Fifa Worldcup : ಸೆಮಿ ಫೈನಲ್ಸ್ ನಲ್ಲಿ ಅರ್ಜೆಂಟಿನಾ – ಕ್ರೊವೇಷಿಯಾ
ಫಿಫಾ ವಿಶ್ವಕಪ್ನಲ್ಲಿ ಇಂದಿನಿಂದ ಸೆಮಿಫೈನಲ್ ಆರಂಭವಾಗಲಿದ್ದ ಮೊದಲ ಸೆಮಿಫೈನಲ್ನಲ್ಲಿ 2014ರ ರನ್ನರ್ ಅಪ್ ಅರ್ಜೆಂಟಿನಾ ಹಾಗೂ 2018ರ ರನ್ನರ್ ಅಪ್ ಕ್ರೊವೇಷಿಯಾ ತಂಡಗಳು ಮುಖಾಮುಖಿಯಾಗಲಿವೆ.
ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ರೋಚಕ ಘಟ್ಟ ತಲುಪಿದೆ. ಟೂರ್ನಿಯುದ್ದಕ್ಕೂ ಈ ಬಾರಿ ಅಚ್ಚರಿ ಫಲಿತಾಂಶಗಳು ಹೊರ ಬಂದವು. 32 ತಂಡಗಳೊಂದಿಗೆ ಆರಂಭವಾದ ಟೂರ್ನಿಯಲ್ಲಿ ಇದೀಗ 4 ತಂಡಗಳು ಮಾತ್ರ ಉಳಿದುಕೊಂಡಿದ್ದು ಪ್ರಶಸ್ತಿಗಾಗಿ ಜಿದ್ದಾಜಿದ್ದಿನ ಹೋರಾಟ ನಡೆಸಲಿವೆ.
ಕಳೆದ ಎರಡೂ ಪಂದ್ಯಗಳನ್ನು ಪೆನಾಲ್ಟಿ ಮೂಲಕವೇ ಗೆದ್ದಿರುವ ಕ್ರೊವೇಷಿಯಾ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ.
ಕಳೆದ ಬಾರಿ ನಾಕೌಟ್ ಹಂತದಲ್ಲೂ ಕ್ರೋವೇಷಿಯಾ ಹೆಚ್ಚುವರಿ ಅಥವಾ ಪೆನಾಲ್ಟಿ ಮೂಲಕ ವಗೆದ್ದು ಪ್ರಶಸ್ತಿಗೆ ಸುತ್ತಿಗೆ ಬಂದಿತ್ತು. ಈ ಬಾರಿಯೂ ಇದೆ ತಂತ್ರವನ್ನು ಮುಂದುವರೆಸುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.
ಬ್ರೆಜಿಲ್, ಬೆಲ್ಜಿಯಂ ತಂಡಗಳನ್ನು ಹೊರ ಹಾಕಿದ್ದ ಕ್ರೊವೇಷಿಯಾ ಅರ್ಜೆಂಟಿನಾ ತಂಡವನ್ನು ಹೊರಹಾಕುತ್ತಾ ಅನ್ನೋದನ್ನು ಕಾದುನೋಡಬೇಕಿದೆ.
ಇನ್ನು ಅರ್ಜೆಂಟಿನಾ ತಂಡ ಕ್ರೊವೇಷಿಯಾ ವಿರುದ್ಧ ಗೆಲ್ಲುವ ನೆಚ್ಚಿನ ತಂಡವಾಗಿದೆ. ಅರ್ಜೆಂಟಿನಾ ಇದುವರೆಗೂ ವಿಶ್ವಕಪ್ನಲ್ಲಿ 5 ಸೆಮಿಫೈನಲ್ ಆಡಿದ್ದು ಇದುವರೆಗೂ ಸೆಮಿಯಲ್ಲಿ ಸೋತಿಲ್ಲ. ಇದೀಗ 6ನೇ ಬಾರಿ ಫೈನಲ್ ಪ್ರವೇಶಿಸಲು ಕಾತರವಾಗಿದೆ.








