Fifa Worldcup : ಸೆಮಿಫೈನಲ್ ಗೆ ಅರ್ಜೆಂಟಿನಾ
ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವೆನಿಸಿರುವ ಅರ್ಜೆಂಟಿನಾ ತಂಡ ಸೆಮಿಫೈನಲ್ ಪ್ರವೇಶಿಸಿದೆ. ಅರ್ಜೆಂಟಿನಾ ತಂಡ ಸೆಮಿಫೈನಲ್ನಲ್ಲಿ ಕ್ರೊವೇಷಿಯಾ ತಂಡವನ್ನು ಸೆಮಿಫೈನಲ್ ನಲ್ಲಿ ಎದುರಿಸಲಿದೆ.
ಪಂದ್ಯದ ಮೊದಲ ಅವಧಿಯ 35ನೇ ನಿಮಿಷದಲ್ಲಿ ಅರ್ಜೆಂಟಿನಾ ತಂಡದ ಮೊಲಿನಾ ಗೋಲು ಹೊಡೆದರು. ಎರಡನೆ ಅವಧಿಯ 73ನೇ ನಿಮಿಷದಲ್ಲಿ ಲಿಯೊನೆಲ್ ಮೆಸ್ಸಿ ಗೋಲು ಹೊಡೆದು ಮುನ್ನಡೆ ನೀಡಿದರು.
83ನೇ ನಿಮಿಷದಲ್ಲಿ ನೆದರ್ಲೆಂಡ್ ತಂಡದ ವೆಗ್ ಹಾರ್ಸ್ಟ್ ಗೋಲು ಹೊಡೆದು ಭರವಸೆ ಮೂಡಿಸಿದರು. ಹೆಚ್ಚುವರಿ ಸಮಯದಲ್ಲಿ (90+11 ನಿಮಿಷದಲ್ಲಿ) ನೆದರ್ಲೆಂಡ್ ತಂಡದ ವೆಗ್ ಹಾರ್ಸ್ಟ್ ಮತ್ತೆ ಗೋಲು ಹೊಡೆದು ಸಮಗೊಳಿಸಿದರು.
ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋದಾಗ ಅರ್ಜೆಂಟಿನಾ 4 ಗೋಲು ಹೊಡೆಯಿತು. ನೆದರ್ಲೆಂಡ್ ತಂಡ 3 ಗೋಲು ಹೊಡೆಯಿತು.








