ಶ್ರೀನಗರ, ಜೂನ್ 9: ಜಮ್ಮು-ಕಾಶ್ಮೀರದಲ್ಲಿ ಉಗ್ರರು ಅನಂತ್‌ನಾಗ್ ಜಿಲ್ಲೆಯ ಲಾರ್ಕಿಪೋರಾ ಪ್ರದೇಶದ ಲಕ್‌ಬವಾನ್ ಗ್ರಾಮದ ಸರ್‌ಪಂಚ್ ನನ್ನು ಗುಂಡಿಟ್ಟು ಕೊಂದಿದ್ದಾರೆ.
ಅನಂತ್ ನಾಗ್ ಜಿಲ್ಲೆಯ 40 ವರ್ಷದ ಅಜಯ್ ಪಂಡಿತ ಭಾರ್ತಿ ಎಂಬುವವರು ಉಗ್ರರ ಗುಂಡೇಟಿಗೆ ಬಲಿಯಾಗಿದ್ದು, ಇವರು ಕಾಂಗ್ರೆಸ್ ಪಕ್ಷದ ಮುಖಂಡರು ಎಂದು ತಿಳಿದುಬಂದಿದೆ.
ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ್ ಮುಫ್ತಿ ಮಗಳು ಇಲ್ತಿಜಾ ಮುಫ್ತಿ ಈ ಘಟನೆಯನ್ನು ಖಂಡಿಸಿದ್ದು, ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಘೋರವಾದ ಕೃತ್ಯ. ಅವರ ಕುಟುಂಬಕ್ಕೆ ಈ ಸಾವಿನ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ.

ಕಾಶ್ಮೀರದಲ್ಲಿ ರಾಜಕೀಯ ಅಸ್ತಿತ್ವ ಕಡಿಮೆಯಾಗುತ್ತಿದ್ದು, ಇದು ರಾಜಕೀಯ ನಾಯಕರ ಶಕ್ತಿ ಕುಂದಿಸುತ್ತಿದೆ. ಇಲ್ಲಿನ ಜನರು ಪ್ರತೀಕಾರದ ಸರ್ಕಾರ ಮತ್ತು ಉಗ್ರರ ಕ್ರೌರ್ಯದ ನಡುವೆ ಸಿಲುಕಿ ನಲುಗಿದ್ದಾರೆ ಎಂದು ಬರೆದು ಕೊಂಡಿದ್ದಾರೆ.








