Yadagiri : ಆಸ್ತಿ ವಿಚಾರಕ್ಕೆ ಅಣ್ಣನಿಂದ ತಮ್ಮನ ಪತ್ನಿ ಮೇಲೆ ಹಲ್ಲೆ…
ಆಸ್ತಿ ವಿಚಾರಕ್ಕೆ ಅಣ್ಣನಿಂದ ತಮ್ಮನ ಪತ್ನಿ ಮೇಲೆ ರಕ್ತ ಬರುವಂತೆ ದೊಣ್ಣೆ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿರುವ ಘಟನೆ ಯಾದಗಿರಿ ಜಿಲ್ಲೆಯ ಕಲ್ಲದೇವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಲ್ಲಿ ಬರುವ ಕಲ್ಲದೇವನಹಳ್ಳಿ ಯಲ್ಲಿ ಆಸ್ತಿಯಲ್ಲಿ ಪಾಲು ಕೇಳಿದ ಕಾರಣಕ್ಕೆ ಅಣ್ಣ ಪ್ರಕಾಶ್ ಕುಟುಂಬಸ್ಥರಿಂದ ತಮ್ಮ ಗುರುನಾಥ್ ಕುಟುಂಬದ ಮೇಲೆ ಹಲ್ಲೆ ಮಾಡಲಾಗಿದೆ.
ಗುರುನಾಥ್ ಹಾಗೂ ಗುರುನಾಥ್ ಪತ್ನಿ ನಾಗರತ್ನ ಮೇಲೆ ಹಲ್ಲೆ ಮಾಡಲಾಗಿದ್ದು, ನಾಗರತ್ನಗೆ ಮಾಡಿದ ಪ್ರಕಾಶ್ ಕುಟುಂಬಸ್ಥರು ಕಲ್ಲು,ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ.
ನಾಗರತ್ನ ತಲೆಗೆ ಗಂಭೀರ ಗಾಯ ಲಿಂಗಸುಗುರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Yadagiri : elder Brother assaults brother wife over property…








