Madhya Pradesh : ಕೊಳವೆ ಬಾವಿಗೆ ಬಿದ್ದಿದ್ದ 8 ವರ್ಷದ ಬಾಲಕ ಸಾವು…
ಐದು ದಿನಗಳ ಹಿಂದೆ ಮಧ್ಯಪ್ರದೇಶದ ಬೇತುಲ್‌ನಲ್ಲಿ 400 ಅಡಿಯ ಕೊಳೆವೆ ಬಾವಿಗೆ ಬಿದ್ದಿದ್ದ 8 ವರ್ಷದ ಬಾಲಕ ತನ್ಮಯ್ ಸಾಹುವನ್ನ ಸುಮಾರು 70 ಗಂಟೆಗಳ ಕಾಲ ದೀರ್ಘ ರಕ್ಷಣಾ ಕಾರ್ಯಾಚರಣೆ ನಂತರ ಶನಿವಾರ ರಕ್ಷಿಸಲಾಯಿತಾದರೂ ಆತನನ್ನ ಜೀವ ಉಳಿಸುವಲ್ಲಿ ವಿಫಲಾಗಿದೆ. ಬೋರ್‌ವೆಲ್‌ನಿಂದ ಹೊರತೆಗೆದ ಕೂಡಲೇ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬದುಕುಳಿಸಲು ಸಾಧ್ಯವಾಗಿದೆ.
ತನ್ಮಯ್ ಡಿಸೆಂಬರ್ 6 ರಂದು ಬೇತುಲ್ ಜಿಲ್ಲೆಯ ಮಾಂಡವಿ ಗ್ರಾಮದಲ್ಲಿ ಬೋರ್‌ವೆಲ್‌ಗೆ ಬಿದ್ದ, 45 ಅಡಿ ಕೆಳಗೆ ಸಿಲುಕಿದ್ದ. ಈ ಅವಘಡ ಸಂಭವಿಸಿದಾಗ ಅವರು ಜಮೀನಿನ ಬಳಿ ಆಟವಾಡುತ್ತಿದ್ದರು ಎನ್ನಲಾಗಿದೆ. 8 ವರ್ಷದ ಬಾಲಕನನ್ನು ರಕ್ಷಿಸಲು ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್‌ನ ಹಲವು ತಂಡಗಳನ್ನು ನಿಯೋಜಿಸಲಾಗಿದ್ದು, ತೀವ್ರ ಕಾರ್ಯಾಚರಣೆ ನಡೆಸಲಾಗಿದೆ.
ಬುಧವಾರ ತಡರಾತ್ರಿಯವರೆಗೂ ಕ್ಯಾಮರಾ ದೃಶ್ಯಗಳ ಮೂಲಕ ತನ್ಮಯ್ ಪ್ರತಿಕ್ರಿಯಿಸುತ್ತಿದ್ದಾರೆ ಮತ್ತು ಚಲಿಸುತ್ತಿದ್ದಾರೆ ಎಂದು ರಕ್ಷಣಾ ತಂಡಗಳು ತಿಳಿಸಿದ್ದರು. ಆನಂತರ ಪ್ರತಿಕ್ರಿಯಿಸುವುಯದನ್ನ ನಿಲ್ಲಿಸಿದ್ದಾನೆ.
Madhya Pradesh Borewell incident: 8-year-old Tanmay Sahu who fell into borewell dies








