ಶೀಘ್ರದಲ್ಲಿಯೇ ಜಗನ್ ಮೋಹನ್ ಸರ್ಕಾರ ಪತನ – ನಟ ಪವನ್ ಕಲ್ಯಾಣ್…
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಸರ್ಕಾರ ಶೀಘ್ರದಲ್ಲೇ ಪತನವಾಗಲಿದೆ ಎಂದು ನಟ, ಹಾಗೂ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಭವಿಷ್ಯ ನುಡಿದಿದ್ದಾರೆ.
ಜನಸೇನಾ ಪಕ್ಷದ ಬೆಂಬಲಿಗರ ಮನೆಗಳನ್ನು ಧ್ವಂಸಗೊಳಿಸಿರುವುದನ್ನು ಖಂಡಿಸಿದ ಪವನ್ ಕಲ್ಯಾಣ್, ಈ ಧ್ವಂಸದಿಂದಲೇ ಸರ್ಕಾರದ ಪತನವು ಆರಂಭವಾಗಿದೆ. ಈ ಸರ್ಕಾರ ಬಹಳ ದಿನಗಳವರೆಗೆ ಇರುವುದಿಲ್ಲ ಎಂದು ಗುಡುಗಿದ್ದಾರೆ.
ಪವನ್ ಕಲ್ಯಾಣ್ ಶನಿವಾರ ಬೆಳಗ್ಗೆ ಗುಂಟೂರು ಜಿಲ್ಲೆಯ ಇಪ್ಪತಂ ಗ್ರಾಮಕ್ಕೆ ಭೇಟಿ ನೀಡಿ ರಸ್ತೆ ಅಗಲಿಕರಣಕ್ಕೆ ಶುಕ್ರವಾರ ಕೆಡವಲಾದ ಮನೆಗಳನ್ನ ವಿಕ್ಷಿಸಿದ್ದಾರೆ. ಗ್ರಾಮದಲ್ಲಿ ಒತ್ತುವರಿ ನೆಪದಲ್ಲಿ ಯಾವುದೇ ನೋಟಿಸ್ ನೀಡದೆ ಮನೆಗಳನ್ನು ಧ್ವಂಸ ಮಾಡಲಾಗಿದೆ. ಬಹುಪಾಲು ಮನೆಗಳು ಜನಾಸೇನಾ ಪಕ್ಷದ ಬೆಂಬಲಿಗರ ಮನೆಗಳು ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
The transformation of an actor to leader. More power to you sir.🔥❤️#JanaSenaWithIppatam#Pawanakalyan #YCPDestroyedAP pic.twitter.com/V7urPpriBW
— Sairam Dasari (@SairamD47106367) November 5, 2022
ವೈಎಸ್‌ಆರ್ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ರಸ್ತೆ ಅಗಲೀಕರಣಕ್ಕೆ ಈ ಗ್ರಾಮ ರಾಜಮಂಡ್ರಿಯೇ ಅಥವಾ ಕಾಕಿನಾಡ ನಗರವೇ ಎಂದು ಪ್ರಶ್ನಿಸಿದ್ದಾರೆ. ಈ ನಡುವೆ ಪೊಲೀಸರು ಪವನ್ ಕಲ್ಯಾಣ್ ಅವರ ಕಾರನ್ನ ತಡೆದಿದ್ದರಿಂದ ಗ್ರಾಮಕ್ಕೆ ಕಾಲ್ನಡಿಗೆಯಲ್ಲಿ ತೆರಳಿದ್ದಾರೆ.
Em attitude anna #JanaSenani#Pawanakalyan pic.twitter.com/zYHyLTg1Cr
— Anil pietersen (@pietersen_anil) November 5, 2022
Pawan Kalyan visits Ippatam village after police attempts to stop him








