T20 World Cup: 9 ವರ್ಷಗಳಿಂದ ICC ಟೋಫ್ರಿ ಗೆಲ್ಲದಿರುವುದು ನಿರಾಸೆ ತಂದಿದೆ – ರೋಹಿತ್ ಶರ್ಮಾ
ICC ಟೂರ್ನಿಮೆಂಟ್ ಗಳಲ್ಲಿ ತಮ್ಮ ಅದೃಷ್ಟವನ್ನನ ಬದಲಾಯಿಸಲು “ಮೆನ್ ಇನ್ ಬ್ಲೂ” ತನ್ನ ಎಲ್ಲಾ ಶಕ್ತಿಯನ್ನ ಹೊರಹಾಕಿ ಹೋರಾಡಲಿದೆ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
T20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಉದ್ಘಾಟನ ಪಂದ್ಯ ಭಾರತ ಭಾನುವಾರ ಮೆಲ್ಬೋರ್ನ್ ನಲ್ಲಿ ಆಡಲಿದೆ. ಈ ವೇಳೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಭಾರತ ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮಾ “ಕಳೆದ ಒಂಬತ್ತು ವರ್ಷಗಳಿಂದ ವರ್ಷಗಳಲ್ಲಿ ಐಸಿಸಿ ಟ್ರೋಫಿಯನ್ನ ಗೆಲ್ಲದೆ ತಂಡಕ್ಕೆ ನಿರಾಸೆಯಾಗಿದೆ. ಆದರೆ ಇದು ಒತ್ತಡವನ್ನ ಹೆಚ್ಚಿಸುವುದಿಲ್ಲ ಎಂದು ಹೇಳಿದ್ದಾರೆ.
2021 ರ ಟಿ 20 ವಿಶ್ವಕಪ್‌ನಿಂದ ಭಾರತದ ನಿರ್ಗಮನದ ಬಗ್ಗೆ ರೋಹಿತ್ ಶರ್ಮಾ ಮಾತನಾಡಿದ್ದಾರೆ. ವಿರಾಟ್ ಕೊಹ್ಲಿ ನೇತೃತ್ವದ ತಂಡ ಟೂರ್ನಿಯ ಗುಂಪು ಹಂತದಿಂದಲೇ ಹೊರಬಿದ್ದಿತ್ತು. “ಅಲ್ಲಿ ಏನು ತಪ್ಪಾಗಿತ್ತು ಅದನ್ನ ಸರಿಪಡಿಸಲು ಏನು ಮಾಡಬಹುದು ಎಂಬುದನ್ನ ನಿರ್ಣಯಿಸಲು ಈಗಾಗಲೇ ಸಾಕಷ್ಟು ಕೆಲಸ ಮಾಡಲಾಗಿದೆ ಎಂದಿದ್ದಾರೆ.
ಐಸಿಸಿ ಟ್ರೋಫಿಗಳಲ್ಲಿ ಭಾರತದ ಭವಿಷ್ಯವನ್ನು ಬದಲಾಯಿಸಲು ಇದು ಹೆಚ್ಚುವರಿ ಒತ್ತಡ ಹಾಕಲಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ “ ಇಲ್ಲ. ಆದರೆ ಇದು ಖಂಡಿತವಾಗಿಯೂ ಸವಾಲಾಗಿದೆ” ಎಂದು ಹೇಳಿದ್ದಾರೆ.
“ ಕಳೆದ 9 ವರ್ಷಗಳಿಂದ ಐಸಿಸಿ ಟ್ರೋಫಿಯನ್ನ ಗೆದ್ದಿಲ್ಲ, ಅದರಿಂದ ಖಂಡಿತವಾಗಿಯೂ ಸ್ವಲ್ಪ ನಿರಾಶೆಗೊಂಡಿದ್ದೇವೆ. ಮತ್ತು ಈ ಟೂರ್ನಿ ಅದನ್ನ ಬದಲಾಯಿಸಲು ನಮಗೆ ಅವಕಾಶ ನೀಡಿದೆ ಎಂದು ತಿಳಿಸಿದ್ದಾರೆ.
T20 World Cup: Not winning an ICC trophy in 9 years is disappointing – Rohit Sharma








