Rajanath Singh : ‘ಭಯೋತ್ಪಾದನೆಗೆ ಯಾವುದೇ ಧರ್ಮದ ಜೊತೆಗೆ ಸಂಬಂಧ ಕಲ್ಪಿಸಬಾರದು’
ಭಯೋತ್ಪಾದನೆಗೆ ಯಾವುದೇ ಧರ್ಮದ ಜೊತೆಗೆ ಸಂಬಂಧ ಕಲ್ಪಿಸಬಾರದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ..
ಅಲ್ಲದೇ ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುವುದು ಭಯೋತ್ಪಾದನೆಗಿಂತ ಹೆಚ್ಚು ಅಪಾಯಕಾರಿ ರಾಷ್ಟ್ರೀಯತೆ ಅಥವಾ ಸಮೂಹದ ಜೊತೆ ಸಂಬಂಧ ಕಲ್ಪಿಸಬಾರದು,
ಹಿಂಸಾಚಾರ, ಯುವಕರನ್ನು ತಪ್ಪು ದಾರಿಗೆಳೆಯುವುದು ಮತ್ತು ಭಯೋತ್ಪಾದನೆಗೆ ಹಣದ ಮೂಲಕ್ಕಾಗಿ ಉಗ್ರರು ನಿಯಮಿತವಾಗಿ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಮೂಲಭೂತವಾದಿ ವಿಷಯಗಳನ್ನು ಹರಡಲು ಮತ್ತು ತಮ್ಮ ಗುರುತನ್ನು ಮರೆಮಾಚಲು ಡಾರ್ಕ್ ನೆಟ್ ಅನ್ನು ಬಳಸುತ್ತಿದ್ದಾರೆ ಎಂದು ಅಮಿತ್ ಶಾ ಹೇಳಿದರು.
ಭಯೋತ್ಪಾದನೆಯು ನಿಸ್ಸಂದೇಹವಾಗಿ, ಜಾಗತಿಕ ಶಾಂತಿ ಮತ್ತು ಭದ್ರತೆಗೆ ಅತ್ಯಂತ ಗಂಭೀರ ಬೆದರಿಕೆಯಾಗಿದೆ. ಆದರೆ ಭಯೋತ್ಪಾದನೆಗೆ ಹಣಕಾಸು ಒದಗಿಸುವುದು ಭಯೋತ್ಪಾದನೆಗಿಂತ ಹೆಚ್ಚು ಅಪಾಯಕಾರಿ ಎಂದು ನಾನು ನಂಬುತ್ತೇನೆ. ಏಕೆಂದರೆ ಭಯೋತ್ಪಾದನೆಯು ಅಂತಹ ಹಣಕಾಸು ನೆರವಿನಿಂದ ಪೋಷಿಸಲ್ಪಟ್ಟಿವೆ. ಇದಲ್ಲದೆ ಭಯೋತ್ಪಾದನೆಗೆ ಹಣಕಾಸು ವಿಶ್ವದ ರಾಷ್ಟ್ರಗಳ ಆರ್ಥಿಕತೆಯನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿದ್ದಾರೆ..








