‘ಕಾಂತಾರ’ ಸಿನಿಮಾ ಮೆಚ್ಚಿಕೊಂಡ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್…
ಬಿಡುಗಡೆಯಾಗಿ ಒಂದು ತಿಂಗಳು ಕಳೆದರೂ ಕಾಂತಾರ ಚಿತ್ರದ ಕ್ರೇಜ್ ಮಾತ್ರ ಒಂದಿನಿತು ಕಡಿಮೆಯಾಗಿಲ್ಲ. ದಿನಕ್ಕೊಬ್ಬ ಸೆಲೆಬ್ರಿಟಿಯಾದರೂ ಕಾಂತಾರ ಚಿತ್ರವನ್ನ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ತುಳುನಾಡಿನ ನೆಲದ ಸೊಗಡಿನ ಕಥೆಯನ್ನ ಸಾಮಾನ್ಯ ಜನತೆ ಮತ್ತು ಸಿನಿಮಾ ಮಂದಿ ಮಾತ್ರವಲ್ಲದೆ ರಾಜಕೀಯ ಧುರಿಣರೂ ಮೆಚ್ಚಿಕೊಂಡಿದ್ದಾರೆ. ಈ ಸಾಲಿಗೆ ಇದೀಗ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಸಹ ಸೇರಿಕೊಂಡಿದ್ದಾರೆ.
ನಿನ್ನೆ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ಆಪ್ತರು ಮತ್ತು ಸ್ವಂ ಸೇವಕರ ಜೊತೆ ಸೇರಿಕೊಂಡು ಕಾಂತಾರ ಚಿತ್ರವನ್ನ ವಿಕ್ಷಿಸಿ ಮೆಚ್ಚಿಕೊಂಡಿದ್ದಾರೆ.
ನಂತರ ಟ್ವೀಟ್ ಮಾಡಿರುವ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು “ಬರಹಗಾರನಾಗಿ, ನಿರ್ದೇಶಕನಾಗಿ, ನಟನಾಗಿ ರಿಷಬ್ ಶೆಟ್ಟಿ ಅದ್ಭುತವಾದ ಚಿತ್ರ ತೆಗೆದಿದ್ದಾರೆ. ತುಳುನಾಡು, ಕರಾವಳಿಯ ಸಂಪದ್ಭರಿತ ಸಂಸ್ಕೃತಿ, ಸಂಪ್ರದಾಯಗಳನ್ನು ಚಿತ್ರ ಸೆರೆಹಿಡಿದಿದೆ” ಎಂದು ಸಚಿವೆ ಟ್ವೀಟ್ ಮಾಡಿದ್ದಾರೆ.
https://twitter.com/nsitharaman/status/1587816045275885568?ref_src=twsrc%5Etfw%7Ctwcamp%5Etweetembed%7Ctwterm%5E1587816045275885568%7Ctwgr%5E5e479c65d666c701b6a4f43dcae2cca5b8e4038b%7Ctwcon%5Es1_&ref_url=https%3A%2F%2Fwww.kannadaprabha.com%2Fkarnataka%2F2022%2Fnov%2F03%2Ffinance-minister-nirmala-sitharaman–watched-kantara-kannada-movie-and-congratulated–rishab-shetty-over-phone-479848.html
ಕೇವಲ 15 ರಿಂದ 16 ಕೋಟಿ ಬಂಡವಾಳದಲ್ಲಿ ತೆಗೆದಿದ್ದ ಈ ಚಿತ್ರ 300 ಕೋಟಿಗೂ ಅಧಿಕ ಹಣ ಗಳಿಸಿದ್ದ ಕೆಜೆಎಫ್ 1 ಚಿತ್ರದ ದಾಖಲೆಯನ್ನ ಮುರಿದೆದೆ. ಇದನ್ನೇ ಕೇಂದ್ರ ಸಚಿವ ಪಿಯೂಶ್ ಗೋಯೇಲ್ ರವರು ಹೂಡಿಕೆದಾರರ ಸಮಾವೇಶದಲ್ಲಿ ಪ್ರಸ್ತಾಪಿಸಿದ್ದರು. ಹೂಡಿಕೆದಾರರು ಕಾಂತಾರ ಚಿತ್ರ ನೋಡಿ ಕಲಿಯಬೇಕು ಎಂದು ಹೇಳಿದ್ದರು.
Finance Minister Nirmala Sitharaman liked the movie ‘Kantara’…








