನೆ ಪಡೆದರು. ಅವರು ಈ ಚಿತ್ರದಲ್ಲಿ ಆದಿತ್ಯ ಕರಿಕಾಳನ್ ಆಗಿ ನಟಿಸಿದ್ದಾರೆ. ಈ ಪಾತ್ರಕ್ಕಾಗಿ ಅವರು 15 ಕೋಟಿ ರೂಪಾಯಿಗಳನ್ನು ಸಂಭಾವನೆ ತೆಗೆದುಕೊಂಡಿದ್ದಾರೆ.
ನಂದಿನಿ ಪಾತ್ರದಲ್ಲಿ ನಟಿಸಿರುವ ಐಶ್ವರ್ಯ ರೈ ಕೂಡ ಭಾರೀ ಸಂಭಾವನೆ ತೆಗೆದುಕೊಂಡಿದ್ದಾರೆ. 10 ಕೋಟಿ ಚಾರ್ಜ್ ಮಾಡಿದ್ದಾರೆ ಎಂದು ವರದಿಯಾಗಿದೆ. ರಾಜರಾಜ ಚೋಳನ ಪಾತ್ರದಲ್ಲಿ ನಟಿಸಿದ್ದ ಜಯಂ ರವಿಗೆ 8 ಕೋಟಿ, ವಂತಿಯತೇವನ ಪಾತ್ರದಲ್ಲಿ ಕಾಣಿಸಿಕೊಂಡ ಕಾರ್ತಿಗೆ 5 ಕೋಟಿ, ತ್ರಿಷಾಗೆ 2 ಕೋಟಿ, ಐಶ್ವರ್ಯ ಲಕ್ಷ್ಮಿ ಮತ್ತು ಪ್ರಕಾಶ್ ರಾಜ್ ಗೆ ತಲಾ 15 ಕೋಟಿ ರೂ ಸಂಭಾವನೆ ನೀಡಲಾಗಿದೆ ಎನ್ನುತ್ತಿವೆ ಸುದ್ದಿ ಮಾದ್ಯಮಗಳು.
‘ಪೊನ್ನಿಯಿನ್ ಸೆಲ್ವನ್-1’ ಚೋಳರ ಕಾಲದ ಕಥೆಯನ್ನು ಆಧರಿಸಿದೆ. ಅಂದಹಾಗೆ ಈ ಸಿನಿಮಾದ ಬಜೆಟ್ ರು.500 ಕೋಟಿ.
ಈ ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ. ಶ್ರೀಕರ್ ಪ್ರಸಾದ್ ಸಂಕಲನ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಮೊದಲ ಭಾಗ ಬಿಡುಗಡೆಯಾದ 6 ರಿಂದ 9 ತಿಂಗಳ ನಂತರ ‘ಪೊನ್ನಿಯಿನ್ ಸೆಲ್ವನ್’ ಎರಡನೇ ಭಾಗ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
Ponnian Selvan – How much did Chiyan Vikram and Aishwarya get paid..








