Himachal : ನೂತನ ಮುಖ್ಯಮಂತ್ರಿಯಾಗಿ ಸುಖ್ವಿಂದರ್ ಸಿಂಗ್ ಪ್ರಮಾಣ ವಚನ…
ಹಿಮಾಚಲ ಪ್ರದೇಶದ 15 ನೇ ಮುಖ್ಯಮಂತ್ರಿಯಾಗಿ ಸುಖ್ವಿಂದರ್ ಸಿಂಗ್ ಸುಖು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಭಾನುವಾರ ಮಧ್ಯಾಹ್ನ ಶಿಮ್ಲಾದಲ್ಲಿ ನಡೆದ ಸಮಾರಂಭದಲ್ಲಿ ಮಧ್ಯಾಹ್ನ 1.50 ಕ್ಕೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅವರು ಪ್ರಮಾಣ ವಚನ ಭೋದಿಸಿದರು. ಇದೇ ವೇಳೆ ಉಪಮುಖ್ಯಮಂತ್ರಿಯಾಗಿ ಮುಖೇಶ್ ಅಗ್ನಿಹೋತ್ರಿ ಅವರು ಪ್ರಮಾಣ ವಚನ ಸ್ವೀಕರಿಸಿದರು.
ಹಿಮಾಚಲ ಸಿ ಎಂ ಪ್ರಮಾಣ ವಚನ ಸಮಾರಂಭಕ್ಕೆ ಗಾಂಧಿ, ಪ್ರಿಯಾಂಕ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉಪಸ್ಥಿತರಿದ್ದರು. ಮತ್ತೊರ್ವ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪ್ರತಿಭಾ ಸಿಂಗ್ ಸಹ ಪ್ರಮಾಣ ವಚನ ಸಮಾರಂಭಕ್ಕೆ ಹಾಜರಾಗಿದ್ದರು.
ಸುಖ್ವಿಂದರ್ ಸಿಂಗ್ ಅವರು ಸ್ವತಃ ಪ್ರತಿಭಾ ಸಿಂಗ್ ಅವರ ಮನೆಗೆ ತೆರಳಿ ಅವರನ್ನ ಅಹ್ವಾನಿಸಿದ್ದರು. ಪಕ್ಷ ಮೊದಲು ಆನಂತರ ಮುಖ್ಯಮಂತ್ರಿ ಹುದ್ದೆ ಎಂದು ಸುಖು ಅವರು ಹೇಳಿದ್ದರು. ವೇದಿಗೆ ಬಂದ ಪ್ರತಿಭಾ ಸಿಂಗ್ ರನ್ನ ರಾಹುಲ್ ಗಾಂಧಿ ಪ್ರಿಯಾಂಕ್ ಗಾಂಧಿ ಆತ್ಮೀಯವಾಗಿ ಸ್ವಾಗತಿಸಿದರು. ಪ್ರಿಯಾಂಕ ತಮ್ಮ ಪಕ್ಕದಲ್ಲಿಯೇ ಕೂರಿಸಿಕೊಂಡರು.
ಹಿಮಾಚಲದ ನೂತನ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರ ತಾಯಿ ಸಂಸಾರ್ ದೇವಿ ಕೂಡ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ವೇದಿಕೆಯ ಮುಂದೆ ಕುಳಿತಿದ್ದ ಅವರನ್ನ ರಾಹುಲ್ ವೇದಿಕೆಗೆ ಕರೆದು ಭೇಟಿಮಾಡಿದರು. ಪ್ರಿಯಾಂಕಾ ಗಾಂಧಿ ಸುಖು ಅವರ ತಾಯಿಯನ್ನ ತಬ್ಬಿ ವೇದಿಕೆ ಮೇಲೆ ಕೂರಿಸಿಕೊಂಡರು.
ಪ್ರತಿಭಾ ಸಿಂಗ್ ಅವರು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದರು ಆದರೇ ಹೈಕಮಾಂಡ್ ಸುಖು ಅವರನ್ನ ಸೂಚಿಸಿದ್ದರಿಂದ ಪ್ರತಿಭಾ ಪಕ್ಷದ ವಿರುದ್ಧ ಅಸಹನೆ ವ್ಯಕ್ತಪಡಿಸಿದ್ದರು. ತಮ್ಮ ಪುತ್ರ ವಿಕ್ರಮಾದಿತ್ಯ ಸಿಂಗ್ ಗೆ ಸಚಿವ ಸ್ಥಾನದ ಭರವಸೆ ದೊರಕಿದ ಬಳಿಕ ಅಸಂತೃಪ್ತಿಯನ್ನ ಕೊನೆಗೊಳಿಸಿಕೊಂಡು ಪ್ರಮಾಣ ವಚನಕ್ಕೆ ಆಗಮಿಸಿದ್ದಾರೆ.
Himachal: Sukhwinder Singh sworn in as new Chief Minister…








