T 20 world cup : ಶ್ರೀಲಂಕಾಗೆ ಸೋಲು – ಆಸ್ಟ್ರೇಲಿಯ ಕನಸು ಚೂರು – ಸೆಮೀಸ್ ಗೆ ಇಂಗ್ಲೆಂಡ್
ಟಿ 20 ವಿಶ್ವಕಪ್ ಗೆ ಆತಿಥ್ಯ ವಹಿಸಿದ್ದ ಚಾಂಪಿಯನ್ ಆಸ್ಟ್ರೇಲಿಯ ಈ ಭಾರಿ ಲೀಗ್ ಹಂತದಲ್ಲಿಯೇ ಮುಗ್ಗರಿಸಿ ಹೊರನಡೆದಿದೆ. ಇಂದು ನಡೆದ ಇಂಗ್ಲೆಂಡ್ ಮತ್ತು ಶ್ರೀಲಂಕ ನಡುವಿನ ಪಂದ್ಯದಲ್ಲಿ ಇಂಗ್ಲೆಂಡ್ ನಾಲ್ಕು ವಿಕೆಟ್ ಗಳಿದ್ದ ಶ್ರೀಲಂಕವನ್ನ ಮಣಿಸಿತು. ಈ ಮೂಲಕ ಇಂಗ್ಲೆಂಡ್ ಗ್ರೂಪ್ 1 ರ ತಂಡದಲ್ಲಿ ಎರಡನೆಯ ಸೆಮಿಫೈನಲ್ ಸ್ಪರ್ಧಿಯಾಗಿ ಹೊರ ಹೊಮ್ಮಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿತು. ಪಾತುಮ್ ನಿಸಂಕ 67 ರನ್ ಗಳಿಸಿ ಗರಿಷ್ಠ ಸ್ಕೋರ್ ಮಾಡಿದರು. ನಿಶಾಂಕ 45 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಐದು ಸಿಕ್ಸರ್‌ಗಳನ್ನ ಬಾರಿಸಿದರು. ಇವರಲ್ಲದೆ ಭಾನುಕಾ ರಾಜಪಕ್ಸೆ 22 ಹಾಗೂ ಕುಸಾಲ್ ಮೆಂಡಿಸ್ 18 ರನ್ ಗಳಿಸಿದರು.
ಉತ್ತರವಾಗಿ ಇಂಗ್ಲೆಂಡ್ 19.4 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಅಲೆಕ್ಸ್ ಹೇಲ್ಸ್ 47 ಮತ್ತು ಬೆನ್ ಸ್ಟೋಕ್ಸ್ 42 ರನ್ ಗಳಿಸಿದರು.
ಇದರೊಂದಿಗೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಈ ಪಂದ್ಯವನ್ನು ಶ್ರೀಲಂಕಾ ತಂಡ ಗೆದ್ದಿದ್ದರೆ, ಆಸ್ಟ್ರೇಲಿಯಾ ಸೆಮಿಫೈನಲ್ ತಲುಪುತ್ತಿತ್ತು, ಆದರೆ ಹಾಗಾಗಲಿಲ್ಲ.
ಶ್ರೀಲಂಕಾದ ಗೆಲುವಿಗಾಗಿ ಶ್ರೀಲಂಕಾ ಅಭಿಮಾನಿಗಳಿಗಿಂತ ಆಸ್ಟ್ರೇಲಿಯಾದ ಅಭಿಮಾನಿಗಳು ಕಾಯುತ್ತಿದ್ದರು. ಒಂದು ಹಂತದಲ್ಲಿ ಶ್ರೀಲಂಕಾ ಗೆಲ್ಲುತ್ತದೆ ಎಂಬ ಭರವಸೆ ಶ್ರೀಲಂಕಾ ಅಭಿಮಾನಿಗಳಲ್ಲಿ ಇತ್ತು ಆದರೆ ಇಂಗ್ಲೆಂಡ್ ಬ್ಯಾಟ್ಸ್ಮನ್ ಗಳು ಆಸ್ಟ್ರೇಲಿಯಾ ಆಸೆಗೆ ತಣ್ಣೀರೆರೆಚಿದ್ದಾರೆ.
T20 World Cup 2022: England Win By 4 Wickets, Qualify For Semis








