IND vs BAN – ಭಾರತಕ್ಕೆ ಗಾಯದ ಹೊಡೆತ; ಟೆಸ್ಟ್ ಸರಣಿಯಿಂದ ಜಡೇಜಾ ಶಮಿ ಔಟ್…
ಭಾರತ ಬಾಂಗ್ಲಾದೇಶ ಟೆಸ್ಟ್ ಸರಣಿಗೂ ಮುನ್ನ ಭಾರತಕ್ಕೆ ಆಘಾತವಾಗಿದ್ದು, ಮೊಹಮ್ಮದ್ ಶಮಿ ರವೀಂದ್ರ ಜಡೇಜಾ ಅವರು ಗಾಯದ ಕಾರಣದಿಂದ ಟೀಂ ಇಂಡಿಯಾ ತಂಡದದಿಂದ ಹೊರಬಿದ್ದಿದ್ದಾರೆ. ಅವರ ಜಾಗಕ್ಕೆ ಮುಖೇಶ್ ಕುಮಾರ್ ಮತ್ತು ಸೌರಭ್ ಕುಮಾರ್ ಅವರನ್ನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಜಡೇಜಾ ಮೊಣಕಾಲಿನ ಗಾಯದಿಂದ ಇನ್ನೂ ಚೇತರಿಸಿಕೊಳ್ಳುತ್ತಿಲ್ಲ. ಪ್ರವಾಸಕ್ಕೂ ಮುನ್ನ ಶಮಿ ಭುಜದ ಗಾಯದಿಂದ ಬಳಲುತ್ತಿದ್ದಾರೆ. ಹಾಗಾಗಿ ಭಾರತ ಎ ತಂಡದ ಭಾಗವಾಗಿರುವ ಸೌರಭ್ ಕುಮಾರ್ ಮತ್ತು ಮುಖೇಶ್ ಕುಮಾರ್ ಅವರನ್ನ ತಂಡಕ್ಕೆ ಕರೆತರಲಾಗಿದೆ ಎಂದು ಇನ್ ಸೈಡ್ ಸ್ಪೋರ್ಟ್ಸ್ ವರದಿ ಮಾಡಿದೆ.
ಮುಖೇಶ್ ಮತ್ತು ಸೌರಭ್ ಉತ್ತಮವಾಗಿ ಆಡುತ್ತಿದ್ದಾರೆ. ಇದು ಆಯ್ಕೆಗಾರರ ಕರೆ, ”ಎಂದು BCCI ಅಧಿಕಾರಿಯೊಬ್ಬರು InsideSport.IN ಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಶಮಿ ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಪುನರ್ವಸತಿ ಮುಂದುವರೆಸಿದ್ದಾರೆ. ಶಮಿ ಅನುಪಸ್ಥಿತಿಯಲ್ಲಿ ಭಾರತಕ್ಕೆ ಅನುಭವಿ ಬೌಲರ್ ಗಳ ಕೊರತೆ ಕಾಡುತ್ತಿದೆ. ಬುಮ್ರಾ ಬದಲಿಗೆ ಮೊಹಮ್ಮೊದ್ ಸಿರಾಜ್ ದಾಳಿಯನ್ನ ಮುನ್ನಡೆಸಲಿದ್ದಾರೆ. ಶಮಿ ಸ್ಥಾನಕ್ಕೆ ಬಂಗಾಳದ ಮುಖೇಶ್ ಕುಮಾರ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕೆಎಲ್ ರಾಹುಲ್, ರಿಷಬ್ ಪಂತ್, ಶ್ರೀಕರ್ ಭರತ್, ಕುಲದೀಪ್ ಯಾದವ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್..
IND vs BAN – Injury blow for India; Jadeja Shami out of Test series..








