ಸಾಮಾಜಿಕ ಜಾಲತಾಣಗಳಲ್ಲಿ ಟಿಕ್ ಟಾಕ್ ಬ್ಯಾನ್, ಬಾಯ್ ಕಟ್ ಟಿಕ್ ಟಾಕ್ ಎಂಬ ಅಭಿಯಾನಗಳು ಜೋರಾಗುತ್ತಿದ್ದು, ಚೀನಾ ಮೂಲದ ಟಿಕ್ ಟಾಕ್ ಗೆ ಸೆಡ್ಡು ಹೊಡೆಯಲು ಬಂದ ಮಿತ್ರೋ ಆಪ್ ಪಾಕಿಸ್ತಾನಕ್ಕೆ ಸೇರಿದ್ದು ಎಂಬ ಮಾತುಗಳು ಕೇಳಿಬರುತ್ತಿವೆ. ಏತನ್ಮಧ್ಯೆ ಟಿಕ್ ಟಾಕ್ ಗೆ ಟಕ್ಕರ್ ನೀಡಲು ಅಪ್ಪಟ ದೇಶಿ ಆಪ್ ಒಂದು ಫ್ಲೇ ಸ್ಟೋರ್ ನಲ್ಲಿ ರೆಡಿಯಾಗಿ ನಿಂತಿದೆ.
ಹೌದು..!
ಟಿಕ್ ಟಾಕ್ ಗೆ ಸೆಡ್ಡು ಹೊಡೆಯಲು ‘ಚಿಂಗಾರಿ’ ಹೆಸರಿನ ಮತ್ತೊಂದು ಅಪ್ಪಟ ದೇಸಿ ಆಪ್ ಫ್ಲೇ ಸ್ಟೋರ್ ನಲ್ಲಿ ರೆಡಿಯಾಗಿ ನಿಂತಿದೆ. ಅಂದಹಾಗೆ ಚಿಂಗಾರಿ ಆಪ್ ತಯಾರಿಸಿದವರು ಬೆಂಗಳೂರು ಮೂಲದ ಪ್ರೊಗ್ರಾಮರ್ ಗಳಾದ ಬಿಸ್ವತ್ಮಾ ನಾಯಕ್ ಮತ್ತು ಸಿದ್ದಾರ್ಥ್ ಗೌತಮಿನ್.
ಈ ಚಿಂಗಾರಿ ಆಪ್ ನಲ್ಲಿ ಬಳಕೆದಾರರಿಗೆ ವೀಡಿಯೊಗಳನ್ನು ಡೌನ್ಲೋಡ್ ಮಾಡಲು ಮತ್ತು ಅಪ್ಲೋಡ್ ಮಾಡಬಹುದು, ಜೊತೆಗೆ, ಸ್ನೇಹಿತರೊಂದಿಗೆ ಚಾಟ್ ಮಾಡಲು, ಹೊಸ ಜನರೊಂದಿಗೆ ವಿಷಯವನ್ನು ಹಂಚಿಕೊಳ್ಳಲು, ಫೀಡ್ ಮೂಲಕ ಬ್ರೌಸ್ ಮಾಡಲು ಕೂಡ ಅವಕಾಶವಿರುತ್ತದೆ. ಇದರ ಜೊತೆಗೆ ವಾಟ್ಸಾಪ್ ರೀತಿಯಲ್ಲಿ ವೀಡಿಯೊ, ಆಡಿಯೋ ತುಣುಕುಗಳು, ಜಿಐಎಫ್ ಸ್ಟಿಕ್ಕರ್ಗಳು ಮತ್ತು ಫೋಟೋಗಳನ್ನು ಕೂಡ ಬಳಸಿಕೊಳ್ಳಲು ಆಯ್ಕೆಗಳಿವೆ.
ಅಲ್ಲದೆ ಚಿಂಗಾರಿ ಆಪ್ ಹಿಂದಿ ಮತ್ತು ಇಂಗ್ಲಿಷ್ ಸೇರಿದಂತೆ ಇತರ ಎಂಟು ಭಾರತೀಯ ಭಾಷೆಗಳಲ್ಲಿ ವಿಷಯವನ್ನು ಬೆಂಬಲಿಸುತ್ತದೆ. ಈ ಪಟ್ಟಿಯಲ್ಲಿ ಕನ್ನಡ, ಬಂಗಾಳಿ, ಗುಜರಾತಿ, ಮರಾಠಿ, ಪಂಜಾಬಿ, ಮಲಯಾಳಂ, ತಮಿಳು ಮತ್ತು ತೆಲುಗು ಸೇರಿವೆ.
ಇನ್ನೊಂದು ಮುಖ್ಯ ಅಂಶವೆಂದರೆ ಚಿಂಗಾರಿ ಆಪ್ ವಿಡಿಯೋದ ರಚನೆಕಾರರಿಗೆ, ಅವರ ವಿಡಿಯೋ ಎಷ್ಟು ವೈರಲ್ ಆಗುತ್ತದೆ ಎಂಬುದರ ಆಧಾರದ ಮೇಲೆ ಹಣ ಪಾವತಿಸಲಾಗುತ್ತದೆ. ಚಿಂಗಾರಿ ಆಪ್ ಆಪಲ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್ ಎರಡರಲ್ಲೂ ಲಭ್ಯವಿದ್ದು, ಇದುವರೆಗೆ 1,00,000 ಬಾರಿ ಡೌನ್ ಲೋಡ್ ಆಗಿದೆ.