ನಾಯಿಯನ್ನ ಕಟ್ಟಿ ಹಾಕಿ ದೊಣ್ಣೆಯಿಂದ ಥಳಿಸಿದ ಸಹೋದರರು – ಪೊಲೀಸ್ ವಶಕ್ಕೆ…
ತನ್ನ ನಾಯಿಯನ್ನ ಪಕ್ಕದ ಮನೆಯ ನಾಯಿ ಕಚ್ಚಿದೆ ಎಂದು ನಾಯಿಯನ್ನ ಕಟ್ಟಿಹಾಕಿ ಯುವಕರು ಹಿಗ್ಗಾಮುಗ್ಗಾ ಥಳಿಸಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಿಡಿಯೋ ಸೊಶೀಯಲ್ ಮಿಡಿಯಾ ವೈರಲ್ ಆಗಿದ್ದು, ಯುವಕರ ಕೆಲಸಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಭಟ್ಟರಹಳ್ಳಿ ಸಮೀಪದ ಮಂಜುನಾಥ್ ಲೇಔಟ್‌ನಲ್ಲಿರುವ ರಾಹುಲ್, ರೋಹಿತ್ ಮತ್ತು ರಜತ್ ಎಂಬ ಮೂವರ ವಿರುದ್ದ ನಾಯಿ ಮಾಲಿಕರು ದೂರುದಾಖಲಿಸಿದ್ದು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸಾಕು ಪ್ರಾಣಿ ಮಾಲಿಕರಾದ ಗಿರಿಗಪ್ಪ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.
https://twitter.com/i/status/1577378509520965632
ಘಟನೆಯ ವಿಡಿಯೋದಲ್ಲಿ ಮೂವರು ಯುವಕರು ನಾಯಿಯನ್ನ ದೊಣ್ಣೆಯಿಂದ ಥಳಿಸಿದ್ದು, ತಡೆಯಲು ಯತ್ನಿಸಿದವರ ರೇಗಾಡಿದ್ದಾರೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960ರ ಅಡಿಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Bengaluru Dog: A case has been registered against three people for thrashing a dog with sticks in Karnataka’s Bengaluru.








