ಅತಿ ವೇಗದ ದ್ವಿಶತಕ ಭಾರಿಸಿದ ಇಶನ್ ಕಿಶಾನ್ – 126 ಬಾಲ್ ಗೆ 200 ರನ್…
ಗಾಯಗೊಂಡ ರೋಹಿತ್ ಶರ್ಮಾ ಬದಲಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆದ ಇಶಾನ್ ಕಿಶಾನ್ ಸಿಕ್ಕ ಅವಕಾಶವನ್ನ ಬಾಚಿ ತಬ್ಬಿಕೊಂಡಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತೀ ವೇಗದ ದ್ವಿ ಶತಕ ಗಳಿಸಿದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಇಶಾನ್ ಕೇವಲ 126 ಬಾಲ್ ಗೆ 200 ರನ್ ಹೊಡೆದು ಕ್ರಿಸ್ ಗೇಲ್ ಹೆಸರಿನಲ್ಲಿದ್ದ ದಾಖಲೆಯನ್ನ ಧೂಳಿ ಪಟ ಮಾಡಿದ್ದಾರೆ. ಕ್ರಿಸ್ ಗೇಲ್ ಈ ಹಿಂದ 2014 ರಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ 138 ಬಾಲ್ ಗೆ ದ್ವಿ ಶತಕ ಗಳಿಸಿದ್ದಾರೆ.
ಮಾಜಿ ನಾಯಕ ವಿರಾಟ್ ಕೊಹ್ಲಿ ಕಿಶನ್ ಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಇವರಿಬ್ಬರ ಅಮೋಘ ಬ್ಯಾಟಿಂಗ್‌ನ ಆಧಾರದ ಮೇಲೆ ಭಾರತ 34 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 289 ರನ್ ಗಳಿಸಿದೆ.
Ishan Kishan: Ishan Kishan hit the fastest double century – 200 runs off 126 balls…








