ಮೈಸೂರು : ಬೇಲಿನೆ ಎದ್ದು ಹೊಲ ಮೇಯ್ದಂತೆ ಎಂಬ ಮಾತು ಇಲ್ಲೊಬ್ಬ ಪೊಲೀಸ್ ಗೆ ಹೇಳಿ ಮಾಡಿಸಿದಂತಿದೆ. ಕಳ್ಳರನ್ನು ಸೆರೆ ಇಡಿಯಬೇಕಾದ ಪೊಲೀಸೆ ಕಳ್ಳನಾಗಿರುವ ಘಟನೆ ಟಿ.ನರಸೀಪುರದಲ್ಲಿ ನಡೆದಿದೆ. ಟಿ.ನರಸೀಪುರ ಪೊಲೀಸ್ ಠಾಣೆಯ ರೈಟರ್ ಕೃಷ್ಣೇಗೌಡ ಠಾಣೆಯ ದಾಸ್ತಾನು ಕೊಠಡಿಯಲ್ಲಿದ್ದ 50 ಬುಲೆಟ್ಗಳನ್ನು ಕಳ್ಳತನ ಮಾಡಿದ್ದಾನೆ. ಅಲ್ಲದೆ ಈ ಅಸಾಮಿ ಕದ್ದ ಬುಲೆಟ್ ಗಳನ್ನ ನಂಜನಗೂಡು ಕಪಿಲಾ ನದಿಯಲ್ಲಿ ಎಸೆದಿದ್ದಾನೆ. ಬುಲೆಟ್ ನಾಪತ್ತೆ ಆಗುವ ವಿಚಾರದಲ್ಲಿ ಮೊದಲಿಂದಲೂ ಕೃಷ್ಟೇಗೌಡನ ಮೇಲೆ ಶಂಕೆಯಿತ್ತು. ಹಾಗಾಗಿ ವಿಚಾರಣೆಗೆ ಒಳಪಡಿಸಲಾಗಿತ್ತು. ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆತ್ಮಹತ್ಯೆ ನಾಟಕವಾಡಿದ ಖದೀಮಾ. ಡಿವೈಎಸ್ಪಿ ಪ್ರಭಾಕರ ರಾವ್ ಸಿಂಧೆ ರವರಿಗೆ ಚೆಳ್ಳೆಹಣ್ಣು ತಿನ್ನಿಸಲು ಯತ್ನಿಸಿದ್ದನು.ಕೊನೆಗೆ ತೀವ್ರ ವಿಚಾರಣೆ ವೇಳೆ ಸತ್ಯ ಬಾಯಿ ಬಿಟ್ಟಿದ್ದಾನೆ. ಅಡಿಷನಲ್ ಎಸ್ಪಿ ಸ್ನೇಹಾ ನೇತೃತ್ವದಲ್ಲಿ ಬುಲೆಟ್ ಗಳ ಶೋಧನಾ ಕಾರ್ಯ ನಡೆದಿದೆ. 20 ಬುಲೆಟ್ ಗಳು ಕಪಿಲಾ ಸೇತುವೆ ಬಳಿ ಪತ್ತೆಯಾಗಿವೆ. ಉಳಿದ ಬುಲೆಟ್ ಗಳ ಕುರಿತು ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಹಳೆ ರೈಟರ್ ಹಾಗೂ ಹೊಸ ರೈಟರ್ ನಡುವಿನ ವೈಮನಸ್ಸು ಬುಲೆಟ್ ನಾಪತ್ತೆಗೆ ಕಾರಣವಾಗಗಿರುವ ಶಂಕೆಯಿದೆ. ಪ್ರಕರಣಕ್ಕೆ ಸಂಭಂಧಿಸಿದಂತೆ ಇಬ್ಬರನ್ನ ಅಮಾನತು ಮಾಡಲಾಗಿದೆ ಎಂದು ಅಧಿಕಾರಗಳು ತಿಳಿಸಿದ್ದಾರೆ.
ನೈಸ್ ಸಂಸ್ಥೆಯ ಟೋಲ್ ದಗಾಬಾಜಿಗೆ ಬ್ರೇಕ್ ಹಾಕಿ: ಡಿಕೆಶಿ ಸರ್ಕಾರಕ್ಕೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಒತ್ತಾಯ
ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೊರವಲಯದಲ್ಲಿರುವ ನೈಸ್ ರಸ್ತೆಯಲ್ಲಿ (BMICP) ಯಾವುದೇ ನಿಯಮಾವಳಿಗಳಿಲ್ಲದೆ ಅನಧಿಕೃತವಾಗಿ ಸಂಗ್ರಹಿಸುತ್ತಿರುವ ಟೋಲ್ ವಸೂಲಿಯನ್ನು ತಕ್ಷಣವೇ ಜಾರಿಗೆ ಬರುವಂತೆ ನಿಷೇಧಿಸಬೇಕು ಎಂದು ಕೇಂದ್ರ ಸಚಿವ...








