Crime : ಬಾಂಗ್ಲಾದೇಶದಲ್ಲೂ ಹಿಂದೂ ಯುವತಿಯ ಹತ್ಯೆ.. ಪ್ರೇಯಸಿಯನ್ನ ಪೀಸ್ ಪೀಸ್ ಮಾಡಿದ ಕಿಡಿಗೇಡಿ…
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ರಾಷ್ಟ್ರ ರಾಜಧಾನಿ ದೆಹಲಿಯ ಶ್ರದ್ಧಾ ಮರ್ಡರ್ ಕೇಸ್ ನಂತೆಯೇ ಇದೀಗ ಬಾಂಗ್ಲಾದೇಶದಲ್ಲೂ ಒಂದು ಘಟನೆ ನಡೆದಿದೆ…
ಅಫ್ತಾಬ್ ನಂತೆಯೇ , ಬಾಂಗ್ಲಾದೇಶದಲ್ಲೊಬ್ಬ ವಿಕೃತ ಮನಸ್ಸಿನ ಕಿಡಿಗೇಡಿ ಹಿಂದೂ ಯುವತಿಯನ್ನ ಹತ್ಯೆಗೈದು ಪೀಸ್ ಪೀಸ್ ಮಾಡಿದ್ದಾನೆ..
ಶ್ರದ್ಧಾ ಮರ್ಡರ್ ಕೇಸ್ ದಿನೇ ದಿನೇ ಹೊಸ ತಿರುವುಗಳನ್ನ ಪಡೆಯುತ್ತಿದೆ.. ಒಂದು ಆಯಾಮದಲ್ಲಿ ಇದನ್ನ ಲವ್ ಜಿಹಾದ್ ಅಂತಲೂ ಜನರು ಅಭಿಪ್ರಾಯ ಪಟ್ಟಿದ್ದಾರೆ.. ಅಫ್ತಾಬ್ ಎಂಬ ಕಿಡಿಗೇಡಿ ತನ್ನೊಂದಿಗೆ ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದ ಶ್ರದ್ಧಾಳ ಹತ್ಯೆಗೈದು 35 ಪೀಸ್ ಗಳನ್ನ ಮಾಡಿ 18 ದಿನಗಳ ಕಾಲ ಅದನ್ನ ಹೂತು ಹಾಕಲು ತೆಗೆದುಕೊಂಡಿದ್ದ,..
ಪ್ರಸ್ತುತ ತನನ್ನ ಜೈಲಿಗಟ್ಟಲಾಗಿದೆ..
ಇಂತಹದ್ದೇ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ.. ಅಬು ಬಕರ್ ಎಂಬಾತ ಹಿಂದೂ ಯುವತಿ ಕವಿತಾ ರಾಣಿಯನ್ನು ಭೇಟಿಯಾಗಿ, ಪ್ರೀತಿಸಿ, ಬಳಿಕ ಆಕೆಯನ್ನು ಕೊಂದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ.
ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದ ಹಂತಕ ಅಬು ಬಕರ್ ನವೆಂಬರ್ 6 ರಂದು ಕೆಲಸಕ್ಕೆ ಹಾಜರಾಗಿರಲಿಲ್ಲ. ಫೋನ್ ಸಂಪರ್ಕಕ್ಕೂ ಸಿಗದಿದ್ದಾಗ ಸಾರಿಗೆ ಸಂಸ್ಥೆಯ ಮಾಲೀಕರು ಕೆಲ ಸಿಬ್ಬಂದಿಯನ್ನು ಆತನ ಬಾಡಿಗೆ ಮನೆಯ ಕಡೆ ನೋಡಿಕೊಂಡು ಬರುವಂತೆ ಹೇಳಿ ಕಳುಹಿಸಿದ್ದಾರೆ. ಆದರೆ ಅಬು ಬಕರ್ ಮನೆಗೆ ಬೀಗ ಹಾಕಿದ್ದನ್ನು ನೋಡಿ, ಆತ ನಾಪತ್ತೆಯಾಗಿರುವ ಅನುಮಾನ ವ್ಯಕ್ತವಾಗಿತ್ತು.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆತನ ಮನೆಗೆ ಬಂದು ಬಾಗಿಲನ್ನು ಒಡೆದು ನೋಡಿದ್ದಾರೆ. ಈ ವೇಳೆ ಯುವತಿಯೊಬ್ಬಳ ತಲೆ ಬುರುಡೆ ಪತ್ತೆಯಾಗಿದೆ. ಅದನ್ನು ಪಾಲಿಥಿನ್ ಚೀಲದಲ್ಲಿ ಸುತ್ತಿ ಪ್ರತ್ಯೇಕವಾಗಿ ಇಡಲಾಗಿತ್ತು. ಆಕೆಯ ಕೈಗಳನ್ನು ಕತ್ತರಿಸಿ ಎಸೆದಿದ್ದು, ಅದು ಬೇರೆಡೆ ಪತ್ತೆಯಾಗಿತ್ತು. ಬಳಿಕ ಪೊಲೀಸರು ಹತ್ಯೆಯಾದ ಯುವತಿಯನ್ನು ಕಾಳಿಪಾಟ್ ಬಾಚಾರ್ ಅವರ ಪುತ್ರಿ ಕವಿತಾ ರಾಣಿ ಎಂದು ಗುರುತಿಸಿದ್ದಾರೆ.
ಅಬು ಬಕರ್ ಮೊದಲೇ ಸಪ್ನಾ ಎಂಬ ಯುವತಿಯೊಂದಿಗೆ ಲಿವ್ ಇನ್ ರಿಲೇಶನ್ ನಲ್ಲಿ ಇದ್ದ. ನವೆಂಬರ್ 5 ರಂದು ಸಪ್ನಾ ಕೆಲಸಕ್ಕೆಂದು ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ಕವಿತಾಳನ್ನು ತನ್ನ ಬಾಡಿಗೆ ಮನೆಗೆ ಕರೆದಿದ್ದಾನೆ.
ಆದರೆ ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಕೋಪಗೊಂಡ ಅಬು ಬಕರ್ ಯುವತಿಯ ಕತ್ತು ಹಿಸುಕಿ ಸಾಯಿಸಿದ್ದಾನೆ. ಬಳಿಕ ಆಕೆಯ ರುಂಡ, ಮುಂಡವನ್ನು ಬೇರ್ಪಡಿಸಿದ್ದಾನೆ. ಕೈಗಳನ್ನು ಕತ್ತರಿಸಿ ಚರಂಡಿಯಲ್ಲಿ ಎಸೆದಿದ್ದಾನೆ. ತಲೆಯನ್ನು ಪಾಲಿಥಿನ್ ಚೀಲದಲ್ಲಿ ಸುತ್ತಿ, ಉಳಿದ ದೇಹದ ಭಾಗಗಳನ್ನು ಪೆಟ್ಟಿಗೆಯೊಂದರಲ್ಲಿ ಎಸೆದು ಪರಾರಿಯಾಗಿದ್ದಾನೆ.
ಅದೇ ದಿನ ರಾತ್ರಿ ಅಬು ಬಕರ್ ಸಪ್ನಾ ಜೊತೆಗೆ ರುಪ್ಸಾ ನದಿ ದಾಟಿ ಢಾಕಾಗೆ ತೆರಳಿದ್ದಾನೆ. ಮರುದಿನ ಕವಿತಾ ರಾಣಿಯ ಶವ ತುಂಡು ತುಂಡಾದ ಸ್ಥಿತಿಯಲ್ಲಿ ಪತ್ತೆಯಾದ ಬಳಿಕ ಪೊಲೀಸರು ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.
ನವೆಂರ್ 6ರ ರಾತ್ರಿ ಪೊಲೀಸರು ಆರೋಪಿ ಅಬು ಬಕರ್ ಇರುವ ಸ್ಥಳವನ್ನು ಪತ್ತೆಹಚ್ಚಿದ್ದಾರೆ. ಹಂತಕ ಹಾಗೂ ಆತನ ಜೊತೆಗೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಸಪ್ನಾಳನ್ನು ಕೂಡಾ ಗಾಜಿಪುರ ಜಿಲ್ಲೆಯ ಬಸನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಿದ್ದಾರೆ.








